ಜಿಂಗ್ ಜಿಂಗ್ ಅಮೇಜಿಂಗ್… ಎಮ್ಮೆಗಳಿಗೂ ಬಂತು ಬ್ಯೂಟಿ ಪಾರ್ಲರ್
ಕೊಲ್ಹಾಪುರ : ಸಾಮಾನ್ಯವಾಗಿ ಮಹಿಳೆಯರಿಗೆ, ಯುವತಿ-ಯುವಕರಿಗೆ ಬ್ಯೂಟಿ ಪಾರ್ಲರ್ ಗಳಿರುತ್ತವೆ.
ಆದ್ರೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಎಮ್ಮೆಗಳ ಬ್ಯೂಟಿ ಹೆಚ್ಚಿಸಲು ಎಮ್ಮೆಗಳಿಗಾಗಿಯೇ ಒಂದು ಪಾರ್ಲರ್ ಶುರುವಾಗಿದೆ. ಇಲ್ಲಿ ಎಮ್ಮೆಗಳಿಗೆ ಹೇರ್ ಕಟ್, ಸ್ನಾನ, ಎಣ್ಣೆ ಮಸಾಜ್ ಮಾಡಲಾಗುತ್ತದೆ.
ವಿಶೇಷ ಅಂದ್ರೆ ಈ ಪಾರ್ಲರ್ ನಲ್ಲಿ ಯಾವುದೇ ಹಣ ಪಡೆಯುವುದಿಲ್ಲ. ಹಣದ ಬದಲಾಗಿ ಎಮ್ಮೆಗಳು ಹಾಕುವ ಸಗಣಿ ಮತ್ತು ಅವುಗಳ ಸ್ನಾನಕ್ಕೆ ಬಳಸುವ ನೀರನ್ನು ಪಾರ್ಲರ್ ನ ಮಾಲೀಕರು ತಮ್ಮ ಹೊಲಗದ್ದೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ.
ಈ ಬಗ್ಗೆ ಮಾತನಾಡಿರುವ ಪಾರ್ಲರ್ ನ ಮಾಲೀಕ ವಿಜಯ ಸೂರ್ಯವಂಶಿ, ಎಮ್ಮೆಗಳನ್ನು ನದಿಯಲ್ಲಿ ತೊಳೆಯುವುದರಿಂದ ನದಿ ನೀರು ಕಲುಷಿತವಾಗುತ್ತದೆ.
ಹೊಸ ವರ್ಷದ ಮೋಜಿಗೆ ಹಣ ಕೇಳಿದ, ನಿರಾಕರಿಸಿದ್ದಕ್ಕೆ ಸುತ್ತಿಗೆಯಿಂದ ಅಜ್ಜಿ ತಲೆ ಹೊಡೆದ ಮೊಮ್ಮಗ..!
ಹೀಗಾಗಿ, ನಾನು ಮಾಹಾರಾಷ್ಟ್ರ ಸರ್ಕಾರದಿಂದ 15 ಲಕ್ಷ ರೂ. ಅನುದಾನ ಪಡೆದು ಈ ಪಾರ್ಲರ್ ಓಪನ್ ಮಾಡಿದ್ದೇನೆ. ಸದ್ಯ ನಮ್ಮಲ್ಲಿ ದಿನಕ್ಕೆ 30 ಎಮ್ಮೆಗಳು ಬರ್ತಿವೆ.
ಈ ಸೇವೆಗಾಗಿ ನಾವು ರೈತರಿಂದ ದುಡ್ಡು ಪಡೆಯುವುದಿಲ್ಲ, ಬದಲಾಗಿ ಎಮ್ಮೆಗಳು ಇಲ್ಲಿಗೆ ಬಂದಾಗ ಅವುಗಳು ಹಾಕುವ ಸಗಣಿ ಹಾಗೂ ಮೈತೊಳೆದ ನೀರನ್ನು ನಮ್ಮ ಗದ್ದೆಗೆ ಬಳಸಿಕೊಳ್ಳುತ್ತೇವೆಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel