ದೇಶದಲ್ಲಿ 1 ಕೋಟಿ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ (coronavirus)
ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 25,153 ಸೋಂಕಿತರು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1 ಕೋಟಿಯ ಗಡಿ ದಾಟಿದೆ.
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 25,153 ಕೊರೊನಾ ಕೇಸ್ ಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 347 ಸಾವಿನ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 1,00,04,599ಕ್ಕೆ ಸಾವಿನ ಸಂಖ್ಯೆ 1,45,136ಕ್ಕೇರಿದೆ.
ನಿತ್ಯಾನಂದನಿಂದ ಕೈಲಾಸಕ್ಕೆ ಭೇಟಿ ನೀಡಲು ಫ್ರೀ ವೀಸಾ, ಊಟ ಮತ್ತು ವಸತಿ ಅಫರ್
ಇದುವರೆಗೆ 95,50,712 ಜನ ಕೊರೊನಾದಿಂದ ಚೇತರಿಸಿಕೊಂಡಿದ್ದು, 3,08,751 ಸಕ್ರಿಯ ಪ್ರಕರಣಗಳು ದೇಶದಲ್ಲಿವೆ. ಇನ್ನು ಡಿಸೆಂಬರ್ 18 ರವರೆಗೆ 16,00,90,514 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel