ಕೊರೊನಾ ಲಸಿಕೆಯಲ್ಲಿ ಹಂದಿ ಅಂಶ : ಡೋಂಟ್ ವರಿ ಎಂದ ಇಸ್ಲಾಂಮಿಕ್ ಕೌನ್ಸಿಲ್
ಮೆಲ್ಬೋರ್ನ್ : ಕೊರೊನಾ ಲಸಿಕೆ ತಯಾರಿಸಲು ಹಂದಿಯ ಗೆಲಾಟಿನ್ ಬಳಕೆ ಮಾಡಲಾಗುತ್ತದೆ ಎನ್ನುವ ವಿಚಾರ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆಲ್ ಇಂಡಿಯಾ ಸುನ್ನಿ ಝಮಾತುಲ್ ಉಲೆಮಾ ಕೌನ್ಸಿಲ್ ಹಂದಿಯ ಗೆಲಾಟಿನ್ ಬಳಸಿ ತಯಾರು ಮಾಡಲಾಗುತ್ತಿರುವ ಲಸಿಕೆಯನ್ನು ಹರಾಮ್ ಎಂದು ಘೋಷಣೆ ಮಾಡಿದೆ. ಹೀಗಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ಮುಸ್ಲಿಂರಲ್ಲಿ ಗೊಂದಲವುಂಟಾಗಿದೆ.
ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಯುಎಇ ಅತ್ಯುನ್ನತ ಇಸ್ಲಾಂಮಿಕ್ ಕೌನ್ಸಿಲ್ ಫಾತ್ವಾ ಹೊರಡಿಸಿದೆ.
ಅದರಲ್ಲಿ ಹಂದಿಯ ಗೆಲಾಟಿನ್ ಹೊಂದಿರುವ ಕೊರೊನಾ ಲಸಿಕೆಯನ್ನು ಮುಸ್ಲಿಂರು ಹಾಕಿಸಿಕೊಳ್ಳಬಹುದು. ಲಸಿಕೆ ಆಹಾರ ಅಲ್ಲ. ಅದೊಂದು ಔಷಧಿ. ಹಾಗಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬಹುದು ಎಂದು ತಿಳಿಸಿದೆ.
ಇನ್ನು ಇಸ್ಲಾಂ ಧರ್ಮದಲ್ಲಿ ಹಂದಿಮಾಂಸ ಸೇವನೆ ನಿಷಿದ್ಧವಾಗಿದೆ. ಹೀಗಾಗಿ ಹಂದಿಯ ಗೆಲಾಟಿನ್ ಬಳಸಿ ತಯಾರಿಸಿರುವ ಕೊರೊನಾ ಲಸಿಕೆಯನ್ನು ಆಲ್ ಇಂಡಿಯಾ ಸುನ್ನಿ ಝಮಾತುಲ್ ಉಲೆಮಾ ಕೌನ್ಸಿಲ್ ಹರಾಮ್ ಎಂದು ಘೋಷಿಸಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel