ಬೆಂಗಳೂರು, ಜೂನ್ 7: ಚಿರಂಜೀವಿ ಸರ್ಜಾ ಇನ್ನಿಲ್ಲ ಎನ್ನುವ ಸುದ್ದಿ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಂದು ಬಡಿದಿದೆ. ಸರ್ಜಾ ಅವರ ಸಾವನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಸರ್ಜಾ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಆಸ್ಪತ್ರೆಗೆ ಬಂದ ಹಿರಿಯ ನಟಿ ತಾರಾ ಮಾಧ್ಯಮಗಳ ಜೊತೆ ಮಾತನಾಡಿದ್ದು, ‘ಮೊದಲು ಸುಳ್ಳು ಸುದ್ದಿ ಇರಬಹುದು ಅಂದು ಕೊಂಡೆ. ನಂತರ ಸುಳ್ಳು ಸುದ್ದಿಯಾಗಿರಲಿ ಎಂದು ಪ್ರಾರ್ಥಿಸುತ್ತಾ ಆಸ್ಪತ್ರೆಗೆ ಬಂದೆ. ಆದರೆ ಹೃದಯಾಘಾತದಿಂದ ಚಿರು ಸಾವನ್ನಪ್ಪಿರೋದು ನಿಜವಾಗಿತ್ತು, ಚಿರು ಕುಟುಂಬಕ್ಕೆ ದೇವರು ದುಃಖ ಬರಿಸೋ ಶಕ್ತಿ ನೀಡಲಿ’ ಎಂದು ಕಣ್ಣೀರು ಹಾಕಿದರು. ಇದೇ ವೇಳೆ ಪುಟ್ಟ ಚಿರಂಜೀವಿ ಬರುತ್ತಿದ್ದಾನೆ, ಮೇಘಾನಾ ರಾಜ್ ತಾಯಿ ಆಗುತ್ತಾ ಇದ್ದಾರೆ ಎಂಬ ವಿಷಯವನ್ನು ತಿಳಿಸಿದರು.
ಹಿರಿಯ ನಟ ಸುಂದರ್ ರಾಜ್ ಮತ್ತು ಪರಿಮಳಾ ಜೋಶಿ ದಂಪತಿಗಳ ಪುತ್ರಿ ಮೇಘನಾ ಮತ್ತು ಚಿರಂಜೀವಿ ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಮೇಘನಾ ಈಗ 5 ತಿಂಗಳ ಗರ್ಭಿಣಿಯಾಗಿದ್ದು, ಅವರ ಕುಟುಂಬ ಮಗುವಿನ ನಿರೀಕ್ಷೆಯಲ್ಲಿತ್ತು.
ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!
ಭಾರತದಲ್ಲಿ ಕ್ರಿಕೆಟ್ ಹೇಗೆ ಧರ್ಮವಾಗಿದೆಯೋ ಹಾಗೇ ಆ ರಾಷ್ಟ್ರದಲ್ಲೂ ಫುಟ್‍ಬಾಲ್ ಆಟ ಧರ್ಮವಾಗಿದೆ. ಭಾರತದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವ ರೀತಿಯಲ್ಲೇ ಆ ದೇಶದ ಗಲ್ಲಿ ಗಲ್ಲಿಗಳಲ್ಲೂ...








