ಟ್ರ್ಯಾಕ್ಟರ್ ಪರೇಡ್ ವೇಳೆ ಪ್ರದರ್ಶನಗೊಳ್ಳಲಿದೆ ರೈತರ ಬದುಕು
ನವದೆಹಲಿ : ನಾಳೆ ರಾಷ್ಟ್ರರಾಜಧಾನಿಯಲ್ಲಿ ಟ್ರ್ಯಾಕ್ಟರ್ ಗಳು ಘರ್ಜಿಸಲಿವೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ಅನ್ನದಾತ ಟ್ರ್ಯಾಕ್ಟರ್ ಪರೇಡ್ ನಡೆಸಲಿದ್ದಾರೆ. ಇದಕ್ಕೆ ಷರತ್ತುಬದ್ಧ ಅನುಮತಿ ಕೂಡ ಸಿಕ್ಕಿದೆ. ಈ ಮಹಾ ರ್ಯಾಲಿಯಲ್ಲಿ ಭಾಗವಹಿಸಲು ಪಂಜಾಬಿನಿಂದ ಮನೆಗೊಂದರಂತೆ ಟ್ರ್ಯಾಕ್ಟರ್ ಗಳು ಈಗಾಗಲೇ ದೆಹಲಿಗೆ ತಲುಪಿವೆ. ದೇಶದಾದ್ಯಂತ ಸುಮಾರು 1 ಲಕ್ಷಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಈ ರ್ಯಾಲಿಯಲ್ಲಿ ಭಾಗವಹಿಸಿಲಿವೆ. ಈ ಪೈಕಿ ಶೇಕಡಾ 20ರಲ್ಲಿ ರೈತರ ಬದುಕು ಕೇಂದ್ರತ ವಿವಿಧ ಥೀಮ್ ಗಳ ಸ್ತಬ್ಧಚಿತ್ರ ಪ್ರದರ್ಶಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಸ್ತಬ್ಧಚಿತ್ರಗಳ ಥೀಮ್ ಹೀಗಿದೆ
* ರೈತರ ಚಳವಳಿಯ ಇತಿಹಾಸ
* ಕೃಷಿಯಲ್ಲಿ ಮಹಿಳೆಯರ ಪಾತ್ರ
* ಕೃಷಿ ಅಭ್ಯಾಸಗಳು
* ರೈತರ ಸಂಕಷ್ಟಗಳು
* ಹಿಮಾಚಲ, ಜಮ್ಮು-ಕಾಶ್ಮೀರ, ಉತ್ತರಾಖಂಡದಲ್ಲಿ ಹಣ್ಣು ಹಂಪಲು
*ಪಂಜಾಬ್, ಹರಿಯಾಣದವರ ಸಾಂಪ್ರದಾಯಿಕ ಕೃಷಿ, ಆಧುನಿಕ ಕೃಷಿ ತಂತ್ರಜ್ಞಾನ ಪ್ರದರ್ಶನ.
ಇವುಗಳ ಜೊತೆಗೆ ಪ್ರತಿಯೊಂದು ಟ್ರ್ಯಾಕ್ಟರ್ ಗಳಲ್ಲೂ ತಿರಂಗಾ ರಾರಾಜಿಸಲಿದೆ, ಜಾನಪದ ದೇಶಭಕ್ತಿಗೀತೆಗಳು ಮೊಳಗಲಿವೆ.
ಟ್ರ್ಯಾಕ್ಟರ್ ಪರೇಡ್ ವಿಶೇಷವೇನು..?
ಈ ಮೆಗಾ ರ್ಯಾಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಪತ್ರಿ ಟ್ರ್ಯಾಕ್ಟರ್ ನಲ್ಲಿ ಐವರು ಮಾತ್ರ ಕುಳಿತುಕೊಳ್ಳುತ್ತಾರೆ. ನಿವೃತ್ತ ಯೋಧರು ಭಾಗವಹಿಸಲಿದ್ದಾರೆ, ಇವರು ಸುರಕ್ಷತೆ ಗಮನಿಸಲಿದ್ದಾರೆ. ಟ್ರ್ಯಾಕ್ಟರ್ ದುರಸ್ಥಿಗೆ ಮೆಕ್ಯಾನಿಕ್ ಗಳ ತಂಡ ಜೊತೆಗಿರಲಿದೆ.
ಇನ್ನು ಪೊಲೀಸರು ಈ ರ್ಯಾಲಿಗೆ ಒಂದಿಷ್ಟು ಷರತ್ತು ಮತ್ತು ಸೂಚನೆಗಳುನ್ನು ನೀಡಿದ್ದಾರೆ.
ಅವು ಹೀಗಿವೆ : ಗಣರಾಜೋತ್ಸವ ಪರೇಡ್ ಗೆ ಅಡ್ಡಿಪಡಿಸಬಾರದು. ಚಳಿಯಿಂದ ರಕ್ಷಣೆಗಾಗಿ ಬೇಕಾದ ಬ್ಲಾಂಕೆಟ್ ಅನ್ನು ರೈತರು ಹೊಂದಿರಬೇಕು. ಪರೇಡ್ ಮುಗಿಯುತ್ತಿದ್ದಂತೆ ಪ್ರತಿಯೊಬ್ಬರು ಹೊರಟ ಸ್ಥಳಕ್ಕೆ ಮರಳಬೇಕು.
ದೆಹಲಿಯಲ್ಲಿ ಯಾವುದೇ ಶಾಂತಿ-ಸುವ್ಯವಸ್ಥೆ ಕದಡದಂತೆ ನಡೆದುಕೊಳ್ಳಬೇಕು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಈ ಎಲ್ಲದರ ಮಧ್ಯೆ ಪಾಕಿಸ್ತಾನ ಮೂಲದ 308 ಟ್ವಿಟ್ಟರ್ ಖಾತೆಗಳು ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ ಎಂಬ ಮಾಹಿತಿಯನ್ನ ಪೊಲೀಸರು ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಹರಿಯಾಣ ಪೊಲೀಸರ ಜೊತೆ ನಾವು ಸಂಪರ್ಕದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಹರಿಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದಲ್ಲದೇ ನಾಳೆ ದೇಶದ ಪ್ರಮುಖ ನಗರಗಳಲ್ಲಿ ಟ್ರ್ಯಾಕ್ಟರ್ ಗಳು ಘರ್ಜಿಸಲಿವೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










