yuvarathna promo
‘ಪವರ್ ಆಫ್ ಯೂತ್’ ಪ್ರೋಮೋಗೆ ಪವರ್ ಸ್ಟಾರ್ ಫ್ಯಾನ್ಸ್ ಫಿದಾ..!
ಪವರ್ ಆಫ್ ಯೂತ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಹಾಡಿನ ಸಾಲು. ಈ ಹಾಡು ಸದ್ಯ ಯೂಟ್ಯೂಬ್ ನಲ್ಲಿ ಕನ್ನಡ ಅಷ್ಟೇ ಅಲ್ದೇ ತೆಲುಗಿನಲ್ಲೂ ಹವಾ ಸೃಷ್ಟಿ ಮಾಡಿದೆ. ಈ ಹಾಡು ನಮ್ಮ ಅಪ್ಪು ಅಭಿಮಾನಿಗಳಿಗಂತೂ ಡೆಫಿನೇಟ್ಲೀ ಗೊತ್ತೇ ಇರುತ್ತೆ. ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಹೈ ವೋಲ್ಟೇಜ್ ಸಿನಿಮಾವಾಗಿರುವ ಯುವರತ್ನ ಸಿನಿಮಾದ ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿ ರಿಲೀಸ್ ಗೆ ರೆಡಿಯಾಗಿದೆ. ಚಿತ್ರ ಯಾವಾಗ ತೆರೆ ಮೇಲೆ ಬರುತ್ತೆ ಅಂತ ಕಾದು ಕುಳಿತಿರೋ ಅಭಿಮಾನಿಗಳಿಗೆ 27 ರ ಸಂಜೆ 4.30 ಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಅಂದ್ಹಾಗೆ ಸಿನಿಮಾದ ಪ್ರೋಮೋ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತೆಲುಗಿನಲ್ಲೂ ಧೂಳೆಬ್ಬಿಸುತ್ತಿದೆ. ತೆಲುಗಿನ ಅಭಿಮಾನಿಗಳು ವೆಲ್ ಕಮ್ ಟೂ ಟಾಲಿವುಡ್ ಅಪ್ಪ ಸರ್ ಅಂತ ಕಮೆಂಟ್ ಮಾಡಿ ಪುನೀತ್ ಅವರಿಗೆ ಜೈ ಕಾರ ಹಾಕ್ತಿದ್ದಾರೆ.
ಇತ್ತ ಕನ್ನಡದಲ್ಲಿ ಹವಾ ಸೃಷ್ಟಿಸಿರುವ ಪವರ್ ಆಫ್ ಯೂತ್ ಹಾಡಿನ ಪ್ರೋಮೋಗಂತೂ ಅಪ್ಪು ಅಭಿಮಾನಿಗಳಷ್ಟೇ ಅಲ್ಲ ಕನ್ನಡ ಸಿನಿಪ್ರಿಯರೇ ದಂಗಾಗಿದ್ದಾರೆ. ಅಪ್ಪು ರಗಡ್ ಲುಕ್ ಗೆ ಫಿದಾ ಆಗಿದ್ದಾರೆ. ಅಪ್ಪು ಡ್ಯಾನ್ಸ್ ಗೆ ವಾವ್ ವಾ್ ಅಂತಿದ್ದಾರೆ. ಮ್ಯೂಸಿಕ್ ಸೌಂಡ್ ಬೀಟ್ಸ್ ಗೆ ತಾವು ನಿಂತಲ್ಲೇ ಸ್ಟೆಪ್ ಹಾಕಿರ್ತಾರೆ. ಈ ಪ್ರೋಮೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಯುವರತ್ನ ಟೀಂ ಗೆ ಎಲ್ಲೆಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ. ಇತ್ತ ಬೇರೆ ಬೇರೆ ನಟರ ಫ್ಯಾನ್ಸ್ ಗಳು ಸಹ ನಮ್ಮ ಅಪ್ಪು ಸರ್ ಗೆ ಸಪೋರ್ಟ್ ಮಾಡಿ, ಸೌತ್ ಇಂಡಸ್ಟ್ರಿಯಲ್ಲಿ ಈ ಸಾಂಗ್ ಹಿಟ್ ಆಗಬೇಕು ಅಂತೆಲ್ಲಾ ಹಾರೈಸುತ್ತಿದ್ದಾರೆ.
ಗಿಟಾರ್ ಹಿಡಿದು ಯೂತ್ ಫುಲ್ ಲುಕ್ ನಲ್ಲಿ ಭರ್ಜರಿ ಸ್ಟೆಪ್ಟ್ ಹಾಗಿ ಅಭಿಮಾನಿಗಳನ್ನ ಫಿದಾ ಗೊಳಿಸಿದ್ದಾರೆ ಪುನೀತ್ ರಾಜ್ ಕುಮಾರ್ ಅವರು. ಮತ್ತೊಂದು ಪ್ರೋಮೋದ ವಿಶೇಷತೆ ಅಂದ್ರೆ ಈ ವಿಡಿಯೋದಲ್ಲಿ ಪವರ್ ಸ್ಟಾರ್ ಜೊತೆ ಸಿನಿಮಾದ ಡೈರೆಕ್ಟರ್ ಸಂತೋಶ್ ಆನಂದ್ ರಾಮ್ ಅವರು ಸಹ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಇನ್ನೂ ಡಿಸೆಂಬರ್ 2 ಕ್ಕೆ ಪೂರ್ತಿ ಹಾಡು ರಿಲೀಸ್ ಆಗಲಿದೆ. ಹೀಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪ್ರೇಯಸಿಯ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಿರುತೆರೆ ‘ಅರ್ಜುನ’..!
ಅಂದ್ಹಾಗೆ ಕೋವಿಡ್ ಹಾವಳಿ ಇರಲಿಲ್ಲ ಅಂದ್ರೆ ಇಷ್ಟೊತ್ತಿಗೆ ಯುವರತ್ನನ ಮೂಲಕ ಅಪ್ಪು ಅವರು ಸಿಲ್ವರ್ ಸ್ಕ್ರೀನ್ ಮೇಲೆ ಅಭಿಮಾನಿಗಳಿಗೆ ದರ್ಶನ ಕೊಟ್ಟಿರಬೇಕಿತ್ತು. ಆದ್ರೆ ಕೋವಿಡ್ ನಿಂದ ಸಿನಿಮಾ ರಿಲೀಸ್ ಡಿಲೇ ಆಗ್ತಿರೋದು ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದೆ. ಆದ್ರೆ ಲಾಕ್ ಡೌನ್ ಬಳಿಕ ಸ್ಟಾರ್ ಗಳ ಸಿನಿಮಾ ಯಾವುದಾದರೂ ತೆರೆಗೆ ಬರುತ್ತಾ ಅನ್ನೋ ನಮಿರೀಕ್ಷೆಯಲ್ಲಿ
ಇರುವ ಸಿನಿಪ್ರಿಯರ ಕುತೂಹಲವನ್ನ ಪ್ರೋಮೋ ಹೆಚ್ಚಿಸಿದ್ದು, ಯಾವಾಗ ಸಿನಿಮಾ ರಿಳಿಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ.
ಇನ್ನೂ ಮಾರ್ಚ್ ನಲ್ಲೇ ಸಿನಿಮಾದಲ್ಲಿ ಅಪ್ಪು ಡೈಲಾಗ್ ಟೀಸರ್ ರಿಲೀಸ್ ಆಗಿ ಅದು ಮಿಲಿಯನ್ ಗಟ್ಟಲೇ ವೀವ್ಸ್ ಗಿಟ್ಟಿಸಿಕೊಂಡಿದೆ. ಪವರ್ ಫುಲ್ ಲುಕ್ ನಲ್ಲಿ ಅಪ್ಪು ಡೈಲಾಗ್ಸ್ ಕೇಳ್ತಿದ್ರೆ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಾಗೋದ್ರಲ್ಲಿ ಅನುಮಾನವೇ ಇಲ್ಲ. ಒಟ್ಟಾರೆ ಪ್ರೋಮೋ ಅಂತು ಸೂಪರ್ ಡೂಪರ್ ಆಗಿದದು, ಸಖತ್ ಸದ್ದು ಮಾಡ್ತಿದೆ. ಯಾರ ಬಾಯಲ್ಲಿ ನೋಡುದ್ರು ಪವರ್ ಆಫ್ ಯೂತ್ ಅನ್ನೋ ಗುಣಗಾನವೇ ಹೊರಬರುತ್ತಿದೆ. ಒಟ್ಟಾರೆ ಈ ಪ್ರೋಮೋ ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹೈ ಬಜೆಟ್ ಸಿನಿಮಾಗಳು, ಬಹುನಿರೀಕ್ಷೆಯ ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಗಾಗಿ ರೆಡಿಯಾಗಿವೆ. ಆದ್ರೆ ಕೋವಿಡ್ ನಿಂದಾಗಿ ತಡವಾಗ್ತಿದೆ. ಅಂತಹ ಸಿನಿಮಾಗಳ ಸಾಲಲ್ಲಿ ಯುವರತ್ನವೂ ಇದೆ. ಇದನ್ನ ಬಿಟ್ರೆ ಕಿಚ್ಚನ ಅಭಿನಯದ ಕೋಟಿಗೊಬ್ಬ 3 ಇರಬಹುದು, ಡಿ ಬಾಸ್ ಅಭಿನಯದ ರಾಬರ್ಟ್ ಸೇರಿ ಇನ್ನೂ ಹಲವು ಸಿನಿಮಾಗಳೂ ಸಹ ರಿಲೀಸ್ ಗೆ ರೆಡಿಯಾಗಿದ್ದು, ಶೀಘ್ರವೇ ರಿಲೀಸ್ ಆಗಲಿ ಅನ್ನೋ ಹಂಬಲದಲ್ಲಿ ಸಿನಿಪ್ರಿಯರಿದ್ದಾರೆ.
yuvarathna promo
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel