ಭಿಕ್ಷುಕರಿಗೆ ಬಂಪರ್ ಆಫರ್ : ಸರ್ಕಾರದಿಂದ ದಿನಕ್ಕೆ 215 ರೂ.
ರಾಜಸ್ಥಾನ : ಮನೆಯಿಂದ ಹೊರಗೆ ಬಂದರೆ ಒಂದಲ್ಲಾ ಒಂದು ಕಡೆ ಭಿಕ್ಷುಕರು ನಮ್ಮ ಎದುರಿಗೆ ಸಿಗ್ತಾರೆ. ಕೆಲವರು ಅವರಿಗೆ ತೋಚಿದ ಸಹಾಯವನ್ನ ಮಾಡ್ತಾರೆ, ಇನ್ನುಳಿದವರು ಅವರನ್ನು ನಿರ್ಲಕ್ಷ್ಯ ಮಾಡ್ತಾರೆ.
ಆದರೆ, ರಾಜಸ್ಥಾನ ಸರ್ಕಾರ ಇಂತಹ ಜನರ ಬದುಕನ್ನು ಹಸನು ಮಾಡಲು ಹೊರಟಿದೆ. ಈ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಜೈಪುರದಲ್ಲಿ ‘ಭಿಕ್ಷುಕ ಮುಕ್ತ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ರಾಜಸ್ಥಾನ ಕೌಶಲ್ಯ ಮತ್ತು ಜೀವನೋಪಾಯಅಭಿವೃದ್ಧಿ ನಿಗಮ, ಸೊಪಾನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಟೆಕ್ನಾಲಜಿ ಮತ್ತು ಮ್ಯಾನೇಜ್ ಮೆಂಟ್ ವತಿಯಿಂದ ಭಿಕ್ಷುಕ ಮುಕ್ತ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ಕಾರ್ಯಕ್ರಮದ ಭಾಗವಾಗಿ 43 ಭಿಕ್ಷುಕರನ್ನು ತೆಗೆದುಕೊಂಡು ಅವರಿಗೆ ವಿವಿಧ ತರಭೇತಿ ನೀಡುತ್ತಿದೆ.
ರಾಜಸ್ಥಾನ ಕೌಶಲ್ಯ ಮತ್ತು ಜೀವನೋಪಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನೀರಜ್ ಕುಮಾರ್ ಪವನ್ ಅವರು ಬೆಗ್ಗರ್ಸ್ ಫ್ರೀ ಪ್ರೋಗ್ರಾಂ ಬಗ್ಗೆ ಮಾಹಿತಿ ನೀಡುತ್ತಾ, ರಾಜ್ಯದ ಎಲ್ಲ ಭಿಕ್ಷುಕರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವುದು ನಮ್ಮ ಉದ್ದೇಶ.
ರಾಜ್ಯವನ್ನು ಭಿಕ್ಷುಕರಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯದ ಮುಖ್ಯಮಂತ್ರಿ ಆದೇಶಿಸಿದ್ದು, ಈ ಕಾರ್ಯಕ್ರಮ ವನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಜೈಪುರದಲ್ಲಿ ರಾಜಸ್ಥಾನ ಪೊಲೀಸರು ನಡೆಸಿದ ಸಮೀಕ್ಷೆ ಆಧರಿಸಿ, ಬೆಗ್ಗರ್ಸ್ ಫ್ರೀ ಪ್ರೋಗ್ರಾಂ ಅನ್ನು ಇಲ್ಲಿ ಪ್ರಾರಂಭಿಸಲಾಗಿದೆ. ಇದಕ್ಕಾಗಿ ‘ಕೌಶಲ್ ವರ್ಧನ್’ ಎಂಬ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಬ್ಯಾಚ್ ವಾರು ತರಬೇತಿ ಯನ್ನು ನೀಡಲಾಗಿದೆ.
ಪ್ರಸ್ತುತ 20 ಜನರಿಗೆ ತರಬೇತಿ ನೀಡಲಾಗಿದ್ದು, ತರಬೇತಿ ನಂತರ ಉದ್ಯೋಗ ನೀಡಲಾಗುವುದು. ಈ ಕಾರ್ಯಕ್ರಮದ ಮೂಲಕ ಅವರನ್ನು ಉತ್ತಮ ಪ್ರಜೆಯನ್ನಾಗಿ ಮಾಡಲಾಗುವುದು ಎಂದು ಪವನ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel