ಶಿವಸೇನೆ Shiv Sena ಕಿರಿಕ್ : ಅಂತರರಾಜ್ಯ ಸಾರಿಗೆ ಬಸ್ ಸಂಚಾರ ಸ್ಥಗಿತ
ಚಿಕ್ಕೋಡಿ : ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಮುಂದುವರಿದ ಕಾರಣ, ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ ಗಳನ್ನ ಸಾರಿಗೆ ಇಲಾಖೆ ಸ್ಥಗಿತಗೊಳಿಸಿದೆ.
ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಕೊಲ್ಲಾಪುರದಲ್ಲಿ ಕನ್ನಡ ನಾಮ ಫಲಕಗಳಿಗೆ ಶಿವಸೇನೆ ಕಾರ್ಯಕರ್ತರು ಮಶಿ ಬಳಿದು ಉದ್ದಟತನ ತೋರಿದ್ದರು.
ಇದಕ್ಕೆ ತಕ್ಕ ಉತ್ತರವಾಗಿ ಕನ್ನಡ ಸಂಘಟನೆಗಳು ಬೆಳಗಾವಿಯಲ್ಲಿ ಮರಾಠಿ ನಾಮ ಫಲಕಗಳಿಗೆ ಮಸಿ ಬಳಿದಿದ್ದರು.
ಇದರಿಂದ ಕೆರಳಿ ನಿನ್ನೆ ಸಂಜೆ ಕೊಲ್ಲಾಪುರದ ಬಸ್ ನಿಲ್ದಾಣದಲ್ಲಿ ಶಿವಸೇನೆ ಪುಂಡರು ಕರ್ನಾಟಕದ ಬಸ್ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ರಾಜ್ಯಕ್ಕೆ ಬರದಂತೆ ತಾಕೀತು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರದ ಕೊಲ್ಲಾಪುರ, ಮೀರಜ, ಸಾಂಗಲಿಗೆ ತೆರಳುವ ಬಸ್ ಗಳನ್ನ ಸಂಚಾರವನ್ನ ಸಾರಿಗೆ ಇಲಾಖೆ ಸ್ಥಗಿತಗೊಳಿಸಿದೆ.