ಪ್ರಾಣ ಒತ್ತೆ ಇಟ್ಟು ಬೆಕ್ಕನ್ನು ರಕ್ಷಿಸಿದ ರೈತ
ಗದಗ : ರೈತನೊರ್ವ ತನ್ನ ಪ್ರಾಣವನ್ನು ಒತ್ತೆ ಇಟ್ಟು ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿಕೊಂಡು ನರಳುತ್ತಿದ್ದ ಬೆಕ್ಕನ್ನು ರಕ್ಷಿಸಿರುವ ಘಟನೆ ಗದಗ ಜಿಲ್ಲೆಯ ಶಿರಹಳ್ಳಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಬೆಕ್ಕುವೊಂದು ಬಾವಿಯ ಪೊದೆಯಲ್ಲಿ ಸಿಲುಕಿಕೊಂಡಿತ್ತು. ಇದನ್ನು ಗಮಸಿದ ರೈತ ಮಹಾಂತೇಶ ಬೆಕ್ಕನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ.
ಮೂರು ದಿನಗಳಿಂದ ಬಾವಿಯಲ್ಲಿ ಬಿದ್ದಿರುವ ಬೆಕ್ಕು ಸಾವು ಬದಕಿನ ಮಧ್ಯೆ ಹೊರಾಟ ನಡೆಸುತ್ತಿತ್ತು.
ಬಾವಿಯ ಒಳಗಿರುವ ಪೊದೆಗೆ ಬಂದು ತನ್ನ ಪ್ರಾಣ ಉಳಿಸಿಕೊಂಡಿತ್ತು. ಬಾವಿಯಿಂದ ಮೇಲೆ ಬರಲಾರದೇ ಬೆಕ್ಕು ನರಳಾಡುತ್ತಿತ್ತು.
ಇದನ್ನು ಕಂಡ ರೈತ ಮಹಾಂತೇಶ್ ಪ್ರಾಣದ ಹಂಗು ತೊರೆದು ಹಗ್ಗದ ಮೂಲಕ ಬಾವಿ ಒಳಗೆ ಇಳಿದು ಬೆಕ್ಕಿನ ಪ್ರಾಣ ಉಳಿಸಿದ್ದಾರೆ.
ಈ ಎಲ್ಲಾ ದೃಶ್ಯಾವಳಿಗಳನ್ನು ಸ್ಥಳೀಯರಯ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.