ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಮ್ಮದು ಪ್ರೀತಿಸುವ ಹಿಂದುತ್ವ, ಬಿಜೆಪಿಯದ್ದು ದ್ವೇಷಿಸುವ ಹಿಂದುತ್ವ : ಸಿದ್ದರಾಮಯ್ಯ ಹಿಂದುತ್ವ ಪಾಠ

Mahesh M Dhandu by Mahesh M Dhandu
December 28, 2020
in Newsbeat, Politics, ರಾಜಕೀಯ
siddaramaiah
Share on FacebookShare on TwitterShare on WhatsappShare on Telegram

ನಮ್ಮದು ಪ್ರೀತಿಸುವ ಹಿಂದುತ್ವ, ಬಿಜೆಪಿಯದ್ದು ದ್ವೇಷಿಸುವ ಹಿಂದುತ್ವ : ಸಿದ್ದರಾಮಯ್ಯ ಹಿಂದುತ್ವ ಪಾಠ

ಬೆಂಗಳೂರು : ನಾನು ಹಿಂದೂ, ಗಾಂಧೀಜಿಯವರು ಹಿಂದೂ, ಗೋಪಾಲಕೃಷ್ಣ ಗೋಖಲೆ ಅವರು ಹಿಂದೂ, ನಮ್ಮದು ಪ್ರೀತಿಸುವ ಹಿಂದುತ್ವವಾದರೆ, ಬಿಜೆಪಿಯವರದು ದ್ವೇಷಿಸುವ ಹಿಂದುತ್ವ ಎಂದು ಭಾರತೀಯ ಜನತಾ ಪಾರ್ಟಿಗೆ ಮಾಜಿ ಸಿದ್ದರಾಮಯ್ಯ ಹಿಂದುತ್ವದ ಪಾಠ ಮಾಡಿದ್ದಾರೆ.

Related posts

shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

August 1, 2026
dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

August 1, 2026

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಸಹೋದರತೆ, ಸೌಹಾರ್ದತೆ ಮುಂತಾದವುಗಳ ಬಗ್ಗೆ ಕಾರ್ಯಕರ್ತರಲ್ಲಿ ಬದ್ಧತೆಯಿದ್ದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯವಾಗುತ್ತದೆ. ನಾನೇಕೆ ಕಾಂಗ್ರೆಸಿಗ? ಎಂದು ಪ್ರತಿಯೊಬ್ಬ ಕಾರ್ಯಕರ್ತ ತನ್ನನ್ನು ತಾನು ಪ್ರಶ್ನೆ ಮಾಡಿಕೊಂಡು, ಈ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರು, ಹಿಂದುಳಿದವರು ಮತ್ತು ದಲಿತರಿಗೆ ಮೀಸಲಾತಿ ಕಲ್ಪಿಸಿದರೆ ಅದಕ್ಕೆ ವಿರೋಧ ಮಾಡಿ ಕೋರ್ಟ್ ಮೆಟ್ಟಿಲೇರಿದವರು ಬಿಜೆಪಿಯವರು.

siddaramaiah

ಹಿಂದೆ ಮೀಸಲಾತಿಗೆ ವಿರೋಧ ಮಾಡಿದ ಬಿಜೆಪಿ ನಾಯಕರೇ ಇಂದು ಮೀಸಲಾತಿ ಪರ ಹೋರಾಟ ಮಾಡುತ್ತಿದ್ದಾರೆ ಎಂದರೆ ಇದರ ಹಿಂದಿನ ದುರುದ್ದೇಶವನ್ನು ಜನ ಅರ್ಥಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಮೀಸಲಾತಿ ಪರವಾದ ಯಾವುದಾದರೂ ಒಂದು ಹೋರಾಟಕ್ಕೆ ಬಿಜೆಪಿ ಬೆಂಬಲಿಸಿತ್ತೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಯಾರ ಪರವಾಗಿ ಇಷ್ಟು ವರ್ಷಗಳ ಕಾಲ ಹೋರಾಟ ಮಾಡುತ್ತಾ ಬಂದಿತ್ತೋ ಆ ಸಮುದಾಯದ ಜನರ ಮತಗಳೆ ಇಂದು ಹಂಚಿಹೋಗಿದೆ. ಸುಳ್ಳು ಆಶ್ವಾಸನೆಗಳು, ಪೆÇಳ್ಳು ಹೋರಾಟಗಳ ಮೂಲಕ ನಮ್ಮ ಪಕ್ಷದ ಮತಗಳನ್ನು ಒಡೆಯುವ ಕುತಂತ್ರ ರಾಜಕಾರಣಕ್ಕೆ ಎದುರಾಳಿಗಳು ಇಳಿದಿದ್ದಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಬೇಕು.

ಹೊಸ ವರ್ಷಾಚರಣೆ ಸರಳ ಹಾಗೂ ಅರ್ಥಗರ್ಭಿತವಾಗಿರಬೇಕು : ಡಾ.ಕೆ.ಸುಧಾಕರ್

ಕಾಂಗ್ರೆಸ್ ಪಕ್ಷ ರಾಜಕೀಯ ಲಾಭಕ್ಕಾಗಿ ಅಥವಾ ಅಧಿಕಾರ ನಡೆಸಬೇಕೆಂಬ ಇರಾದೆಯಿಂದ ಸ್ಥಾಪನೆಯಾದ ಪಕ್ಷವಲ್ಲ. ದೇಶ ಬ್ರಿಟಿಷರ ಆಳ್ವಿಕೆಯಿಂದ ನಲುಗಿ ಹೋಗಿದ್ದ ಕಾಲದಲ್ಲಿ, ಇಲ್ಲಿನ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಹಕ್ಕುಗಳನ್ನು ಕೊಡಿಸುವ ಹೋರಾಟಕ್ಕೆ ವೇದಿಕೆಯಾಗಲೆಂದೇ ಜನ್ಮತಳೆದದ್ದು ಕಾಂಗ್ರೆಸ್.

ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾದ ಆರ್.ಎಸ್.ಎಸ್, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಒಂದೇ ಒಂದು ಉದಾಹರಣೆಯಿದೆಯೇ? ಬ್ರಿಟಿಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಡುವುದನ್ನೇ ದೇಶಪ್ರೇಮ ಅಂದುಕೊಂಡವರು ನಮಗೆ ದೇಶಪ್ರೇಮದ ಪಾಠ ಮಾಡುತ್ತಾರೆ. ಇಂಥವರ ದೇಶಪ್ರೇಮದ ಪಾಠ ಯಾರಿಗೆ ಬೇಕಿದೆ ಎಂದು ಕಿಡಿಕಾರಿದರು.

siddaramaiah

ನಾವು ಮಹಾತ್ಮ ಗಾಂಧಿಯವರು ಬೋಧಿಸಿದ ಹಿಂದುತ್ವದ ಹಾದಿಯಲ್ಲಿ ನಡೆಯುವವರು. ಬಿಜೆಪಿಯವರಂತೆ ಧರ್ಮ, ದೇವರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರಲ್ಲ. ನಾನು ಹಿಂದೂ, ಗಾಂಧೀಜಿಯವರು ಹಿಂದೂ, ಗೋಪಾಲಕೃಷ್ಣ ಗೋಖಲೆ ಅವರು ಹಿಂದೂ, ನಮ್ಮದು ಪ್ರೀತಿಸುವ ಹಿಂದುತ್ವವಾದರೆ, ಬಿಜೆಪಿಯವರದು ದ್ವೇಷಿಸುವ ಹಿಂದುತ್ವ ಎಂದು ಬಿಜೆಪಿಗೆ ಹಿಂದುತ್ವ ಪಾಠ ಮಾಡಿದ್ದಾರೆ.

ದನದ ಮಾಂಸ ತಿನ್ತೀನಿ, ಕೇಳೋಕೆ ನೀನ್ಯಾರು : ಸಿದ್ದರಾಮಯ್ಯ

ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಅಂತ ಪ್ರಶ್ನೆ ಮಾಡುವವರು ದೇಶಕ್ಕೇನು ಕೊಡುಗೆ ನೀಡಿದ್ದಾರೆ ಅಂತ ಮೊದಲು ಹೇಳಲಿ. ದೇಶದಲ್ಲಿ ಸಂವಿಧಾನ ಜಾರಿಯಾಗಿದ್ದರೆ, ಪ್ರತಿಯೊಬ್ಬರಿಗೂ ಆಹಾರ, ವಸತಿ, ಉದ್ಯೋಗ ಸೇರಿದಂತೆ ನೆಮ್ಮದಿಯಿಂದ ಬದುಕುವ ಅವಕಾಶಗಳು ಸಿಕ್ಕಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿಯಲ್ಲ.

ಕಾಂಗ್ರೆಸಿಗೆ ಹಿನ್ನಡೆ ಆಗುತ್ತಿದೆ ಎಂದರೆ, ದೇಶದ ಬಡವರು, ಹಿಂದುಳಿದವರು, ಶೋಷಿತ ವರ್ಗದ ಜನರಿಗೆ ಹಿನ್ನಡೆಯಾಗುತ್ತಿದೆ ಎಂದರ್ಥ. ಈ ಕಾರಣಕ್ಕಾಗಿ ಕಾಂಗ್ರೆಸ್ ಉಳಿಯಬೇಕು, ಬೆಳೆಯಬೇಕು, ಮತ್ತೆ ಅಧಿಕಾರಕ್ಕೆ ಬರಬೇಕು. ದೇಶದ ಭವಿಷ್ಯಕ್ಕಾಗಿ ನಾವೆಲ್ಲರು ಕಾಂಗ್ರೆಸ್ ಪಕ್ಷವನ್ನು ಬಲಪಡಿಸೋಣ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BJPCongressSiddaramaiah
ShareTweetSendShare
Join us on:

Related Posts

shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

by admin
August 1, 2026
0

ಇಷ್ಟಾರ್ಥಗಳು ಸಿದ್ಧಿಯಾಗಿ ಮನೋಇಚ್ಚಾ ಕಾರ್ಯಗಳು ನೆರೆವೆರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಶನಿವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತಂತೆ.. ಆಂಜನೇಯ ಸ್ವಾಮಿ ಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ...

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

by admin
August 1, 2026
0

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ...

nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

by admin
August 1, 2026
0

› ಉಪವಾಸ ಮಾಡಿ › ನಾಗ ದೇವರಿಗೆ ಪೂಜೆ ಸಲ್ಲಿಸಿ : ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

tenginakayi-deepa-aradhane-puja-vidhana-kannada

Astro- ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ.. ಬದಲಾವಣೆ ನೋಡಿ..!

by admin
August 1, 2026
0

ತೆಂಗಿನಕಾಯಿ ದೀಪಾರಾಧನೆ ಹೇಗೆ ಮಾಡಬೇಕು..? ಧಾರ್ಮಿಕ ಮಹತ್ವ ಮತ್ತು ಪೂಜೆ ವಿಧಾನ ನಾವು ನಿತ್ಯವು ದೇವರ ಮುಂದೆ ದೀಪವನ್ನು ಬೆಳಗುತ್ತೆವೆ.ಅದೇ ತರಹ ವಿಶೇಷವಾಗಿ ನಮ್ಮ ಕೋರಿಕೆಗಳು, ಕಷ್ಟಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram