ಸೋಮನಾಥ ಮಂದಿರದ ಕೆಳಗೆ 3 ಮಹಡಿಯ ಕಟ್ಟಡ ಪತ್ತೆ
ಗಾಂಧಿನಗರ : ಇತಿಹಾಸ ಪ್ರಸಿದ್ಧ ಗುಜರಾತಿನ ಸೋಮನಾಥ ಮಂದಿರದ ಅಡಿಯಲ್ಲಿ ಮೂರು ಮಹಡಿಯ ಕಟ್ಟಡ ಪತ್ತೆಯಾಗಿದೆ. ಒಂದು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪುರಾತತ್ವ ಇಲಾಖೆಗೆ ಉತ್ಖನನ ನಡೆಸುವಂತೆ ಆದೇಶ ನೀಡಿದ್ದರು.
ಅದರಂತೆ ಐಐಟಿ ಗಾಂಧಿನಗರ ಮತ್ತು ನಾಲ್ಕು ಸಂಸ್ಥೆಗಳ ಪುರಾತತ್ವ ತಜ್ಞರು ಉತ್ಖನನ ಕಾರ್ಯ ನಡೆಸಿದ್ದರು. ಈ ವೇಳೆ ದೇಗುಲದ ಕೆಳಗೆ ಮೂರು ಅಂತಸ್ತಿನ ಕಟ್ಟಡ ಜೊತೆಗೆ ಬೌದ್ಧ ಗುಹೆ ಪತ್ತೆಯಾಗಿದೆ ಎಂದು ವರದಿಯಾಗಿದೆ.
ತಜ್ಞರು ಸುಮಾರು ಐದು ಕೋಟಿ ಮೌಲ್ಯದ ಯಂತ್ರಗಳನ್ನು ಈ ಶೋಧನೆ ನಡೆಸಿದ್ದು, ದೇವಾಲಯದ ಕೆಳಗೆ ಕಟ್ಟಡವಿದೆ ಎಂದು ತಿಳಿಸಿದ್ದಾರೆ.
ಜಿಂಗ್ ಜಿಂಗ್ ಅಮೇಜಿಂಗ್… ಎಮ್ಮೆಗಳಿಗೂ ಬಂತು ಬ್ಯೂಟಿ ಪಾರ್ಲರ್
ಹಾಗೇ ಅದು ಪ್ರವೇಶ ದ್ವಾರವನ್ನು ಕೂಡ ಹೊಂದಿದೆ ಅಂತ ಕಳೆದ ಒಂದು ವರ್ಷದಿಂದ ಉತ್ಖನನ ನಡೆಸಿರುವ ಪುರಾತತ್ವ ಇಲಾಖೆ ಇದೀಗ 32 ಪುಟಗಳ ವರದಿ ಸಿದ್ಧಪಡಿಸಿದೆ. ಇದರನ್ನು ಸೋಮನಾಥ್ ಟ್ರಸ್ಟ್ ಗೆ ನೀಡಿದೆ.
ಅಲ್ಲದೆ ಮಂದಿರದ ಕೆಳಗೆ ಎಲ್ ಶೇಫ್ ನಲ್ಲಿ ಮತ್ತೊಂದು ಕಟ್ಟಡ ಇದೆ ಎಂಬುದಾಗಿ ತಿಳಿಸಿರುವ ಪುರಾತತ್ವ ಇಲಾಖೆ ಸೋಮನಾಥ ದೇಗುಲದ ದಿಗ್ವಿಜಯ್ ದ್ವಾರ ಮತ್ತು ಸರ್ದಾರ ವಲ್ಲಭ ಭಾಯಿ ಪಟೇಲ್ ಪ್ರತಿಮೆ ಆಸುಪಾಸಿನಲ್ಲಿ ಬೌದ್ಧ ಗುಹೆಗಳಿರುವುದಾಗಿ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









