ಮಾಧ್ಯಮಗಳಿಗೆ ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ
ಬೆಂಗಳೂರು : ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಹಾಗೂ ಫಲಿತಾಂಶವನ್ನ ರಾಜಕೀಯ ಪಕ್ಷಗಳ ಆಧಾರಿತ ಚುನಾವಣೆಯಂತೆ ಪ್ರಸಾರ ಮಾಡುತ್ತಿರುವ ಕೆಲವು ಮಾಧ್ಯಮಗಳಿಗೆ ರಾಜ್ಯ ಚುನಾವಣಾ ಆಯೋಗ ಖಡಕ್ ಎಚ್ಚರಿಕೆ ನೀಡಿದೆ.
ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ 2020ಕ್ಕೆ ಸಂಬಂಧಿಸಿದಂತೆ ಇಂದು ದಿ. 30.12.2020 ರಂದು ಮತಗಳ ಎಣಿಕೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತ ಚುನಾವಣೆಯಾಗಿರುತ್ತದೆ.
ಆದರೆ ಕೆಲವು ಟಿವಿ ವಾಹಿನಿಗಳಲ್ಲಿ ಈ ಚುನಾವಣಾ ಫಲಿತಾಂಶಗಳನ್ನು ರಾಜಕೀಯ ಪಕ್ಷಗಳ ಆಧಾರಿತ ಚುನಾವಣೆಯಂತೆ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡಿದಂತಾಗುತ್ತದೆ.
ಹೋಮಿಯೋಪತಿಯಲ್ಲೂ ಕೊರೊನಾ ಔಷಧಿ ತಯಾರಿಸಿ : ಡಾ.ಕೆ.ಸುಧಾಕರ್ ಸಲಹೆ
ಆದ್ದರಿಂದ ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷ ರಹಿತ ಚುನಾವಣೆಗಳಾಗಿರುತ್ತವೆಂದು, ಹಾಗೂ ಈ ರೀತಿ ಆಧಾರವಿಲ್ಲದೆ ಫಲಿತಾಂಶಗಳನ್ನು ಪಕ್ಷವಾರು ಪ್ರಸಾರ ಮಾಡಬಾರದೆಂದು ಹಾಗೆ
ಪ್ರಕಟಿಸುತ್ತಿರುವ ದೃಶ್ಯ, ಶ್ರವಣ ಹಾಗೂ ಪತ್ರಿಕಾ ಮಾಧ್ಯಮಗಳಿಗೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel