`ಆಚಾರ್ಯ’ ಜೊತೆ ಸೇರಲು `ಧರ್ಮಸ್ಥಳಿ’ಗೆ ಬಂದೇ ಬಿಟ್ಟ `ಸಿದ್ದ’
ಟಾಲಿವುಡ್ ನ ಮೆಗಾ ನಿರೀಕ್ಷಿತ ಸಿನಿಮಾ ಆಚಾರ್ಯ, ಮೆಗಾಸ್ಟಾರ್ ಚಿರಂಜೀವಿ ಅಭಿನಯದ 152ನೇ ಸಿನಿಮಾ ಇದಾಗಿದ್ದು, ಇದರಲ್ಲಿ ಅವರ ಮಗ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೂಡ ನಟಿಸುತ್ತಿದ್ದಾರೆ.
ಇದೇ ಕಾರಣಕ್ಕಾಗಿ ಈ ಸಿನಿಮಾ ಹಿಮಾಲಯದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹೈದರಾಬಾದ್ ನಲ್ಲಿ ಸದ್ಯ ಶೂಟಿಂಗ್ ನಡೆಯುತ್ತಿದ್ದು, ಚಿತ್ರಕ್ಕಾಗಿ ಕೋಟಿ ವೆಚ್ಚದಲ್ಲಿ ಸೆಟ್ ಗಳನ್ನು ಹಾಕಲಾಗಿದೆ.
ಇದೀಗ ಈ ಸೆಟ್ ಗೆ ರಾಮ್ ಚರಣ್ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಆಚಾರ್ಯ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಆಚಾರ್ಯ ಸೆಟ್ ಗೆ ಸ್ವಾಗತ ರಾಮಚರಣ್ ಅಂತಾ ಟ್ವೀಟ್ ಮಾಡಿ ಅವರನ್ನು ಸ್ವಾಗತಿಸಿದ್ದಾರೆ.
“ಮಾ ಸಿದ್ಧ ಸರ್ವಂ ಸಿದ್ಧಂ” ಅಂತಾ ಸಿನಿಮಾದಲ್ಲಿ ಚರಣ್ ನಿರ್ವಹಿಸಲಿರುವ ಪಾತ್ರದ ಹೆಸರನ್ನು ಅವರು ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಒಟ್ಟಾರೆ ರಾಮ್ ಚರಣ್ ಪಾತ್ರದ ಶೂಟಿಂಗ್ ಆರಂಭವಾಗಿರುವ ಬಗ್ಗೆ ಕ್ಲಾರಿಟಿ ಸಿಕ್ಕಿದೆ.
ಕೊರಟಾಲ ಶಿವ ನಿರ್ದೇಶನದ ಈ ಚಿತ್ರವನ್ನು ತೇಜ ಮ್ಯಾಟ್ನಿ ಎಂಟರ್‍ಟೈನ್‍ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಮತ್ತು ರಾಮ್‍ಚರಣ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.
ಕಾಜಲ್ ಅಗರ್ವಾಲ್ ನಾಯಕಿಯಾಗಿದ್ದಾರೆ. ಬಿಡುಗಡೆಯ ದಿನಾಂಕಕ್ಕೆ ಬಂದ್ರೆ, ಜಗದೇಕಾ ವೀರುಡು ಅತಿಲೋಕಾ ಸುಂದರಿ ಮೇ 9 ರಂದು ಚಿತ್ರಮಂದಿರಗಳಲ್ಲಿ ಬಂದು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.
ಆದ್ದರಿಂದ ಆ ಸೆಂಟಿಮೆಂಟ್ ಅನ್ನು ನಂಬಿಕೊಂಡು ಚಿತ್ರತಂಡ ಈ ಚಲನಚಿತ್ರವನ್ನು ಅದೇ ಅದೃಷ್ಟದ ದಿನಾಂಕದಂದು ಬಿಡುಗಡೆ ಮಾಡಲು ನಿರ್ಧರಿಸಿದೆ.
ಇನ್ನು ರಾಮ್ ಚರಣ್ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲೂ ಅಲ್ಲೂರಿ ಸೀತಾರಾಮರಾಜುಯಾಗಿ ನಟಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel