ಮಂಗಳೂರಿನಲ್ಲಿ ರಸ್ತೆಗುರುಳಿದ ಬೃಹತ್ ಗ್ಯಾಸ್ ಟ್ಯಾಂಕರ್..!
ಮಂಗಳೂರು : ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ರಸ್ತೆ ಮಧ್ಯೆಯೇ ಉರುಳಿ ಬಿದ್ದಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಪರಿಣಾಮ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಿದ್ದರು.
ಬೆಳ್ಳಂ ಬೆಳಿಗ್ಗೆ ಭಷ್ಟಾಧಿಕಾರಿಗಳಿಗೆ ACB ಶಾಕ್..!
ಅದೃಷ್ಟವಶಾತ್ ಟ್ಯಾಂಕರ್ ಪಲ್ಟಿಯಾದ್ರೂ ಅನಿಲ ಸೋರಿಕೆಯಾಗದ ಹಿನ್ನೆಲೆ ಭಾರೀ ಅನಾಹುತ ತಪ್ಪಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೂರಿಕುಮೇರು ಎಂಬಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ವಿಟ್ಲ ಠಾಣಾ ಪೊಲೀಸರ ಬೇಟಿ ನೀಡಿ ಪರಿಶೀಲನೆ ನಡೆಸಿ ಮನೆಗಳಲ್ಲಿ ಬೆಂಕಿ ಬಳಸದಂತೆ ಮೈಕ್ ಗಳ ಮೂಲಕ ಸೂಚನೆ ನೀಡಿದ್ದಾರೆ. ಇನ್ನೂ ಟ್ಯಾಂಕರ್ ಸ್ಥಳಾಂತರ ಮಾಡಲು ಎಂಆರ್ ಪಿಎಲ್ ನಿಂದ ಪರಿಣಿತರ ತಂಡ ಸ್ಥಳಕ್ಕೆ ದೌಡಾಯಿಸಿದೆ.
ಬೆಂಗಳೂರಿಗರೇ ಗಮನಿಸಿ : ಲಾಲ್ ಬಾಗ್ ಪ್ರವೇಶ ಶುಲ್ಕ ಏರಿಕೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








