ಗರ್ಭಪಾತ ಕಾನೂನುಬದ್ಧ : ಅರ್ಜೆಂಟೀನಾದಲ್ಲಿ ಚಾರಿತ್ರಾತ್ಮಕ ನಿರ್ಧಾರ
ನವದೆಹಲಿ : ಗರ್ಭಪಾತ ಮಾಡೋದನ್ನ ಕಾನೂನುಬದ್ಧ ಮಾಡುತ್ತಾ ಅರ್ಜೆಂಟೀನಾ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ.
ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡ ಪ್ರಮುಖ ದೇಶ ಅಜೆರ್ಂಟೀನಾ.
ಗರ್ಭಪಾತಕ್ಕೆ ಅನುಮತಿ ನೀಡಬಾರದು, ಅದು ಶಿಶುಗಳ ಜೀವಿಸುವ ಹಕ್ಕನ್ನು ಕಸಿದುಕೊಳ್ಳುತ್ತೆ ಅಂತ ಕ್ಯಾಥೋಲಿಕ್ ಚರ್ಚ್ ವಿರೋಧ ವ್ಯಕ್ತಪಡಿಸಿದರೂ, ಇದನ್ನು ತಳ್ಳಿಹಾಕಿ ಅರ್ಜೇಂಟೀನಾ ಸೆನೆಟ್ ಗರ್ಭಪಾತವನ್ನು ಕಾನೂನುಬದ್ಧ ಮಾಡಿದೆ.
ಈ ಹೊಸ ಕಾನೂನಿಗೆ ಬ್ಯೂನಸ್ ಐರಿಸ್ ನ ಸೆನೆಟ್ ಕಟ್ಟಡದ ಮುಂದೆ ಜಾಮಾಯಿಸಿದ್ದ ಜನರು ಹರ್ಷೋದ್ಗಾರಗಳೊಂದಿಗೆ ಬೆಂಬಲ ಸೂಚಿಸಿದರು.
ಗರ್ಭಾವಸ್ಥೆಯ 14 ವಾರಗಳವರೆಗೆ ಮಹಿಳೆಯರಿಗೆ ಗರ್ಭಪಾತಮಾಡಲು ಅವಕಾಶ ನೀಡುವ ಕಾನೂನನ್ನು ಜಾರಿಗೆ ತರಲಾಗಿದೆ.
ಅಂದಹಾಗೆ ಇದೇ ಕಾನೂನನ್ನು 2018ರಲ್ಲಿ ಜಾರಿಗೆ ತರುವಲ್ಲಿ ಸೆನೆಟ್ ವಿಫಲವಾಗಿತ್ತು.
ಮಸೂದೆಯನ್ನು ಕೆಳಮನೆ ಅಂಗೀಕರಿಸಿತು, ಆದರೆ ಸೆನೆಟ್ ನಲ್ಲಿ ಮತಗಳ ಅಲ್ಪ ಅಂತರದಿಂದ ಕೈಬಿಡಲಾಯಿತು. ಇಂದು ಆಡಳಿತ ಪಕ್ಷದ ಒಪ್ಪಿಗೆಯೊಂದಿಗೆ ಈ ವಿಧೇಯಕವನ್ನು ಅಂಗೀಕರಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel