ಕೋಲಾರಕ್ಕೆ ಬಂದ್ರೆ ಕೃಷ್ಣಬೈರೇಗೌಡರಿಗೆ ಆಗೋ ಲಾಭಗಳೇನು..?
ಕೃಷ್ಣ ಬೈರೇಗೌಡ..! ರಾಜ್ಯ ಕಾಂಗ್ರೆಸ್ ನ ಯಂಗ್ ಲೀಡರ್. ಶೋಕಿ ರಾಜಕಾರಣಿಗಳ ಮಧ್ಯೆ ಸಿಂಪಲ್ ಆಗಿ ಶೈನ್ ಆಗೋ ಸರಳತೆಯ ಸಾಹುಕಾರ. ಕೋಲಾರದಿಂದ ವಲಸೆ ಬಂದು ಬ್ಯಾಟರಾಯನ ಪುರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಬಾರಿಸಿದ ಕೀರ್ತಿ ಕೃಷ್ಣ ಬೈರೇಗೌಡರದ್ದು. 2008, 2013, 2018 ರ ವಿಧಾನ ಸಭಾ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡ ಬ್ಯಾಟರಾಯನ ಪುರ ಕ್ಷೇತ್ರದಿಂದ ಗೆದ್ದು ಹಲವಾರು ಕೆಲಸಗಳನ್ನು ಮಾಡಿ ಜನ ಮನ್ನಣೆ ಗಳಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಾಗೂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಕೃಷ್ಣಬೈರೇಗೌಡರು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಆದ್ರೆ ಕೃಷ್ಣಬೈರೇಗೌಡರನ್ನು ಮೊದಲಿಗೆ ಕೈ ಹಿಡಿದಿದ್ದು, ಕೋಲಾರದ ವೇಮಗಲ್ ಮಂದಿ. ತಂದೆ ಬೈರೇಗೌಡರ ನಿಧನ ಬಳಿಕ ಕೃಷ್ಣಬೈರೇಗೌಡರು ರಾಜಕೀಯಕ್ಕೆ ಪ್ರವೇಶ ಮಾಡಿದ್ರು. ವೇಮಗಲ್ ಉಪಚುನಾವಣೆಯಲ್ಲಿ ಪ್ರಗತಿಪರ ಜನತಾದಳದಿಂದ ಕಣಕ್ಕಿಳಿದಿದ್ದ ಕೃಷ್ಣಬೈರೇಗೌಡರನ್ನು ವೇಮಗಲ್ ಜನರು ಅಪ್ಪಿತಬ್ಬಿಕೊಂಡರು.
ಬಳಿಕ 2004ರಲ್ಲಿ ಪ್ರಗತಿಪರ ಜನತಾದಳ, ಕಾಂಗ್ರೆಸ್ ನಲ್ಲಿ ವಿಲೀನವಾಯ್ತು. 2004 ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣಬೈರೇಗೌಡ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಇನ್ನು 2008ರಲ್ಲಿ ಕ್ಷೇತ್ರ ಮರುವಿಂಗಡಣೆ ವೇಳೆ ವೇಮಗಲ್ ವಿಧಾನಸಭಾ ಕ್ಷೇತ್ರ, ಕೋಲಾರಕ್ಕೆ ಸೇರಿಕೊಳ್ತು. ಆಗ ಕೃಷ್ಣಬೈರೇಗೌಡರು ಬೆಂಗಳೂರಿನ ಬ್ಯಾಟರಾಯನ ಪುರಕ್ಕೆ ವಲಸೆ ಬಂದ್ರು, ಹಾಗೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ರು. ಮುಂದುವರಿದು ಸತತ ಮೂರು ಬಾರಿ ಬ್ಯಾಟರಾಯನಪುರ ಕ್ಷೇತ್ರದಿಂದ ಸ್ಪರ್ಧಿಸಿ ಕೃಷ್ಣಬೈರೇಗೌಡ ಗೆಲುವಿನ ನಗೆ ಬೀರಿದ್ದಾರೆ.
ಈ ಮಧ್ಯೆ ಅವರು 2009ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ್ರು. ಇದಾದ ಬಳಿಕ 2019ರ ಲೋಕ ಸಮರದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ನಿಂತು ಪರಾಭವಗೊಂಡ್ರು.
ಇದೀಗ ಕೃಷ್ಣಬೈರೇಗೌಡರು ಒಂದು ಪ್ಲಾನ್ ಮಾಡಿಕೊಂಡಿದ್ದು, ಮತ್ತೆ ತವರಿನತ್ತ ಅಂದ್ರೆ ಕೋಲಾರಕ್ಕೆ ಹೋಗಲು ಇಚ್ಛಿಸಿದ್ದಾರೆ ಅಂತ ಹೇಳಲಾಗುತ್ತಿದೆ..
ಹಾಗಾದ್ರೆ ಕೃಷ್ಣಬೈರೇಗೌಡರ “ಮತ್ತೆ ಕೋಲಾರಕ್ಕೆ ಹೋಗಬೇಕು” ಅನ್ನೋ ಪ್ಲಾನ್ ಹಿಂದೆ ಇರುವ ತಂತ್ರವೇನು..?
ರಾಜಕೀಯ ನಿವೃತ್ತಿ ಸುಳ್ಳು, ವದಂತಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೆಂಡಾಮಂಡಲ
ಕೃಷ್ಣ ಬೈರೇಗೌಡರು ಕೋಲಾರಕ್ಕೆ ಹೋದ್ರೆ ಅವರಿಗೆ ಆಗುವ ಲಾಭಗಳೇನು ಅಂತಾ ನೋಡೋದಾದ್ರೆ..
ಕೃಷ್ಣಬೈರೇಗೌಡರು ಬ್ಯಾಟರಾಯನಪುರದಿಂದ ಮತ್ತೆ ಕೋಲಾರಕ್ಕೆ ಹೋದ್ರೆ ತವರಿನ ಬಲ ಇರುತ್ತೆ. ತಂದೆ ಬೈರೇಗೌಡರ ಹೆಸರು ಜೊತೆಯಲ್ಲಿರುವುದರಿಂದ ಅವರ ಬೆಂಬಲಗರ ತಾಕತ್ತು ಕೃಷ್ಣಬೈರೇಗೌಡರಿಗೆ ಸಿಗಲಿದೆ. ಅಂದ್ರೆ ವೇಮಗಲ್ ಕ್ಷೇತ್ರದಿಂದ ಐದು ಬಾರಿ ಗೆದ್ದು ಜನ ನಾಯಕರಾಗಿ ಗುರುತಿಸಿಕೊಂಡಿದ್ದ ಬೈರೇಗೌಡರ ಅಭಿಮಾನಿಗರು ಕೃಷ್ಣಬೈರೇಗೌಡ ಹಿಂದೆ ನಿಲ್ಲಲಿದ್ದಾರೆ.
ಎಲ್ಲವುದಕ್ಕೂ ಮುಖ್ಯವಾಗಿ ಕೋಲಾರದಲ್ಲಿ ಕೃಷ್ಣಬೈರೇಗೌಡರ ಗೆಲುವು ಕೇಕ್ ವಾಕ್ ಆಗಲಿದೆ. ಜಿಲ್ಲೆಯಲ್ಲಿ ಒಕ್ಕಲಿಗರ ಮತದಾರರ ಸಂಖ್ಯೆ ಹೆಚ್ಚಿದೆ. ಕಳೆದ ಕೆಲ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಕುರುಬ ಮಧ್ಯೆ ಫೈಟ್ ನಡೀತಿದೆ. ಒಂದು ವೇಳೆ ಕೃಷ್ಣಬೈರೇಗೌಡರು ಕೋಲಾರದಲ್ಲಿ ಸ್ಪರ್ಧಿಸಿದ್ರೆ ಒಕ್ಕಲಿಗ ಮತದಾರರು ನೂರಕ್ಕೆ ನೂರರಷ್ಟು ಅವರನ್ನೇ ಬೆಂಬಲಿಸಲಿದ್ದಾರೆ. ಇನ್ನ ಮುಸ್ಲಿಂ, ಎಸ್ ಸಿ, ಎಸ್ ಟಿ ಮತಗಳು ಚುನಾವಣೆಯಲ್ಲಿ ನಿರ್ಣಾಯಕವಾಗಿದ್ದು, ಇವರೂ ಕೂಡ ಕೃಷ್ಣಬೈರೇಗೌಡರ ಪರ ನಿಲ್ಲಲಿದ್ದಾರೆ. ಏಕೆಂದ್ರೆ ಕೋಲಾರದ ವೇಮಗಲ್ ಭಾಗದಲ್ಲಿ ಬೈರೇಗೌಡ ಅನ್ನೋ ಹೆಸರಿಗಿರುವ ತಾಕತ್ತದು. ಹಾಗೇ ಅವರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು. ಇನ್ನೊಂದು ವಿಚಾರವೆಂದರೆ ಕೋಲಾರದ ಬಹುತೇಕ ಜನರಿಗೆ ಕೃಷ್ಣಬೈರೇಗೌಡ ಗೊತ್ತು. ಇದು ಅವರ ಗೆಲುವಿಗೆ ಕಾರಣವಾಗಬಹುದು.
ವರ್ತೂರು ಪ್ರಕಾಶ್ ಕಾಂಗ್ರೆಸ್‍ಗೆ ಸೇರಿಸಿಕೊಳ್ಳಲ್ಲ: ಡಿ.ಕೆ ಶಿವಕುಮಾರ್ ಸ್ಪಷ್ಟನೆ
ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಂತ್ರಿ ಆಗೋದು ಕಷ್ಟಕರವಾಗಲ್ಲ. ಹೇಗೆಂದ್ರೆ ಸದ್ಯ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಕಡೆ ಜಮೀರ್, ನಲ್ಪಾಡ್, ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ ಈಗಾಗಲೇ ಶಾಸಕಾರಿದ್ದಾರೆ. ಕೃಷ್ಣಬೈರೇಗೌಡರೂ ಕೂಡ ಬ್ಯಾಟರಾಯನ ಪುರದಿಂದ ಗೆದ್ರೆ, ಸಂಪುಟ ಸೇರೋದು ಕಷ್ಟ. ಅದೇ ಕೋಲಾರದಿಂದ ಸ್ಪರ್ಧಿಸಿ ಗೆದ್ದರೇ ಪ್ರದೇಶವಾರು, ಜಾತಿಯಾಧಾರದ ಮೇಲೆ ಸಂಪುಟ ಸೇರಬಹುದು.
ಹಾಗೇ ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕತ್ವ ಅವರಿಗೆ ಸಿಗಬಹುದು. ಈಗಾಗಿ ಕೋಲಾರಕ್ಕೆ ಬಂದ್ರೆ ಲಾಭ ನಿಶ್ಚಿತ ಎಂದು ಅರಿತಿರುವ ಕೃಷ್ಣ ಬೈರೇಗೌಡರು ತವರಿನತ್ತ ಹೊರಡಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಗುಸು ಗುಸು ಶುರುವಾಗಿದೆ.
ಇನ್ನು ಕೋಲಾರದ ವಿಚಾರಕ್ಕೆ ಬಂದ್ರೆ ಸದ್ಯ ಕೋಲಾರದಲ್ಲಿ ಕಾಂಗ್ರೆಸ್ ನ ಬುಡ ಅಲುಗಾಡುತ್ತಿದೆ. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಿಸಿದೆ. ಇದಕ್ಕೆ ಮುಖ್ಯ ಕಾರಣ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲ ನಾಯಕರು ಇಲ್ಲದೇ ಇರೋದು. ಒಂದು ವೇಳೆ ಕೃಷ್ಣಬೈರೇಗೌಡ ಕೋಲಾರಕ್ಕೆ ಹೋದ್ರೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಬೂಸ್ಟ್ ಸಿಕ್ಕಂತಾಗುತ್ತದೆ. ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತಷ್ಟು ಗಟ್ಟಿಯಾಗಲಿದೆ.
ಒಟ್ಟಾರೆ ರಾಜ್ಯದಲ್ಲಿ ಸಜ್ಜನ, ವಿದ್ಯಾವಂತ ರಾಜಕಾರಣಿ ಎಂದೇ ಬಿಂಬಿತವಾಗಿರುವ ಕೃಷ್ಣಬೈರೇಗೌಡರು ಮತ್ತೆ ಕೋಲಾರದತ್ತ ಮುಖ ಮಾಡ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ..
ಮಾಧ್ಯಮದವರಿಗೆ ಶಿಕ್ಷೆಯಾಕಿಲ್ಲ : ರಮೇಶ್ ಕುಮಾರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel