ಬೆಂಗಳೂರು, ಜೂನ್ 7: ಚಿರಂಜೀವಿ ಸರ್ಜಾ ಇನ್ನಿಲ್ಲ ಎನ್ನುವ ಸುದ್ದಿ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಂದು ಬಡಿದಿದೆ. ಸರ್ಜಾ ಅವರ ಸಾವನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಸರ್ಜಾ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಆಸ್ಪತ್ರೆಗೆ ಬಂದ ಹಿರಿಯ ನಟಿ ತಾರಾ ಮಾಧ್ಯಮಗಳ ಜೊತೆ ಮಾತನಾಡಿದ್ದು, ‘ಮೊದಲು ಸುಳ್ಳು ಸುದ್ದಿ ಇರಬಹುದು ಅಂದು ಕೊಂಡೆ. ನಂತರ ಸುಳ್ಳು ಸುದ್ದಿಯಾಗಿರಲಿ ಎಂದು ಪ್ರಾರ್ಥಿಸುತ್ತಾ ಆಸ್ಪತ್ರೆಗೆ ಬಂದೆ. ಆದರೆ ಹೃದಯಾಘಾತದಿಂದ ಚಿರು ಸಾವನ್ನಪ್ಪಿರೋದು ನಿಜವಾಗಿತ್ತು, ಚಿರು ಕುಟುಂಬಕ್ಕೆ ದೇವರು ದುಃಖ ಬರಿಸೋ ಶಕ್ತಿ ನೀಡಲಿ’ ಎಂದು ಕಣ್ಣೀರು ಹಾಕಿದರು. ಇದೇ ವೇಳೆ ಪುಟ್ಟ ಚಿರಂಜೀವಿ ಬರುತ್ತಿದ್ದಾನೆ, ಮೇಘಾನಾ ರಾಜ್ ತಾಯಿ ಆಗುತ್ತಾ ಇದ್ದಾರೆ ಎಂಬ ವಿಷಯವನ್ನು ತಿಳಿಸಿದರು.
ಹಿರಿಯ ನಟ ಸುಂದರ್ ರಾಜ್ ಮತ್ತು ಪರಿಮಳಾ ಜೋಶಿ ದಂಪತಿಗಳ ಪುತ್ರಿ ಮೇಘನಾ ಮತ್ತು ಚಿರಂಜೀವಿ ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಮೇಘನಾ ಈಗ 5 ತಿಂಗಳ ಗರ್ಭಿಣಿಯಾಗಿದ್ದು, ಅವರ ಕುಟುಂಬ ಮಗುವಿನ ನಿರೀಕ್ಷೆಯಲ್ಲಿತ್ತು.
ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ
ಅಯೋಧ್ಯೆಯ ಭವ್ಯ ರಾಮ ಮಂದಿರದ ದೇಣಿಗೆ ವಿಷಯದಲ್ಲಿ ಈಗ ರಾಜಕೀಯ ಮತ್ತು ಭಕ್ತಿಯ ಸಂಘರ್ಷ ತಾರಕಕ್ಕೇರಿದೆ. ಅಯೋಧ್ಯೆಯಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರ ಅಥವಾ ಕಳ್ಳತನದ ಆರೋಪ...








