ಅಯ್ಯೋ ಮದುವೆಯಾಗಿ ತಪ್ಪು ಮಾಡಿದೆ… ನಾನು ದಿವಾಳೆಯಾದೆ : ರಾಖಿ ಸಾವಂತ್
ಸದಾ ವಿವಾದಗಳಿಂದಲೇ ಅರೆ ಬರೆ ಬಟ್ಟೆ ತೊಟ್ಟ ಫೋಟೋಗಳನ್ನ ಸಾಮಾಜಿಕ ಜಾಲತಣಗಳಲ್ಲಿ ಶೇರ್ ಮಾಡುತ್ತಾ ತಮ್ಮದೇ ಆದದ ಇಮೇಜ್ ಹೊಂದಿರುವ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್. ಅದ್ರಲ್ಲೂ ಆಗಾಗ ಮದುವೆ ವಿಚಾರದಲ್ಲಿ ಸುದ್ದಿಯಲ್ಲೇ ಇರುವ ರಾಖಿ ಇದೀಗ ಮತ್ತೊಮ್ಮೆ ಇದೇ ವಿಚಾರವಾಗಿ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ, ಟೀಕೆಗೂ ಗುರಿಯಾಗಿದೆ.
ಹೌದು ಮದುವೆಯಾದ ನಂತರದ ದುರಾದೃಷ್ಟಕರ ಬದುಕಿನ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರೋ ರಾಖಿ ನಾನು ಮದುವೆಯಾಗಿ ತಪ್ಪು ಮಾಡಿಬಿಟ್ಟೆ. ತಪ್ಪಿನ ಪ್ರತಿಫಲವನ್ನ ಈಗ ಅನುಭವಿಸುತ್ತಿದ್ದೇನೆ ಎಂದು ತನ್ನ ಗಂಡನ ವಿರುದ್ಧ ಹರಿಹಾಯ್ದಿದ್ಧಾರೆ.
ಅಂದ್ಹಾಗೆ ರಾಖಿ ಏನ್ ಹೇಳ್ತಾರೆ ಗೊತ್ತಾ.. ರಾಖಿ ಪತಿ ಬ್ರಿಟನ್ ನಲ್ಲಿದ್ದಾರಂತೆ. ಆಕೆಯ ಪತಿಗೆ ಸಮಾಜದ ಮುಂದೆ ಬರಲು ಇಷ್ಟವಿಲ್ಲವಂತೆ. ಆತ ಭಾರತಕ್ಕೆ ಬಂದೇ 1 ವರ್ಷವಾಯಿತಂತೆ. ರಾಖಿ ಆತನನ್ನ ನೋಡಿ 1 ವರ್ಷವಾಗಿದೆಯಂತೆ. ಅಷ್ಟಕ್ಕೂ ಇಷ್ಟೆಲ್ಲಾ ದೂರುಗಳನ್ನ ಮಾಡಿರೋ ರಾಖಿ ಮದುವೆಯಾದ ಅಸಲಿ ಕಾರಣವನ್ನೂ ಸಹ ಬಿಚ್ಚಿಟ್ಟಿದ್ದಾರೆ. ಶ್ರೀಮಂತ ವ್ಯಕ್ತಿಯನ್ನು ಮದುವೆಯಾದರೆ ನನ್ನ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ಕಾರಣಕ್ಕೆ ಶ್ರೀಮಂತ ವ್ಯಕ್ತಿಯನ್ನು ಮದುವೆಯಾದೆ, ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ. ಮದುವೆಯಾಗಿ ನಾನು ತಪ್ಪು ಮಾಡಿದೆ. ಆ ವ್ಯಕ್ತಿಯನ್ನು ನಾನು ಮದುವೆ ಆಗಬಾರದಿತ್ತು ಎಂದು ಬೇಸರ ಹಂಚಿಕೊಂಡಿದ್ದಾರೆ.
‘ಡರ್ಟಿ ಪಿಕ್ಚರ್’ ಖ್ಯಾತಿಯ ಆರ್ಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ..!
ಅಷ್ಟೇ ಅಲ್ಲ ಆ ವ್ಯಕ್ತಿಯನ್ನ ಮದುವೆಯಾಗಿ ಆರ್ಥಿಕವಾಗಿಯೂ ದಿವಾಳಿಯಾಗಿದ್ದಾರಂತೆ ರಾಖಿ ಸಾವಂತ್. ಹೌದು ಮಾತು ಮುಂದುವರೆಸಿದ ರಾಖಿ ನನ್ನ ಕುಟುಂಬದ ಜವಾಬ್ದಾರಿಯನ್ನು ನಾನೇ ಹೊರುತ್ತಿದ್ದೇನೆ. ನನ್ನ ಬಳಿ ಇರುವ ಹಣವೆಲ್ಲಾ ಖಾಲಿ ಆಗಿದೆ. ನಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದಿದ್ದಾರೆ. ನನನ್ನ ಜೀವನದ ಮೊದಲನೇ ತಪ್ಪು ಶಿಕ್ಷಣ ಪಡೆಯದೇ ಇರುವುದು. 2ನೇಯ ತಪ್ಪು ಮದುವೆಯಾಗಿದ್ದು ಎಂದಿದ್ದಾರೆ.
ಅಷ್ಟಕ್ಕೂ ಮದುವೆ ಕಥೆ ಹೇಳೋದಕ್ಕೂ ಮುನ್ನ ರಾಖಿ ಸಾವಂತ್ ಸೀಸನ್ 14 ರ ಬಿಗ್ ಬಾಸ್ ಮನೆಗೆ ಚಾಲೆಂಜರ್ ಆಗಿ ಎಂಟ್ರಿಯಾಗ್ತಿದ್ದಾರೆ. ಇದೇ ವಿಚಾರವಾಗಿ ಕೇಳಿದ ಪ್ರಶ್ನೆಗೆ ತಮ್ಮ ಮದುವೆ ಪುರಾಣ ಬಿಚ್ಚಿಟ್ಟಿದ್ದಾರೆ. ಇನ್ನೂ ಹಿಂದಿ ಬಿಗ್ ಬಾಸ್ ನ ಮೊದಲ ಸೀಸನ್ ನಲ್ಲಿ ರಾಖಿ ಸ್ಪರ್ಧಿಯಾಗಿದ್ದರು.
ಒಟ್ಟಾರೆ 2019 ರಲ್ಲಿ ರಿತೇಶ್ ಎಂಬ ಎನ್ ಆರ್ ಐ ಅನ್ನು ಮದುವೆ ಆಗಿರುವುದಾಗಿ ಘೋಷಿಸಿದ್ದ ರಾಖಿ ಈವರೆಗೂ ಆತನ ಫೋಟೋವನ್ನ ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಹೀಗಾಗಿ ರಾಖಿ ಸಾವಂತ್ ತಮ್ಮ ಚಾಳಿಯಂತೆಯೇ ಸುಮ್ಮ ಸುಮ್ಮನೆ ಸುದ್ದಿಯಲ್ಲಿರೋದಕ್ಕೆ ಹೀಗೆಲ್ಲಾ ಹೇಳುತ್ತಿದ್ದಾರಾ. ನಿಜವಾಲೂ ಮದುವೆಯಾಗಿದ್ಯಾ, ಇಲ್ವಾ. ಇದೆಲ್ಲಾ ಬರಿ ಡ್ರಾಮಾನಾ, ನೌಂಟಂಕಿನಾ ಎಂಬ ಚರ್ಚೆಗಳು ನೆಟಿಜನ್ ವಲಯದಲ್ಲಿ ಆಗಾಗ ಚರ್ಚೆಯಲ್ಲೇ ಇರುತ್ತೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel