ವಿಷ್ಣು ಪ್ರತಿಮೆ ಧ್ವಂಸ | ಪಾಪಿಗಳಿಗೆ ತಕ್ಕ ಪಾಠಕಲಿಸಿ ಎಂದ ಜಗ್ಗಣ್ಣ
ಬೆಂಗಳೂರು : ಸಾಹಸಸಿಂಹ ವಿಷ್ಟುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕುರಿತಾಗಿ ನವರಸ ನಾಯಕ ಜಗ್ಗೇಶ್ ಅವರು ತಮ್ಮದೇಯಾದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಬೇಸರ ಹೊರಹಾಕಿದ್ದಾರೆ. ಕನ್ನಡಿಗರನ್ನ 45ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ? ಇದು ಕನ್ನಡಕ್ಕೆ ಮಾಡಿದ ಅವಮಾನ ಎಂದು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ.
ಜಗ್ಗೇಶ್ ತಮ್ಮ ಟ್ವೀಟ್ ನಲ್ಲಿ…
ಇಷ್ಟೇನಾ ಕನ್ನಡಕ್ಕೆ ದುಡಿದು ಕಣ್ಮರೆಯಾದ ಕಲಾವಿದರ ಹಣೆಬರಹ!ತುಂಬ ದುಃಖವಾಯಿತು!
ಎಲ್ಲಿ ಹೋಯಿತು ಚಪ್ಪಾಳೆ ಸದ್ದು? ಎಲ್ಲಿ ಹೋಯಿತು ಬದುಕಿದ್ದಾಗ ನೋಡಲು ನಿಂತ ಅಭಿಮಾನ? ಎಲ್ಲಿ ಹೋಯಿತು ಇವನಮ್ಮವ ಇವನಮ್ಮವ ಎಂದ ಮನಗಳು? ಇದು ಕನ್ನಡಕ್ಕೆ ಮಾಡಿದ ಅವಮಾನ!ಒಳ್ಳೆಯ ಲಕ್ಷಣ ಅಲ್ಲ! ಬದಲಾಗಿ!
ಯಾವುದೋ ಭಾಷೆನಟನ ವೈಭವಿಕರಿಸಿ ವಿಶಾಲಹೃದಯ ಎನ್ನುವವರೆ! ನಿಮ್ಮರಂಜಿಸಿ ಖುಷಿಪಡಿಸಿ ಸಂತನಂತೆ ಬಾಳಿ ನಿರ್ಗಮಿಸಿದ ಕಲಾಬಂಧು ಸತ್ತಮೇಲು ಕೊಂದು ಅಪಮಾನಿಸಿದ ಪಾಪಿಗಳಿಗೆ ತಕ್ಕ ಪಾಠಕಲಿಸಿ! ಕಲಾಬಂಧು ಶಿಲೆಯನ್ನ ಮರುಸ್ಥಾಪಿಸಿ ಗೌರವಿಸಿ ಕನ್ನಡತನದ ವಿಶಾಲಹೃದಯ ಪ್ರದರ್ಶಿಸಿ! ರಂಜಿಸಿ ಕಣ್ಮರೆಯಾದ ಕಲಾವಿದರಿಗೆ ಹೃದಯದಲ್ಲಿ ಜಾಗನೀಡಿ!ಅದು ಕನ್ನಡದ ಧರ್ಮ!
ಕನ್ನಡಿಗರನ್ನ 45ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ? ಆತನ ಆತ್ಮ ಈ ರಾಕ್ಷಸಿ ಕೃತ್ಯ ಗಮನಿಸದೆ ಇರಬಹುದು! ಆದರೆ ನೆನಪಿಡಿ ರಕ್ಕಸರೆ ನೀವು ಅಪಮಾನಿಸಿದ್ದು ನಿಮ್ಮ ರಂಜಿಸಿ ನಿರ್ಗಮಿಸಿದ ನಟನ ಅಲ್ಲಾ! ಬದಲಾಗಿ ನಿಮ್ಮ ಕನ್ನಡನೆಲದ ಮೆಚ್ಚಿನ ಮಗನನ್ನ!
ನಿಮ್ಮ ತಂದೆತಾಯಿವಂಶ ಮೆಚ್ಚಿದ ಆತ್ಮ ಅದು! ನಿಮ್ಮಕೃತ್ಯ ಯಾವದೇವರು ಕ್ಷಮಿಸನು!ನತದೃಷ್ಟರೆ.! ಎಂದು ಆಕ್ರೋಶ ಹೊರಹಾಕಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel