ಕೊರೊನಾ ಲಸಿಕೆ ಹೇಗೆ,ಯಾರಿಗೆ,ಎಲ್ಲಿ ವಿತರಣೆ ಆಗುತ್ತೆ : ಸಂಪೂರ್ಣ ಮಾಹಿತಿ ಇಲ್ಲಿದೆ
135 ಕೋಟಿ ಭಾರತೀಯರ ನಿದ್ದೆಗೆಡಿಸಿರುವ ಕೊರೊನಾವನ್ನ ದೇಶದಿಂದ ಓಡಿಸಲು ವಿಜ್ಞಾನಿಗಳು ನಡೆಸಿದ ಸಂಶೋಧನೆಗೆ ಫಲಸಿಕ್ಕಿದೆ. ಕೊರೊನಾ ವಿರುದ್ಧ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿದೇಶನಾಲಯ ಅಧಿಕೃತ ಅನುಮೋದನೆ ನೀಡಿದೆ.
ಆದ್ರೆ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಲಸಿಕೆ ಹೇಗೆ ವಿತರಿಸಲ್ಪಡುತ್ತಿದೆ ಎಂಬ ಆಸಕ್ತಿ ಎಲ್ಲರಲ್ಲೂ ಮೂಡಿದೆ. ಈಗಾಗಲೇ ಎರಡು ಬಾರಿ ವ್ಯಾಕ್ಸಿನೇಷನ್ ಡ್ರೈ ರನ್ ನಡೆಸಿರುವ ಕೇಂದ್ರ ಸರ್ಕಾರ ವ್ಯಾಕ್ಸಿನೇಷನ್ಗೆ ಸಂಪೂರ್ಣ ಸಿದ್ಧವಾಗಿದೆ.
ಲಸಿಕೆ ಮೊದಲು ಯಾರಿಗೆ ನೀಡಲಾಗುತ್ತದೆ?
ಮೊದಲ ಹಂತದಲ್ಲಿ, ಕೋವಿಡ್ -19 ಲಸಿಕೆ ಅಡ್ಮಿನಿಸ್ಟ್ರೇಷನ್ ಮೇಲೆ ಸ್ಥಾಪಿಸಲಾಗಿರುವ ಎನ್ಇಜಿವಿಎಸಿ ರಾಷ್ಟ್ರೀಯ ತಜ್ಞರ ಸಮಿತಿಯ ಶಿಫಾರಸುಗಳ ಪ್ರಕಾರ, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಒಂದು ಕೋಟಿ ವೈದ್ಯಕೀಯ ಸಿಬ್ಬಂದಿಗೆ ಮೊದಲು ಲಸಿಕೆ ನೀಡಲಾಗುವುದು. ಈ ಆರೋಗ್ಯ ಸಿಬ್ಬಂದಿಯನ್ನು ಮತ್ತೆ ಉಪ-ವರ್ಗಗಳಾಗಿ ವಿಂಗಡಿಸಲಾಗಿದೆ. ಫ್ರಂಟ್ಲೈನ್ ಆರೋಗ್ಯ ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ಐಸಿಡಿಎಸ್) ಕಾರ್ಮಿಕರು, ದಾದಿಯರು, ಮೇಲ್ವಿಚಾರಕರು, ವೈದ್ಯಕೀಯ ಅಧಿಕಾರಿಗಳು, ಅರೆವೈದ್ಯಕೀಯ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಕೊರೊನಾ ವಿರುದ್ಧ ಹಗಲು ರಾತ್ರಿ ಹೋರಾಡುತ್ತಿರುವ, ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಪಡೆ, ಹೋಮ್ ಗಾರ್ಡ್, ವಿಪತ್ತು ನಿರ್ವಹಣೆ, ನಾಗರಿಕ ರಕ್ಷಣಾ ಸಂಸ್ಥೆಗಳು, ಜೈಲು ಸಿಬ್ಬಂದಿ, ಪುರಸಭೆ ಮತ್ತು ಕಂದಾಯ ಅಧಿಕಾರಿಗಳು ಸೇರಿದಂತೆ 2 ಕೋಟಿ ಮಂದಿಗೆ ಲಸಿಕೆ ಕೊಡಲಾಗುತ್ತದೆ. ಈ ಪಟ್ಟಿಯಲ್ಲಿ ರಾಜ್ಯ ಸರ್ಕಾರಗಳ ಗೃಹ, ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಗಳಲ್ಲಿ ಕೆಲಸ ಮಾಡುವವರೂ ಸೇರಿದ್ದಾರೆ.
50 ವರ್ಷಕ್ಕಿಂತ ಮೇಲ್ಪಟ್ಟವರಿಗೆ
50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರಂಭಿಕ ಹಂತದಲ್ಲಿ ಲಸಿಕೆ ಹಾಕಲಾಗುತ್ತದೆ. ಇವರನ್ನ ಎರಡು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು. 50-60 ವಯಸ್ಸಿನವರು. ಮೊದಲು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಇತ್ತೀಚಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಕೋವಿಡ್ -19 ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿರುವವರಿಗೆ ಲಸಿಕೆಗಳನ್ನು ಮೊದಲ ಕಂತಿನಲ್ಲಿ ನೀಡಲಾಗುತ್ತದೆ.
ಈ ವರ್ಷದ ಆಗಸ್ಟ್ ವೇಳೆಗೆ ಮೊದಲ ಕಂತಿನ ವಿತರಣೆ ಪೂರ್ಣಗೊಂಡರೆ, ಲಸಿಕೆಯ ಲಭ್ಯತೆಗೆ ಅನುಗುಣವಾಗಿ ಉಳಿದ ವರಿಗೆ ಲಸಿಕೆ ನೀಡಲಾಗುತ್ತಿದೆ.
ಲಸಿಕೆಗಾಗಿ ನೋಂದಾಯಿಸುವುದು ಹೇಗೆ?
ಲಸಿಕೆ ಪಡೆಯಲು ಸಾಮಾನ್ಯ ಜನರು ಆನ್ಲೈನ್ನಲ್ಲಿ ಮೊದಲೇ ನೋಂದಾಯಿಸಿಕೊಳ್ಳಬೇಕು. ಆಗಿಂದಾಗೆ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಲು ಸಾಧ್ಯವಿಲ್ಲ.
ಕೋವಿನ್ -19 ಲಸಿಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೋವಿನ್ ವೆಬ್ಸೈಟ್ ಅಥವಾ ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಕೋವಿನ್ ವೆಬ್ಸೈಟ್ ಗೆ ಸರ್ಕಾರಿ ಫೋಟೋ ಗುರುತಿನ ಚೀಟಿ ಅಥವಾ ಆಧಾರ್ ಅನ್ನು ಅಪ್ಲೋಡ್ ಮಾಡಿ ಮತ್ತು ಹೆಸರು ಮತ್ತು ವಿಳಾಸದಂತಹ ವಿವರಗಳನ್ನು ಒದಗಿಸಬೇಕು. ನಂತರ ಮೊಬೈಲ್ ಗೆ ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿದ ನಂತರ, ಲಸಿಕೆಗಾಗಿ ಯಾವ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ಒದಗಿಸಲಾಗುತ್ತದೆ.
ಕೋವಿನ್ ಡಿಜಿಟಲ್ ವ್ಯವಸ್ಥೆಯನ್ನು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಕೋವಿನ್ ಅಪ್ಲಿಕೇಶನ್ ಈಗಾಗಲೇ ಆಂಡ್ರಾಯ್ಡ್ ಮತ್ತು ಆಪಲ್ ಫೋನ್ಗಳಲ್ಲಿ ಲಭ್ಯವಿದೆ.
ವ್ಯಾಕ್ಸಿನೇಷನ್ ಪ್ರಕ್ರಿಯೆ ಹೇಗೆ ನಡೆಯುತ್ತೆ..?
ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ನಡೆಸಲು ಮೂರು ಕೋಣೆಗಳ ಕೇಂದ್ರ ಇರಬೇಕು. ಒಂದು ಕೋಣೆ ವೇಟಿಂಗ್ ರೂಮ್ ಮತ್ತು ಇನ್ನೊಂದು ಕೋಣೆಯನ್ನು ಲಸಿಕೆ ನೀಡಲು ವೈದ್ಯರು ಬಳಸುತ್ತಾರೆ. ಮೂರನೇ ಕೋಣೆಯಲ್ಲಿ, ಲಸಿಕೆ ಹಾಕಿದ ವ್ಯಕ್ತಿಯನ್ನು ಅರ್ಧ ಘಂಟೆಯವರೆಗೆ ವೈದ್ಯಕೀಯ ವೀಕ್ಷಣೆಯಲ್ಲಿ ಇರಿಸಲಾಗುತ್ತದೆ. ಇದರಲ್ಲಿ ಐದು ಆರೋಗ್ಯ ಕಾರ್ಯಕರ್ತರು ಕೆಲಸದಲ್ಲಿರುತ್ತಾ.
ಮೊದಲ ಸಿಬ್ಬಂದಿ ಫಲಾನುಭವಿಯ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ. ಎರಡನೇ ಸಿಬ್ಬಂದಿ ವ್ಯಕ್ತಿಗೆ ಲಸಿಕೆ ಹಾಕಲು ಅವಕಾಶ ಮಾಡಿಕೊಡುತ್ತಾರೆ. ಮೂರನೇ ಸಿಬ್ಬಂದಿ ಲಸಿಕೆ ಪ್ರಮಾಣವನ್ನು ನೀಡುತ್ತಾರೆ. ಇತರ ಇಬ್ಬರು ಸಿಬ್ಬಂದಿಗಳು ಲಸಿಕೆ ಹಾಕಿದ ವ್ಯಕ್ತಿಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಾರೆ. ಈಗಾಗಲೇ 96 ಸಾವಿರ ವ್ಯಾಕ್ಸಿನೇಟರ್ಗಳಿಗೆ ತರಬೇತಿ ನೀಡಲಾಗಿದೆ. ಈ ಪೈಕಿ 2,360 ಜನರಿಗೆ ರಾಷ್ಟ್ರೀಯವಾಗಿ ತರಬೇತಿ ನೀಡಲಾಗಿದ್ದು, 715 ಜಿಲ್ಲೆಗಳಲ್ಲಿ 57,000 ಜನರಿಗೆ ತರಬೇತಿ ನೀಡಲಾಗಿದೆ.
ಲಸಿಕೆ ಎಲ್ಲಿ ನೀಡಲಾಗುತ್ತದೆ?
ವ್ಯಾಕ್ಸಿನೇಷನ್ ಕಾರ್ಯಕ್ರಮಗಳನ್ನು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯರು ಲಭ್ಯವಿರುವ ಒಂದು ನಿರ್ದಿಷ್ಟ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಶಾಲೆ ಮತ್ತು ಸಮುದಾಯ ಸಭಾಂಗಣಗಳನ್ನು ಸಹ ವ್ಯಾಕ್ಸಿನೇಷನ್ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ಇನ್ನು ಜನರಿಗೆ ಲಸಿಕೆ ನೀಡಲು ದೂರದ ಹಳ್ಳಿಗಳಲ್ಲಿ ಮೊಬೈಲ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಬೆಟ್ಟಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುವವರಿಗೆ ಆರೋಗ್ಯ ಸಿಬ್ಬಂದಿಯೇ ಲಸಿಕೆ ಹಾಕುತ್ತಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel