ಸಿದ್ದ ತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನ : ನಾಲವಾರದಲ್ಲಿ ಉಚಿತ ಕ್ಷೌರ ಸೇವೆ
ಕಲಬುರಗಿ : ಇಂದು ಡಾ ಸಿದ್ದ ತೋಟೇಂದ್ರ ಮಹಾಸ್ವಾಮಿಗಳ 56 ನೇ ಜನ್ಮದಿನ.
ಈ ಹಿನ್ನೆಲೆ ಕಲಬುರಗಿ ಜಿಲ್ಲೆಯ ನಾಲವಾರದಲ್ಲಿ ಕಲಬುರಗಿ ಜಿಲ್ಲಾ ಹಡಪದ ಯುವ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸುಗೂರ ಎನ್ ಅವರು ವಿಭಿನ್ನವಾಗಿ ಶ್ರೀಗಳ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ದಾರೆ.
ತಮ್ಮ “ಜನಪ್ರೀಯ ಹೇರ್ ಡ್ರೇಸೆಸ್ ನಲ್ಲಿ ಉಚಿತ ಕ್ಷೌರ ಸೇವೆ ಕಾರ್ಯಕ್ರಮ ಹಮ್ಮಿಕೊಂಡು ನೂರಕ್ಕೂ ಹೆಚ್ಚು ಮಂದಿಗೆ ಉಚಿತ ಸೇವೆ ಸಲ್ಲಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ಹಡಪದ ಕ್ಷೌರಿಕ ಸಮಾಜ ವಿಭಾಗೀಯ ಮತ್ತು ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ ಈರಣ್ಣ ಸಿ ಹಡಪದ ಸಣ್ಣೂರ ಅವರು ಚಾಲನೆ ನೀಡಿದರು.
ಬಳಿಕ ಜಿಲ್ಲಾ ಗೌರವಾಧ್ಯಕ್ಷರಾದ ಬಸವರಾಜ ಹಡಪದ ಸುಗೂರ ಎನ್. ಹಾಗೂ ಚಿತ್ತಾಪೂರ ತಾಲೂಕು ಉಪಾಧ್ಯಕ್ಷರಾದ ಸೋಮಶೇಖರ ಹಡಪದ ಕೊಚ್ಚೂರು.
ನಾಲವಾರ ವಲಯದ ಹೋಬಳಿ ಘಟಕದ ಅಧ್ಯಕ್ಷರಾದ ಸಿದ್ದು ಹಡಪದ ಮಾರಡಗಿ ಸೇರಿದಂತೆ ಸಂಘದ ಮುಖಂಡರು ಉಚಿತ ಕ್ಷೌರ ಸೇವೆಯಲ್ಲಿ ಭಾಗವಹಿಸಿ ನೂರಕ್ಕೂ ಹೆಚ್ಚು ಗ್ರಾಹಕರಿಗೆ ಉಚಿತವಾಗಿ ಸೇವೆ ಸಲ್ಲಿಸಿದ್ದರು.









