upendra
5ನೇ ಬಾರಿಗೆ ಒಂದಾದ ಉಪೇಂದ್ರ – ನಾಗಣ್ಣ ಜೋಡಿ : ಐತಿಹಾಸಿಕ ಚಿತ್ರಕ್ಕೆ ತಯಾರಿ..!
ರಾಯಕೀಯದ ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಕೈಯ್ಯಲ್ಲಿ ಅನೇಕ ಸಿನಿಮಾಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರುವ ಉಪೇಂದ್ರ ಅವರ ಅಭಿಮಾನಿಗಳಿಗೆ ಇದೀಗ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಉಪ್ಪಿ ಅವರು ಇದೀಗ ಐತಿಹಾಸಿಕ ಸಿನಿಮಾ ಮಾಡಲು ಮುಂದಾಗಿದ್ದು, ಚಿತ್ರಕ್ಕೆ ‘ಕುರುಕ್ಷೇತ್ರ’ ಖ್ಯಾತಿಯ ನಿರ್ದೇಶಕ ನಾಗಣ್ಣ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.
ಈ ಸುದ್ದಿ ಖಚಿತವಾದ್ರೆ ನಾಗಣ್ಣ ಮತ್ತು ಉಪೇಂದ್ರ ಕಾಂಬಿನೇಷನ್ ಸತತ 5ನೇ ಬಾರಿಗೆ ಒಂದಾದಂತಾಗುತ್ತೆ. ಈ ಹಿಂದೆ ಕುಟುಂಬ, ಗೌರಮ್ಮ, ಗೋಕರ್ಣ, ದುಬೈ ಬಾಬುನಂತಹ ಹಿಟ್ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕಮಾಲ್ ಮಾಡಿದೆ. ಈ ಹಿಂದೆ ಪೌರಾಣಿಕ ಸಿನಿಮಾವಾದ ಕುರುಕ್ಷೇತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಾಗಣ್ಣ ಅವರು ಇದೀಗ ಮತ್ತೊಂದು ಪೌರಾಣಿಕ ಕಥೆ ಸಾರಥ್ಯ ವಹಿಸಲಿದ್ದಾರೆ ಎನ್ನಲಾಗಿದೆ. ಈ ಐತಿಹಾಸಿಕ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ ಎನ್ನಲಾಗ್ತಿದ್ದು, ಬಿಗ್ ಬಜೆಟ್ ಸಿನಿಮಾದಲ್ಲಿ ಉಪ್ಪಿ ಬಣ್ಣ ಹಚ್ಚಲಿದ್ದಾರಂತೆ.
ಮತ್ತೆ ವರ್ಕೌಟ್ ಶುರುಮಾಡಿದ ‘ಪೈಲ್ವಾನ್’ : ಟ್ವೀಟ್ ಮೂಲಕ ಸುದೀಪ್ ಮಾಹಿತಿ..!
ಇನ್ನೂ ಮೂಲಗಳ ಪ್ರಕಾರ ಚಿತ್ರದ ಸ್ಕ್ರಿಪ್ಟ್ ಕೆಲಸವೂ ಆರಂಭವಾಗಿದೆ. ಸಿನಿಮಾದಲ್ಲಿ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಮತ್ತೊಂದು ವಿಶೇಷತೆ ಎಂದ್ರೆ ಚಿತ್ರ ಒಟ್ಟು 4 ಭಾಷೆಯಲ್ಲಿ ತಯಾರಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ಎನ್ನಲಾಗ್ತಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಅಂದ್ಹಾಗೆ ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಹಂಸಲೇಖ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರ್ತಿದ್ದು, 2021ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗ್ತಿದೆ.
ಅಂದ್ಹಾಗೆ ಉಪೇಂದ್ರ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಕಬ್ಜ ಚಿತ್ರದ ಚಿರತ್ರೀಕರಣದಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರೆ. ಇದರ ಹೊರತಾಗಿ ಲಗಾಮು ಎನ್ನುವ ಉಪ್ಪಿ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದೆ. ತೆಲುಗಿನಲ್ಲಿ ವರುಣ್ ತೇಜ್ ಅಭಿನಯದ ಬಾಕ್ಸರ್ ಸಿನಿಮಾದಲ್ಲೂ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
upendra
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








