ಡಿ.17ರಂದು ಸಿಎಂಎಸ್ 01 ಸಂವಹನ ಉಪಗ್ರಹ ಉಡಾವಣೆ
ಬೆಂಗಳೂರು : ಇದೇ ತಿಂಗಳ 17 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ – ಸಿ50 ಉಡಾವಣಾ ವಾಹಕವು ಸಂವಹನ ಉಪಗ್ರಹವನ್ನು (ಸಿಎಂಎಸ್-01) ಉಡಾವಣೆ ಮಾಡಲಿದೆ.
ಡಿಸೆಂಬರ್ 17 ರಂದು ಮಧ್ಯಾಹ್ನ 3:41 ಸಮಯಕ್ಕೆ ಸರಿಯಾಗಿ ಎಸ್ಡಿಎಸ್ಸಿಯ ಶಾರ್ನ 2ನೇ ಲಾಂಚ್ ಪ್ಯಾಡ್ನಿಂದ (ಎಸ್ಎಲ್ಪಿ) ಈ ಉಪಗ್ರಹ ಉಡಾವಣೆ ಆಗಲಿದೆ.
ಇದು ಪಿಎಸ್ಎಲ್ವಿಯ 52ನೇ ಉಪಗ್ರಹವಾಗಿದ್ದು ಸಿಎಂಎಸ್-01 ಎಂಬುದು ಭಾರತದ 42ನೇ ಸಂವಹನ ಉಪಗ್ರಹ ಆಗಿದೆ.
ಪುಣೆ – ಪ್ರತಿ ಕಿ.ಮೀ.ಗೆ ₹ 4 ದರದಲ್ಲಿ ಇ – ಬೈಕು ಬಾಡಿಗೆ ಯೋಜನೆ
ಇನ್ನು ಸಿಎಂಎಸ್-01 ಉಪಗ್ರಹ ಕಕ್ಷೆಯ ವಿಸ್ತೃತ-ಸಿ ಬ್ಯಾಂಡ್ನ ವ್ಯಾಪ್ತಿಗೆ ಬರುವ ಪ್ರದೇಶಗಳಿಗೆ ತರಂಗಗಳ ಸೇವೆ ಒದಗಿಸಲು ಕಲ್ಪಿಸಲಾದ ಸಂವಹನ ಉಪಗ್ರಹವಾಗಿದೆ.
ಅದರ ವ್ಯಾಪ್ತಿಯಲ್ಲಿ ಭಾರತದ ಮುಖ್ಯ ಭೂ ಪ್ರದೇಶಗಳು, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳು ಬರಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel