ಟ್ರಯಾಂಗಲ್ ಲವ್ ಸ್ಟೋರಿ ಕೊನೆಗೆ ಕಂಡದ್ದು ದುರಂತ ಅಂತ್ಯ..!
ಫ್ಲೋರಿಡಾ: ಆತನಿಗೆ 53 ವರ್ಷ. ಹೆಸರು ಲೂಯಿಸ್ ಏಂಜಲ್ ಕ್ವಿನೋನೆಜ್. ಈತನ ಪ್ರೀತಿ ಅವಳು.. ಅವಳಿಗೆ 61 ವರ್ಷ.. ಹೆಸರು ಏಂಜೆಲಿಕಾ ಅಕೋಸ್ಟಾ ಬ್ಲಾಂಕೊ. ಆಕೆಯ ಪ್ರೀತಿ ಮತ್ತೊಬ್ಬ.. ಆತ ಲೂಯಿಸ್ ಮಲತಂದೆ..
ಅಂದ್ಹಾಗೆ ಲೂಯಿಸ್ ತಾಯಿ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಆಕೆಯನ್ನ ನೋಡಿಕೊಳ್ಳಲು 61 ವರ್ಷದ ಏಂಜೆಲಿಕಾಳನ್ನ ನೇಮಕ ಮಾಡಿಕೊಂಡಿದ್ದ ಲೂಯಿಸ್. ಕ್ರಮೇಣ ಆಕೆಯ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದ. ಆದರೆ ಏಂಜಲಿಕಾ ಲೂಯಿಸ್ ಮಲತಂದೆಯ ಜೊತೆಗೆ ಪ್ರೀತಿಯ ಸಂಬಂಧ ಹೊಂದಿದ್ದಳು. ಆದ್ರೆ ಈ ವಿಚಾರ ಲೂಯಿಸ್ ಗೆ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದು ಮತಿ ಕಳೆದುಕೊಂಡು ಆತ ಮಾಡಿದ ಕೆಲಸ ನಿಜಕ್ಕೂ ಆಘಾತಕಾರಿ.
ಪ್ರೇಯಸಿಗೆ ಆತ್ಮಹತ್ಯೆಗೆ ಐಡಿಯಾ ಕೊಟ್ಟ ಬಾಯ್ ಫ್ರೆಂಡ್ : ಮುಂದೆ ಆಗಿದ್ದೇನು ಗೊತ್ತಾ..?
ತನ್ನ ಪ್ರೀತಿ ಏಂಜಲಿಕಾ ಮಲತಂದೆಯನ್ನ ಪ್ರೀತಿಸುತ್ತಿರುವ ವಿಚಾರ ಗೊತ್ತಾಗ್ತಿದ್ದಂತೆ ವಿವೇಕ ಕಳೆದುಕೊಂಡಿದ್ದ ಲೂಯಿಸ್. ಇದೇ ಸಿಟ್ಟಲ್ಲೇ ಕಂಠ ಪೂರ್ತಿ ಕುಡಿದು ಮನೆಗೆ ನುಗ್ಗಿದ್ದ ಲೂಯಿಸ್ ಏಂಜಲಿಕಾ ಮೇಲೆ ಏಕಾಏಕಿ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ್ದಾನೆ. ಸದ್ಯ ಏಂಜಲಿಕಾ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟಾರೆ ಪ್ರತಿ ತ್ರಿಕೋನ ಲವ್ ಸ್ಟೋರಿಯ ಎಂಡಿಂಗ್ ಸ್ಯಾಡ್ ಆಗಿಯೇ ಇರುತ್ತೆ. ಯಾರೋ ಒಬ್ಬರು ನೋವು ಅನುಭವಿಸಲೇ ಬೇಕಾಗುತ್ತೆ. ಆದ್ರೆ ಈ ಪ್ರಕರಣದ ಅಂತ್ಯ ನಿಜಕ್ಕೂ ದುರಂತವೇ ಸರಿ.
ಹೆಂಡತಿ ಜೊತೆ ಜಗಳ: ಕೋಪ ಕಡಿಮೆ ಮಾಡಿಕೊಳ್ಳಲು ಈ ಭೂಪ ಮಾಡಿದ್ದೇನು ಗೊತ್ತಾ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








