ಕೇವಲ 10 ರೂಪಾಯಿಗೆ ಚಿಕಿತ್ಸೆ : ಯುವ ವೈದ್ಯೆ ಕಾರ್ಯಕ್ಕೆ ಭಾರಿ ಮೆಚ್ಚುಗೆ
ಹೈದರಾಬಾದ್ : ವೈದ್ಯ ಸೇವೆಯನ್ನು ವ್ಯಾಪಾರವನ್ನಾಗಿಸಿಕೊಂಡು ಬಡವರ ರಕ್ತ ಹೀರುವ ಇಂತಹ ಸಮಾಜದಲ್ಲಿ ಹೈದರಾಬಾದ್ ನ ಯುವ ವೈದ್ಯೆಯೊಬ್ಬರು ಕೇವಲ 10 ರೂಪಾಯಿಗೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಕೋರ್ಸ್ ಮುಗಿಸಿದ ಡಾ ನೂರ್ ಪರ್ವೀನಾ ಅನ್ನೋರು ಬಡಕುಟುಂಬಗಳಿಗೆ ವೈದ್ಯಕೀಯ ಸೇವೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಪ್ರತಿ ರೋಗಿಗೆ ಕೇವಲ 10 ರೂಪಾಯಿ ಚಾರ್ಜ್ ಮಾಡುವ ಮೂಲಕ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ.
ವಿಜಯವಾಡದ ಮಧ್ಯಮವರ್ಗ ಕುಟುಂಬವೊಂದರಿಂದ ಬಂದಿರುವ ಡಾ.ಪರ್ವೀನ್ ಮೆರಿಟ್ ಆಧಾರದಲ್ಲಿ ಮೆಡಿಕಲ್ ಸೀಟು ಪಡೆದು ಇದೀಗ ವೈದ್ಯೆಯಾಗಿ ಬಡವರ ಸೇವೆಗೆ ತಮ್ಮ ಜೀವನ ಮುಡಿಪಾಗಿಸಿದ್ದಾರೆ..
“ಬಡವರಿಗೆ ಸಹಾಯ ಮಾಡಲೆಂದೇ ಕಡಪ್ಪಾದಲ್ಲಿ ಹೆಚ್ಚಾಗಿ ಬಡ ಜನರೇ ವಾಸಿಸುವ ಸ್ಥಳದಲ್ಲಿ ನಾನು ಉದ್ದೇಶಪೂರ್ವಕವಾಗಿ ನನ್ನ ಕ್ಲಿನಿಕ್ ತೆರೆದಿದ್ದೇನೆ. ನನ್ನ ಹೆತ್ತವರಿಗೆ ಕೂಡ ಹೇಳದೆ ಇಲ್ಲಿ ಕ್ಲಿನಿಕ್ ಆರಂಭಿಸಿದೆ.
ಈಗ ಅವರು ನನ್ನ ಉದ್ದೇಶ ತಿಳಿದು ಸಂತಸ ಪಟ್ಟಿದ್ದಾರೆ ಹಾಗೂ ನನ್ನನ್ನು ಆಶೀರ್ವದಿಸಿದ್ದಾರೆ,” ಎಂದು ಡಾ ಪರ್ವೀನ್ ಹೇಳುತ್ತಾರೆ.
ಇನ್ನು ಹೊರರೋಗಿಗಳಿಂದ ರೂ 10 ಪಡೆಯುವ ಡಾ ಪರ್ವೀನ್, ಒಳರೋಗಿಗಳಿಗೆ ಕೇವಲ ರೂ 50 ಶುಲ್ಕ ವಿಧಿಸುತ್ತಾರೆ. ಪ್ರತಿ ದಿನ ಅವರ ಕ್ಲಿನಿಕ್ ಗೆ ಸುಮಾರು 40 ರೋಗಿಗಳು ಆಗಮಿಸುತ್ತಾರೆ.
ಅಂದಹಾಗೆ ಪರ್ವೀನಾ ಅವರು ಎರಡು ಸಂಘಟನೆಗಳನ್ನೂ ಸ್ಥಾಪಿಸಿದ್ದಾರೆ. ಆ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









