ADVERTISEMENT
Tuesday, October 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಹೆಣ್ಮಕ್ಳ ಕಥೆ ಅಂತೇಳಿ ಹೀಗಾ ಮಾಡೋದು.. ಏನಿದು ಒಂದು ಗಂಟೆಯ ಕಥೆ..?

admin by admin
March 19, 2021
in Cinema, Newsbeat, ಮನರಂಜನೆ
Ondhu ganteya kathe
Share on FacebookShare on TwitterShare on WhatsappShare on Telegram

ಹೆಣ್ಮಕ್ಳ ಕಥೆ ಅಂತೇಳಿ ಹೀಗಾ ಮಾಡೋದು..! ಹೇಗಿದೆ ಗೊತ್ತಾ ಒಂದು ಗಂಟೆಯ ಕಥೆ..?

ಟೈಟಲ್ : ಒಂದು ಗಂಟೆಯ ಕಥೆ
ಜಾನರ್ : ಕಾಮಿಡಿ
ನಿರ್ದೇಶಕ : ದ್ವಾರ್ಕಿ ರಾಘವ್
ತಾರಾಗಣ : ಅಜಯ್ ರಾಜ್, ಶನಾಯ ಕಾಟ್ವೆ, ಸ್ವಾತಿ ಶರ್ಮ, ಪ್ರಕಾಶ್ ತುಮ್ಮಿನಾಡ್, ಯಶ್ವಂತ್ ಸರ್ ದೇಶಪಾಂಡೆ ಮುಂತಾದವರು..
ನಿರ್ಮಾಣ : ಕಶ್ಯಪ್ ದಾಕೋಜು
ಸಂಗೀತ : ಡೆನಿಸ್ ವಲ್ಲಭನ್
ಸಿನಿಮಾಟೋಗ್ರಾಫಿ : ಸೂರ್ಯಕಾಂತ್
ಸಂಕನಲ : ಗಣೇಶ್ ಮಲ್ಲಯ್ಯ

Related posts

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

October 13, 2026
ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

October 13, 2026

ಕೇವಲ ಟೈಟಲ್ ನಿಂದಲೇ ಸಿನಿಪ್ರಿಯರ ಗಮನ ಸೆಳೆದಿದ್ದ ಸಿನಿಮಾ ಒಂದು ಗಂಟೆಯ ಕಥೆ..! ಟೈಟಲ್ ನೋಡಿದ, ಕೇಳಿದ ತಕ್ಷಣ ಒಂದು ಗಂಟೆಯ ಕಥೆ ಅಂದ್ರೆ ಒಂದು ಗಂಟೆಯಲ್ಲಿ ನಡೆಯುವ ಕಥೆನಾ..? ಅಥವಾ ಗಂಟೆ ಅಂದ್ರೆ `ಬೆಲ್’ ಸುತ್ತ ಸುತ್ತುವ ಕಥೆನಾ..? ಅನ್ನೋ ಪ್ರಶ್ನೆಗಳನ್ನ ಹುಟ್ಟುವುದು ಸಾಮಾನ್ಯ. ಇದರ ಜೊತೆಗೆ ಇದು ಫುಲ್ ಅಂಡ್ ಫುಲ್ ಹೆಣ್ಮಕ್ಳ ಕಥೆ… ಬಟ್ ಹುಡುಗ್ರು ನೋಡಬಹುದು ಗುರು ಎಂಬ ಟ್ಯಾಗ್ ಲೈನ್ ಎಲ್ಲರ ತಲೆಗೆ ಹುಳ ಬಿಟ್ಟು ಕುತೂಹಲವನ್ನ ಹೆಚ್ಚಿಸಿತ್ತು. ಇನ್ನ ಈ ಸಿನಿಮಾ ಟ್ರೈಲರ್, ಇದೊಂದು ಪಕ್ಕಾ ಔಟ್ ಅಂಡ್ ಔಟ್ ಕಾಮಿಡಿ ಜಾನರ್ ಸಿನಿಮಾ ಅಂತ ಸಾರಿ ಹೇಳಿತ್ತು. ಇದೀಗ ಸಿನಿಮಾ ಥಿಯೇಟರ್ ಅಂಗಳಕ್ಕೆ ಬಂದಿದ್ದು, ಒಂದು ಗಂಟೆಯ ಕಥೆ ಸಿನಿಮಾ ಪ್ರೇಕ್ಷಕರ ಮನ ಗೆಲ್ತಾ..? ಅಸಲಿಗೆ ಆ ಗಂಟೆ ಏನು..? ಯಾರದ್ದು..? ಯಾಕೆ..? ಅನ್ನೋದನ್ನ ನಮ್ಮ ಸಮೀಕ್ಷೆಯಲ್ಲಿ ನೋಡೋಣ.

Ondhu ganteya kathe

ಕಥೆ

ಅಜಯ್ ( ಅಜಯ್ ರಾಜ್) ಪ್ಲೇಬಾಯ್ ಅಟಿಟ್ಯೂಡ್ ಹುಡುಗ . ಈಗಾಗಲೇ ಪ್ರೇಯಸಿ ಇದ್ದರೂ ಬೇರೊಬ್ಬರ ಜೊತೆ ಮದ್ವೆಗೆ ರೆಡಿ ಆಗಿರ್ತಾನೆ. ಈ ವಿಚಾರ ತಿಳಿದ ಅನಾಥೆ ಸರೋಜಾ (ಶನಾಯ ಕಾಟ್ವೆ) ಈ ಬಗ್ಗೆ ಪ್ರಶ್ನೆ ಮಾಡ್ತಾಳೆ. ಆಗ ಅಜಯ್ ನಾವಿಬ್ರು ಮದ್ವೆ ಆಗೋದು ಬೇಡ, ಅದು ಅಸಾಧ್ಯ. ನಾನು ಬೇರೆ ಮದ್ವೆ ಆದ್ರೂ ಜೊತೇಲಿ ಲೈಫ್ ಲಾಂಗ್ ಇರೋಣ ಅಂತಾ ಹೇಳ್ತಾನೆ. ಇದಕ್ಕೆ ಸರೋಜಾ ಓಕೆ ಅಂತಾ ಹೇಳಿ ಎಂದಿನಂತೆ ರೆಸಾರ್ಟ್‍ಗೆ ಹೋಗ್ತಾರೆ. ಅಲ್ಲಿ ಅವರಿಬ್ಬರ ಮಿಲನವಾಗುತ್ತೆ. ಕಟ್ ಮಾಡಿದ್ರೆ… ಅಜಯ್ ತನ್ನ ಅಂಗವನ್ನ ಕಳೆದುಕೊಂಡಿರ್ತಾನೆ. ಇತ್ತ ಸರೋಜಾ ಪರಾರಿ ಆರ್ಗಿತಾಳೆ. ಇದರಿಂದ ಗಾಬರಿಗೊಂಡ ಅಜಯ್ ಆಸ್ಪತ್ರೆಗೆ ಹೋದ್ರೆ ಅಲ್ಲಿ ಮೂರು ಗಂಟೇಲಿ ಆಪರೇಷನ್ ಮಾಡಬೇಕು ಅಂತ ಹೇಳ್ತಾರೆ. ಆಗ ತನ್ನ ಅಂಗವನ್ನ ಸರೋಜಾ ಕಟ್ ಮಾಡಿರೋದು ಅಜಯ್ ಗೆ ಗೊತ್ತಾಗುತ್ತೆ. ಇದು ಮಾಧ್ಯಮಗಳಲ್ಲಿ ಹಾಟ್ ನ್ಯೂಸ್ ಆಗುತ್ತೆ. ಅಜಯ್ ಮಾಧ್ಯಮಗಳಲ್ಲಿ ಸರೋಜಾಗಾಗಿ ಮನವಿ ಮಾಡ್ತಾನೆ..

ಹಾಗಾದ್ರೆ ಅಜಯ್ ಅಂಗವನ್ನ ಕಟ್ ಮಾಡಿದ್ದು ಯಾಕೆ..? ಸರೋಜಾ ಮತ್ತೆ ವಾಪಸ್ ಬರ್ತಾಳಾ..? ಅನ್ನೋದು ಸಿನಿಮಾದ ಕಥೆ.

ನಟಿನಟರು

ಏಕಾಏಕಿ ಅಂಗವನ್ನ ಕಳೆದುಕೊಳ್ಳುವ ಹುಡುಗನ ಪಾತ್ರದಲ್ಲಿ ಅಜಯ್ ಪರಕಾಯ ಪ್ರವೇಶ ಮಾಡಿದ್ದಾರೆ. ರೋಮ್ಯಾನ್ಸ್, ಹೀರೋಯಿಸಂ, ಕಾಮಿಡಿ, ವಿಲನ್ ಎಲ್ಲಾ ಶೇಡ್ ಗಳಲ್ಲೂ ಅಜಯ್ ಅಭಿನಯ ಅದ್ಭುತವಾಗಿದೆ. ಸಿನಿಮಾದ ಆರಂಭದಿಂದ ಅಂತ್ಯದವರೆಗೆ ಅಜಯ್ ಎಲ್ಲರ ಗಮನ ಸೆಳೆಯುತ್ತಾರೆ. ನಂಬಿಸಿ ಮೋಸ ಮಾಡುವ ಹುಡುಗನಿಗೆ ತಕ್ಕಪಾಠ ಕಲಿಸುವ ಗಟ್ಟಿಗಿತ್ತಿ ಸರೋಜಾ ಪಾತ್ರದಲ್ಲಿ ಶನಾಯ ಕಾಟ್ವೆ ಶಹಬಾಷ್ ಎಂಬಂತೆ ನಟಿಸಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ಅವರ ಅಭಿನಯ ನೋಡುಗರ ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡುತ್ತೆ. ಇನ್ನುಳಿದಂತೆ ಸ್ವಾತಿ ಶರ್ಮ, ಪ್ರಕಾಶ್ ತುಮ್ಮಿನಾಡ್, ಯಶವಂತ ಸರ್ ದೇಶಪಾಂಡೆ, ಚಿದಾನಂದ್, ಪ್ರಶಾಂತ್ ಸಿದ್ದಿ, ಸಿಲ್ಲಿಲಲ್ಲಿ ಆನಂದ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

Ondhu ganteya kathe

ವಿಶ್ಲೇಷಣೆ
ಸಮಾಜದಲ್ಲಿ ಹೆಣ್ಣನ್ನ ಕೇವಲ ಒಂದು ವಸ್ತುವಾಗಿ ನೋಡಲಾಗ್ತಿದೆ. ಹೆಣ್ಣಿನ ಮೇಲೆ ಆಗುತ್ತಿರುವ ಅತ್ಯಾಚಾರಗಳು, ದೌರ್ಜನ್ಯಗಳು, ಅನ್ಯಾಯಕ್ಕೆ ಈ ಸಿನಿಮಾದಲ್ಲಿ ಸರಿಯಾದ ಉತ್ತರವಿದೆ. ಹೆಣ್ಣನ್ನ ಕೇಲವ ಒಂದು ವಸ್ತುವಾಗಿ ನೋಡುವ, ಬಳಸಿಕೊಳ್ಳುವ ವ್ಯಕ್ತಿಗಳಿಗೆ ಯಾವ ರೀತಿ ಶಿಕ್ಷೆ ನೀಡಬೇಕು ಅನ್ನೋದು ಸಿನಿಮಾದಲ್ಲಿ ತೋರಿಸಲಾಗಿದೆ. ಒಂದು ಸಿರಿಯಸ್ ಕಥೆಯನ್ನ ನಿರ್ದೇಶಕ ಹಾಸ್ಯಮಯವಾಗಿ ತೋರಿಸಿದ್ದಾರೆ. ಹೀಗಾಗಿ ಡೈಲಾಗ್ ಗಳು ಡಬಲ್ ಮೀನಿಂಗ್ ನಲ್ಲೇ ಇರುತ್ವೆ. ವಿಷ್ಯ ಸೊಂಟದ ಕೆಳಗಿರುವ ಅಂಗಕ್ಕೆ ಸಂಬಂಧಪಟ್ಟಿರುವ ಕಾರಣ ಡೈಲಾಗ್ ಗಳು ಅದೇ ರೇಂಜ್ ನಲ್ಲಿರುತ್ವೆ. ಇದು ಕಚಗುಳಿಯ ಜೊತೆ ಜೊತೆಗೆ ಕಿರಿಕಿರಿಯನ್ನೂ ಕೂಡ ಉಂಟು ಮಾಡುತ್ತೆ. ಮೊದಲಾರ್ಧದಲ್ಲಿ ಸಿನಿಮಾವನ್ನ ಚೆನ್ನಾಗಿ ಎಂಜಾಯ್ ಮಾಡಬಹುದು. ಆದ್ರೆ ದ್ವಿತೀಯಾರ್ಧದಲ್ಲಿ ಸಿನಿಮಾ ಡಲ್ ಹೊಡೆಯುತ್ತೆ. ಲ್ಯಾಗ್ ಸ್ಕ್ರೀನ್ ಪ್ಲೇ ಬೋರ್ ಎನಿಸುತ್ತೆ. ನಿರ್ದೇಶಕರು ಕಾಮಿಡಿಗೆ ಹೆಚ್ಚು ಇಂರ್ಪಾಟೆನ್ಸ್ ಕೊಟ್ಟು, ಕಥೆಯನ್ನ ಸೈಡ್ ಲೇನ್ ಮಾಡಿದಂತೆ ಅನಿಸುತ್ತೆ. ನಿರ್ದೇಶಕರು ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕಿತ್ತು. ಸಿನಿಮಾ ಕಥೆಯಲ್ಲಿ ಧಮ್ ಇದ್ದರೂ ಸ್ಕ್ರೀನ್ ಪ್ಲೇಯಲ್ಲಿ ಶಕ್ತಿ ಇಲ್ಲ.

ಪ್ಲಸ್ ಪಾಯಿಂಟ್ಸ್
ಕಥೆ
ತಾರಾಗಣ
ಮೊದಲಾರ್ಧ
ಕಾಮಿಡಿ
ಕ್ಲೈಮ್ಯಾಕ್ಸ್

ಮೈನಸ್ ಪಾಯಿಂಟ್ಸ್
ಸ್ಕ್ರೀನ್ ಪ್ಲೇ
ಬೇಡವಾದ ದೃಶ್ಯಗಳು
ಒಂದಿಷ್ಟು ಸೆಕೆಂಡ್ ಆಫ್
ಸಂಗೀತ

ರೇಟಿಂಗ್
3.0/5

Tags: filmOndhu ganteya katheSandalwood
ShareTweetSendShare
Join us on:

Related Posts

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

by Shwetha
October 13, 2026
0

ಈಗಿನ ಕಾಲದಲ್ಲಿ ನ್ಯಾಯಾಧೀಶರು ಅಥವಾ ರಾಜಕೀಯ ನಾಯಕರು ಬಳಸುವ ಒಂದು ಸಣ್ಣ ಪದ ಕೂಡ ದೊಡ್ಡ ಸಂಚಲನಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಯುವಕರನ್ನು...

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

by Shwetha
October 13, 2026
0

ಕಾವೇರಿ 2.0 ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಹಾಗೂ ಖಾತಾ ಸಂಬಂಧಿತ ಸೇವೆಗಳಿಗೆ ಅಡಚಣೆ ಉಂಟಾಗಿದೆ. ವಿಶೇಷವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೊಸ...

ಪೆಟ್ರೋಲ್‌ಗೆ ₹5, ಡೀಸೆಲ್‌ಗೆ ₹3 ಏರಿಕೆ: ಜಿಯೋ-ಬಿಪಿ, ನಯಾರಾ ಇಂಧನ ದರ ಹೆಚ್ಚಳ

ಪೆಟ್ರೋಲ್‌ಗೆ ₹5, ಡೀಸೆಲ್‌ಗೆ ₹3 ಏರಿಕೆ: ಜಿಯೋ-ಬಿಪಿ, ನಯಾರಾ ಇಂಧನ ದರ ಹೆಚ್ಚಳ

by Shwetha
October 13, 2026
0

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಖಾಸಗಿ ತೈಲ ಮಾರಾಟ ಕಂಪನಿಗಳ ಇಂಧನ ದರ ಹೆಚ್ಚಳ ಮತ್ತೊಂದು ಹೊರೆ ತಂದಿದೆ. ಜಿಯೋ-ಬಿಪಿ ಮತ್ತು...

ಕೈ ಪಾಳಯಕ್ಕೆ ಬಿಗ್ ಶಾಕ್: 25 ಶಾಸಕರು ಶೀಘ್ರವೇ ಬಿಜೆಪಿ ಸೇರ್ಪಡೆ – ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಲೇವಡಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

ಕೈ ಪಾಳಯಕ್ಕೆ ಬಿಗ್ ಶಾಕ್: 25 ಶಾಸಕರು ಶೀಘ್ರವೇ ಬಿಜೆಪಿ ಸೇರ್ಪಡೆ – ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಲೇವಡಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

by Shwetha
October 13, 2026
0

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಪರೇಷನ್ ಕಮಲದ ಸುಳಿವು ಸಿಕ್ಕಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದೆ. ಮುಖ್ಯಮಂತ್ರಿ...

ಗಾಂಧಿ ನೆಹರೂ ಸಾಕು ನಮ್ಮವರೇ ನಾಯಕರು ಬೇಕು : ಮುಸ್ಲಿಂ ಸಮುದಾಯ ಯಾರೊಬ್ಬರ ಜೀತದಾಳಲ್ಲ ಅಸಾದುದ್ದೀನ್ ಒವೈಸಿ ಹೊಸ ರಾಜಕೀಯ ಸಮರಕ್ಕೆ ಕಾಂಗ್ರೆಸ್ ಕಂಗಾಲು

ಗಾಂಧಿ ನೆಹರೂ ಸಾಕು ನಮ್ಮವರೇ ನಾಯಕರು ಬೇಕು : ಮುಸ್ಲಿಂ ಸಮುದಾಯ ಯಾರೊಬ್ಬರ ಜೀತದಾಳಲ್ಲ ಅಸಾದುದ್ದೀನ್ ಒವೈಸಿ ಹೊಸ ರಾಜಕೀಯ ಸಮರಕ್ಕೆ ಕಾಂಗ್ರೆಸ್ ಕಂಗಾಲು

by Shwetha
October 13, 2026
0

ದೇಶದ ರಾಜಕೀಯ ಅಖಾಡದಲ್ಲಿ ಮತದಾರರ ಪಟ್ಟಿ ಅಕ್ರಮ ಮತ್ತು ಚುನಾವಣಾ ಆಯುಕ್ತರ ರಾಜೀನಾಮೆ ಕುರಿತಾದ ಪ್ರತಿಭಟನೆಗಳು ಕಿಚ್ಚು ಹಚ್ಚಿರುವ ನಡುವೆಯೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram