ಚೆಪಾಕ್ ಅಂಗಳದಲ್ಲಿ ಆಂಗ್ಲರ ದರ್ಬಾರು… ಫಾಲೋ ಆನ್ ನಿಂದ ಭಾರತ ಆಗುತ್ತಾ ಪಾರು..?
ಚೆನ್ನೈ : ಚೆಪಾಕ್ ಅಂಗಳದಲ್ಲಿ ಇಂಗ್ಲೆಂಡ್ ತಂಡದ ದರ್ಬಾರು ಮುಂದುವರಿದಿದ್ದು, ಟೀ ಇಂಡಿಯಾ ಫಾಲೋಆನ್ ಭೀತಿಯಲ್ಲಿದೆ. ರಿಶಬ್ ಪಂತ್ ಅಬ್ಬರದ ಆಟ (91ರನ್, 88 ಎಸೆತ, 9 ಬೌಂಡರಿ, 5 ಸಿಕ್ಸರ್) ಹಾಗೂ ಚೇತೇಶ್ವರ್ ಪೂಜಾರ ಸಮಯೋಚಿತ (73ರನ್, 143 ಎಸೆತ, 11 ಬೌಂಡರಿ) ಶತಕದಾಟದ ನಡುವೆಯೂ ಆತಿಥೇಯ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್‍ಗೆ 257 ರನ್‍ಗಳಿಸಿದೆ. ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 121 ರನ್‍ಗಳಿಸಬೇಕಿದ್ದು, ಇನಿಂಗ್ಸ್ ಮುನ್ನಡೆಗಾಗಿ 321 ರನ್ ಪೇರಿಸಬೇಕಿದೆ.
ಇದಕ್ಕೂ ಮೊದಲು 5 ವಿಕೆಟ್ ಗೆ 555 ರನ್ ಗಳಿಂದ ದಿನದಾಟ ಮುಂದುವರಿಸಿದ ಇಂಗ್ಲೆಂಡ್ ತಂಡ ಕೇವಲ 23 ರನ್ ಗಳಿಸುವಷ್ಟರಲ್ಲಿ ಬಾಕಿ 2 ವಿಕೆಟ್ ಕಳೆದುಕೊಂಡಿತು. ಇಂದು ಇಂಗ್ಲೆಂಡ್ ಪರ ಡಮ್ ಬೆಸ್ 34 ರನ್, ಆಂಡರ್ ಸನ್ 1 ರನ್ ಗಳಿಸಿದ್ರೆ, ಜಾಕ್ ಲೀಚ್ 14 ರನ್ ಗಳಿಸಿ ನಾಟೌಟ್ ಆಗಿ ಉಳಿದರು.
ದಿನ ಆರಂಭದಲ್ಲಿ ಭಾರತೀಯ ಬೌಲರ್ ಗಳು ಇಂಗ್ಲೆಂಡ್ ಮೇಲೆ ಸವಾರಿ ಮಾಡಿದ್ರೆ, ಇತ್ತ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಆಂಗ್ಲರ ದಾಳಿಗೆ ಕಂಗಲಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಮೊದಲು ರೋಹಿತ್ ಶರ್ಮಾ (6) ರನ್, ಶುಭಮಾನ್ ಗಿಲ್ 29 ರನ್, ವಿರಾಟ್ ಕೊಹ್ಲಿ 11 ರನ್, ಅಜಿಂಕ್ಯಾ ರಹಾನೆ 1 ರನ್ ಗಳಿಸಿ ಔಟ್ ಆದ್ರು. ಈ ಸಂಕಷ್ಟದ ಸ್ಥಿತಿಯಲ್ಲಿ ತಂಡಕ್ಕೆ ನೆರವಾದ ಪಂತ್, ಪೂಜಾರಾ ಎಚ್ಚರಿಕೆಯಿಂದ ಆಂಗ್ಲರ ದಾಳಿಯನ್ನ ಮೆಟ್ಟಿನಿಂತರು.
ಅಗ್ರಕ್ರಮಾಂಕದ ವೈಫಲ್ಯ ಹಾಗೂ ಇಂಗ್ಲೆಂಡ್ ಬೌಲರ್‍ಗಳ ಕರಾರುವಾಕ್ ದಾಳಿ ನಡುವೆಯೂ ರಿಷಭ್ ಪಂತ್ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದರು. ಆದರೆ,ಚಹಾ ವಿರಾಮದ ಬಳಿಕ ಡಾಮ್ ಬೆಸ್ ಮತ್ತೊಮ್ಮೆ ಭಾರತಕ್ಕೆ ವಿಲನ್ ಆದರು. ಈ ಜೋಡಿ 5ನೇ ವಿಕೆಟ್‍ಗೆ 119 ರನ್ ಜತೆಯಾಟವಾಡಿ ಇನಿಂಗ್ಸ್‍ಗೆ ಸುಧಾರಣೆ ನೀಡಿತು. ಪೂಜಾರ ನಿರ್ಗಮನದ ಬಳಿಕವೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಪಂತ್ ಓಟಕ್ಕೂ ಡಾಮ್ ಬೆಸ್ ಬ್ರೇಕ್ ಹಾಕಿದರು.

ಸದ್ಯ ಕ್ರೀಸ್ ನಲ್ಲಿ ಸ್ಥಳೀಯ ಪ್ರತಿಭೆಗಳಾದ ವಾಷಿಂಗ್ಟನ್ ಸುಂದರ್ (33) ಹಾಗೂ ಆರ್.ಅಶ್ವಿನ್ (8) ಇದ್ದಾರೆ. ಟೀಂ ಇಂಡಿಯಾ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 121 ರನ್‍ಗಳಿಸಬೇಕಿದ್ದು, ಇನಿಂಗ್ಸ್ ಮುನ್ನಡೆಗಾಗಿ 321 ರನ್ ಪೇರಿಸಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









