`ನಮೋ’ ಕೃಷಿ ತಿದ್ದುಪಡಿ ಕಾಯ್ದೆಗೆ `ಜೋ ಬಿಡನ್ ಬೆಂಬಲ’
ದೆಹಲಿ : ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನ ವಿರೋಧಿ, ಕಾನೂನುಗಳನ್ನ ವಾಪಸ್ ಪಡೆಯುವವರೆಗೂ ನಾವು ಮನೆಗಳಿಗೆ ತೆರಳುವುದಿಲ್ಲ ಅಂತ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರತಿಭಟನೆಯನ್ನ ಕೆಲವರು ಭಯೋತ್ಪಾದಕರು ನಡೆಸುತ್ತಿರೋ ಪ್ರತಿಭಟನೆ ಎಂದು ಆರೋಪಿಸುತ್ತಿದ್ದಾರೆ. ಇನ್ನೂ ಕೆಲವರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ.
ಈ ಮಧ್ಯೆ ಅದೇ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗೆ ಅಮೆರಿಕ ಬುಧವಾರ ಬೆಂಬಲ ಸೂಚಿಸಿದೆ.
ಹೌದು…! ಹೊಸ ಕೃಷಿ ಕಾಯ್ದೆಯಿಂದ ಮಾರುಕಟ್ಟೆ ವಿಸ್ತಾರವಾಗಲಿದೆ. ಹೊಸ ಕಾನೂನಿನಿಂದ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚುತ್ತೆ. ಶಾಂತಿಪೂರ್ಣ ಪ್ರತಿಭಟನೆ ಪ್ರಜಾಪ್ರಭುತ್ವದ ಸಂಕೇತವಾಗಲಿದೆ.
ಹೀಗಾಗಿ ಪ್ರತಿಭಟನಾಕಾರರ ಜತೆ ಮಾತುಕತೆ ಅವಶ್ಯಕ. ಮಾತುಕತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಬೈಡನ್ ಸರ್ಕಾರ ಬೆಂಬಲ ಸೂಚಿಸಿದೆ.
ಇದು ಒಂದು ಕಡೆಯಾದ್ರೆ ಜಗತ್ತಿನ ಪ್ರಖ್ಯಾತ ಪಾಪ್ ಗಾಯಕಿ ರಿಹಾನಾ, ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದು, ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇಷ್ಟು ದಿನ ದೇಶದಲ್ಲಿ ಮಾತ್ರ ಸದ್ದು ಮಾಡುತ್ತಿದ್ದ ರೈತ ಪ್ರತಿಭಟನೆ ಸುದ್ದಿ, ಇದೀಗ ಜಾಗತೀಕ ಸುದ್ದಿಯಾಗಿದೆ.
ಇನ್ನು ಗಾಯಕಿ ರಿಹಾನಾ, ಮಾಡಿದ ಟ್ವೀಟ್ ಗೆ ಜಾಗತೀಕವಾಗಿ ಬೆಂಬಲ ವ್ಯಕ್ತವಾಗುತ್ತಿದ್ದರೂ, ನಮ್ಮ ಕೆಲ ಸೆಲಬ್ರೆಟಿಗಳು ಇದು ನಮ್ಮ ವಿಚಾರ, ನಿಮಗ್ಯಾಕೆ ಅನ್ನೋ ರೀತಿ ರೀ ಟ್ವೀಟ್ ಗಳನ್ನ ಮಾಡುತ್ತಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರಿಹಾನಾ ಬಗ್ಗೆ ಚರ್ಚೆ ಆಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









