ತಾಯಿ ಸಾವಿನಿಂದ ಕೋಣೆ ಸೇರಿದ್ದವರು.. 10 ವರ್ಷದ ಬಳಿಕ ಹೊರ ಬಂದ್ರು
ರಾಜ್ ಕೋಟ್ : ಗುಜರಾತ್ ನ ರಾಜ್ ಕೋಟ್ ನಲ್ಲಿ ಕಳೆದ 10 ವರ್ಷಗಳಿಂದ ಕೋಣೆಯಲ್ಲಿದ್ದ ಮಾನಸಿಕ ಅಸ್ವಸ್ಥರನ್ನು ರಕ್ಷಣೆ ಮಾಡಲಾಗಿದೆ.
ತಮ್ಮ ತಾಯಿಯ ನಿಧನದಿಂದ ಆಘಾತಕ್ಕೆ ಒಳಗಾಗಿ ಅಂಬರೀಷ್, ಭಾವೇಶ್, ಇವರ ಸಹೋದರಿ ಮೇಘನಾ 10 ವರ್ಷಗಳ ಹಿಂದೆ ಕೋಣೆ ಸೇರಿದ್ದರು. ಅಂದ್ರೆ ತಾವೇ ಬಾಗಿಲು ಲಾಕ್ ಮಾಡಿಕೊಂಡು ಕೋಣೆಯೊಳಗೆ ಬಂಧಿಯಾಗಿದ್ದರು.
ಇವರ ತಂದೆ ನೀಡಿದ ಮಾಹಿತಿ ಮೇರೆಗೆ ರಾಜ್ ಕೋಟ್ ನ ‘ಸಾಥಿ ಸೇವಾ ತಂಡ’ ಸದ್ಯ ಸಂತ್ರಸ್ತರನ್ನು ರಕ್ಷಿಸಿದೆ.
ಅಂಬರೀಶ್, ಭಾವೇಶ್, ಮೇಘನಾ ಒಡಹುಟ್ಟಿದವರಾಗಿದ್ದು, ಇವರು ತಮ್ಮ ತಾಯಿಯ ಮರಣದ ನಂತರ ಮಾನಸಿಕ ಅಸ್ವಸ್ಥರಾಗಿದ್ದು, ಈ ನಿರ್ಧಾರ ತೆಗೆದುಕೊಂಡಿದ್ದರು.
ಹೊಸ ವರ್ಷದ ಮೋಜಿಗೆ ಹಣ ಕೇಳಿದ, ನಿರಾಕರಿಸಿದ್ದಕ್ಕೆ ಸುತ್ತಿಗೆಯಿಂದ ಅಜ್ಜಿ ತಲೆ ಹೊಡೆದ ಮೊಮ್ಮಗ..!
ಅಲ್ಲದೆ ನಾನೇ ಪ್ರತಿನಿತ್ಯ ಬಾಗಿಲ ಹೊರಗಡೆ ಆಹಾರವನ್ನು ತಂದಿಡುತ್ತಿದ್ದೆ ಎಂದು ನಿವೃತ್ತ ಸರ್ಕಾರಿ ನೌಕರರಾಗಿರುವ ಈ ಮೂವರ ತಂದೆ ಹೇಳುತ್ತಾರೆ.
ಇನ್ನು ತಮ್ಮ ಮಕ್ಕಳ ಬಗ್ಗೆ ವಿವರಣೆ ಕೊಟ್ಟಿರುವ ಅವರು, ತನ್ನ ಹಿರಿಯ ಮಗ ಅಂಬರೀಶ್ ಬಿಎ ಎಲ್ ಎಲ್ ಬಿ ಮಾಡಿರೋದಾಗಿ,
ಮೇಘನಾ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ್ದು, ಕಿರಿಯ ಮಗ ಭಾವೇಶ್ ಬಿ.ಎ ಪದವಿ ಪಡೆದಿರೋದಾಗಿ ಹೇಳಿಕೊಂಡಿದ್ದಾರೆ. ಆದ್ರೆ ಇವರ ಮಾತಿನಲ್ಲಿ ಎಷ್ಟು ಸತ್ಯ ಇದೆ ಅನ್ನೋದು ಯಾರಿಗೂ ಗೊತ್ತಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel