ಮೋದಿ ಗಡ್ಡಕ್ಕೂ ರಾಮಮಂದಿರಕ್ಕೂ ಇದ್ಯಂತೆ ಸಂಬಂಧ
ಬಾಗಲಕೋಟೆ : ಸಾಮಾನ್ಯವಾಗಿ ಟ್ರಿಂ ಮಾಡಿಕೊಂಡು ಮಿಂಚುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಲಾಕ್ ಡೌನ್ ಘೋಷಣೆ ಬಳಿಕ ಗಡ್ಡಧಾರಿಗಳಾಗಿ ಮಿಂಚುತ್ತಿದ್ದಾರೆ.
ಮೋದಿ ಅವರ ಈ ಅವತಾರಕ್ಕೆ ಅವರ ಅಭಿಮಾನಿಗಳು ಒಂದು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೇಎಎಎ, ವಿರೋಧಿಗಳು ತಮ್ಮದೇಯಾದ ವಾದ ಮಂಡಿಸುತ್ತಿದ್ದಾರೆ.
7,515 ಕೋಟಿ ರೂ. ಆರ್ಥಿಕ ನೆರವು ಪಡೆಯಲಿದ್ದಾರೆ ತೆಲಂಗಾಣ ರೈತರು
ಸದ್ಯ ಮೋದಿ ಅವರ ಗಡ್ಡದ ಬಗ್ಗೆಯೇ ಚರ್ಚೆಗಳು ಶುರುವಾಗಿವೆ. ಈ ಮಧ್ಯೆ ವಿಶ್ವ ಪ್ರಸನ್ನ ತೀರ್ಥ ಸ್ವಾಮೀನಿ ಅವರು ಮೋದಿ ಗಡ್ಡಕ್ಕೂ ರಾಮಮಂದಿರಕ್ಕೂ ಸಂಬಂಧ ಇದೆ ಅನ್ನೋ ರೀತಿ ಮಾತನಾಡಿದ್ದಾರೆ.
ಬಾಗಲಕೋಟೆಯಲ್ಲಿ ಪೇಜಾವರ ಶ್ರೀಮಠದ ವಿಶ್ವಪ್ರಸನ್ನ ತೀರ್ಥ ಸ್ವಮೀಜಿಯವರು ರಾಮಮಂದಿರ ನಿರ್ಮಾಣಕ್ಕೆ ಕಾಣಿಕೆ ಸಂಗ್ರಹಣೆಗೆ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ” ಮೋದಿ ರಾಮಮಂದಿರ ನಿರ್ಮಾಣದವರೆಗೆ ಕೇಶ ತೆಗೆಯೋದಿಲ್ಲ ಎಂದು ದೀಕ್ಷೆ ತೆಗೆದುಕೊಂಡಿದ್ದಾರಾ ಎಂಬ ಪ್ರಶ್ನೆ ಉತ್ತರಿಸಿ, ನಮ್ಮಲ್ಲಿ ದೇವಸ್ಥಾನದ ಕಾರ್ಯ ಇಂತಹದ್ದೆಲ್ಲ ಇರುತ್ತೆ,
ಆ ಹೊತ್ತಿಗೆ ನಾವು ದೀಕ್ಷಾ ಬದ್ಧರಾಗೋದು ಅಂತ ಇದೆ. ಅದೇ ರೀತಿ ಮೋದಿ ಅವರು ಕೂಡ ರಾಮಮಂದಿರ ಕಾರ್ಯಕ್ಕಾಗಿ ದೀಕ್ಷೆ ತೊಟ್ಟಿರಬಹುದು ಎಂದು ಊಹಿಸಿದರು.
ಮೋದಿ ಅವರ ರಾಮಮಂದಿರಕ್ಕೆ ಶಿಲಾನ್ಯಾಸವನ್ನ ನೆರವೇರಿಸಿದ್ದಾರೆ. ಮಂದಿರದ ಜವಾಬ್ದಾರಿಯನ್ನ ಪ್ರಧಾನಿಯವರು ಹೊತ್ತಿದ್ದಾರೆ. ಸಹಜವಾಗಿ ಇಂತಹ ಕಾರ್ಯದ ವೇಳೆ ನಮ್ಮಲ್ಲಿ ಕೇಶಾದಿಗಳನ್ನು ತೆಗೆಯೋದಿಲ್ಲ.
ನೈತಿಕ ನೆಲೆಯಲ್ಲಿ ನಮ್ಮಲ್ಲಿ ಮಂದಿರ ಆಗುವ ತನಕ ಗಡ್ಡ ತಲೆಗೂದಲು ಬಿಟ್ಟಿರುತ್ತೇವೆ. ಪ್ರಾಯಶಃ ಮೋದಿ ಅವರು ಅದನ್ನ ಪಾಲನೆ ಮಾಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









