ಡ್ರಗ್ ಪ್ರಕರಣದಲ್ಲಿ `ರಿಂಗ್ ಮಾಸ್ಟರ್’ ಚಿತ್ರದ ನಟಿ ಅರೆಸ್ಟ್
ಮುಂಬೈ : ಡ್ರಗ್ಸ್ ಪ್ರಕರಣದಲ್ಲಿ ಕನ್ನಡದ ರಿಂಗ್ ಮಾಸ್ಟರ್ ಚಿತ್ರದ ನಾಯಕಿ ಶ್ವೇತಾ ಕುಮಾರಿಯನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧನಕ್ಕೂ ಮೊದಲು ಅಧಿಕಾರಿಗಳು ಶ್ವೇತಾ ಕುಮಾರಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು ಎಂದು ತಿಳಿದುಬಂದಿದೆ.
ಬೆಳ್ಳಂಬೆಳಿಗ್ಗೆ ರೌಡಿ ಪರೇಡ್: ಬಸ್ಕಿ ಹೊಡೆಸಿ ರೌಡಿಗಳಿಗೆ ಬಿಸಿ ಮುಟ್ಟಿಸಿದ ಖಾಕಿ..!
ಡ್ರಗ್ ಪ್ರಕರಣದಲ್ಲಿ ಮುಂಬೈ ಪೆಡ್ಲರ್ ಕರೀಂ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದರು.
ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಆಧಾರದ ಮೇಲೆ ಇದೀಗ ನಟಿ ಶ್ವೇತಾರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ನಟಿ ಶ್ವೇತಾ ಡ್ರಗ್ ತೆಗೆದುಕೊಳ್ಳುತ್ತಿದ್ದರಲ್ಲದೇ ಡ್ರಗ್ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಇನ್ನು ನಟಿಯ ಬಂಧನದ ವೇಳೆ 10 ಲಕ್ಷ ನಗದು, 10 ಗ್ರಾಂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









