ADVERTISEMENT
Sunday, April 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೊರೊನಾ ಕಾಟ; ಐತಿಹ್ಯ ಪುಟದಲ್ಲಿ ದಾಖಲಾಯ್ತು ಮೈಸೂರಿನ ಸರಳ ದಸರಾ..!

Kariyappa N by Kariyappa N
October 26, 2020
in Newsbeat, Samagra karnataka, ರಾಜ್ಯ
cm dasara
Share on FacebookShare on TwitterShare on WhatsappShare on Telegram

* 30 ನಿಮಿಷದೊಳಗೆ ಮುಗಿದು ಹೋದ ಜಂಬೂಸವಾರಿ
*ಬೆರಳೆಣಿಗೆ ಮಂದಿ ಐತಿಹ್ಯ ಕ್ಷಣಕ್ಕೆ ಸಾಕ್ಷಿ
* ಕೊರೊನಾ ನಿಯಮಾನುಸಾರವೇ ನಡೆದ ದಸರಾ ಕಾರ್ಯಕ್ರಮ
*ಸಿಎಂ ಸೇರಿ ಗಣ್ಯರಿಂದ ನಾಡ ಅಧಿದೇವಿಗೆ ಪುಷ್ಪ ನಮನ
ಮೈಸೂರು: ಅಂತೂ ಇಂತು ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಯಾವುದೇ ವಿಘ್ನಗಳಿಲ್ಲದೆ ಸಮಾಪ್ತಿಗೊಂಡು ಐತಿಹ್ಯದ ಪುಟದಲ್ಲಿ ದಾಖಲಾಗಿದೆ. ಕೊರೊನಾ ಕಾಟದ ಹಿನ್ನೆಲೆಯಲ್ಲಿ 410 ನೇ ದಸರಾ ಸರಳವಾಗಿ ಜರುಗುವ ಮೂಲಕ ಇತಿಹಾಸದ ಪುಟದಲ್ಲಿ ಹೊಸ ಭಾಷ್ಯದೊಂದಿಗೆ ಅಂತ್ಯವಾಗಿದೆ.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಕೊರೊನಾ ಮಹಾಮಾರಿಯ ಆತಂಕದ ನಡುವೆಯೂ ಯಶಸ್ವಿಯಾಗಿ ಜರುಗಿ ಇತಿಹಾಸದ ಪುಟದಲ್ಲಿ ದಾಖಲಾಯಿತು. ಕೊರೊನಾ ಗೈಡ್‍ಲೈನ್ಸ್ ನಿಯಮಾನುಸಾರ 300 ಮಂದಿ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅದರಂತೆ ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ತಂದವರನ್ನ ಮಾತ್ರ ಅರಮನೆಗೆ ಪ್ರವೇಶ ನೀಡಲಾಗಿತ್ತು. ಇಷ್ಟೆಲ್ಲದರ ನಡುವೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಟೈಸರ್‍ಗೆ ಮಹತ್ವ ನೀಡಲಾಗಿತ್ತು.


ಸಂಪ್ರದಾಯದಂತೆ ಮಧ್ಯಾಹ್ನ 3.30ರ ಸುಮಾರಿಗೆ ಶುಭ ಮಕರ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆ ಎದುರು ನಿರ್ಮಿಸಿದ್ದ ವೇದಿಕೆ ಬಳಿ ಆಗಮಿಸಿದರು. 750 ಕೆಜಿ ತೂಕದ ರತ್ನ ಖಚಿತ ಅಂಬಾರಿಯಲ್ಲಿ ವಿರಾಜಮಾನಳಾಗಿ ಕುಳಿತ ತಾಯಿ ಚಾಮುಂಡಿ ಹೊತ್ತ ಅಭಿಮನ್ಯು ದಕ್ಷಿಣಾಭಿಮುಖವಾಗಿ ತಿರುಗಿ ವೇದಿಕೆ ಬಳಿ ಆಗಮಿಸುತ್ತಿದ್ದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಗಣ್ಯರ ತಂಡ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡಿದರು. ಜಿಲ್ಲಾಡಳಿತದ ವತಿಯಿಂದ ಮೇಯರ್ ತಸ್ನಿಂ, ಜಿಲ್ಲಾಧಿಕಾರಿ ರೋಹಿಣಿಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಪುಷ್ಪಾರ್ಚನೆ ವೇಳೆ ಮೊಳಗಿದ ನಾಡಗೀತೆಗೆ ಕ್ಯಾ.ಅಭಿಮನ್ಯುವಿನಿಂದ ವಂದನೆ ಸ್ವೀಕರಿಸಲಾಯಿತು. ಈ ವೇಳೆ ಫಿರಂಗಿ ಮೂಲಕ ಏಳು ಸುತ್ತಿನ ಸಿಡಿಮದ್ದು ಸಿಡಿಸಲಾಯಿತು.

Related posts

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

April 25, 2026
ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

April 25, 2026

tablo mysore
ಬಳಿಕ ನಿಶಾನೆ ಆನೆಗಳು, ನಾದಸ್ವರ , ಚಂಡೇಮೇಳ, ಮರಗಾಲು, ವೀರಗಾಸೆ, ಚಿಲಿಪಿಲಿ ಗೊಂಬೆ, ಕರ್ನಾಟಕ ಬ್ಯಾಂಡ್, ಅಶ್ವದಳ ತಂಡಗಳು ಅಂಬಾರಿ ನಂತರ ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಿದ್ದವು.

ಜಂಬೂಸವಾರಿ ವೇಳೆ ಎರಡೇ ಸ್ತಬ್ಧಚಿತ್ರ…!
ಈ ಬಾರಿ ಸರಳ ದಸರಾ ಹಿನ್ನೆಲೆಯಲ್ಲಿ ಎರಡು ಸ್ತಬ್ಧ ಚಿತ್ರಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು. ಮೈಸೂರು ಜಿಲ್ಲಾ ಪಂಚಾಯಿತಿ ವತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ರೂಪುಗೊಳಿಸಲಾಗಿತ್ತು. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕೊರೊನಾ ಯೋಧರ ಸೇವೆ ಸ್ಮರಣೆಗಾಗಿ ಈ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು.

dasara mysore
ಆನೆ ಬಂಡಿ ಸ್ತಬ್ಧಚಿತ್ರ ಮತ್ತೊಂದು ವಿಶೇಷವಾಗಿದೆ. ಅರಮನೆ ವಾದ್ಯಗೋಷ್ಠಿ ಕುರಿತಾದ ಚಿತ್ರವೇ ಆನೆ ಬಂಡಿ. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸರಳ ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣಕ್ಕೆ ಜಂಬೂಸವಾರಿ ಮೆರವಣಿಗೆ ಸೀಮಿತಗೊಳಿಸಲಾಗಿತ್ತು. ಹೀಗಾಗಿ 30-40 ನಿಮಿಷಗಳ ಅವಧಿಯಲ್ಲಿ ಮೆರವಣಿಗೆ ಮುಗಿದು ಹೋಯಿತು.

ನಿಷೇದಾಜ್ಞೆಯಿಂದ ನಿಶ್ಯಬ್ಧವಾದ ಅರಮನೆ ನಗರಿ
ಸರಳ ದಸರಾ ಮಹೋತ್ಸವ ಆಚರಣೆ ಹಿನ್ನೆಲೆ ಮೈಸೂರು ಅರಮನೆ ಸುತ್ತಲೂ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ನಗರದ ಹೃದಯ ಭಾಗಕ್ಕೆ ಬಸ್ ಗಳ ಪ್ರವೇಶಕ್ಕೂ ಅವಕಾಶ ನೀಡದ ಹಿನ್ನೆಲೆ ನಗರ ಬಸ್ ನಿಲ್ದಾಣ ಸ್ಥಬ್ದವಾಗಿತ್ತು.
ನಿಲ್ದಾಣಕ್ಕೆ ಬರುವ ಎಲ್ಲ ಮಾರ್ಗಗಳು ಬಂದ್ ಮಾಡಿದ ಹಿನ್ನೆಲೆ ನಗರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಅಗ್ರಹಾರ, ರಾಮಸ್ವಾಮಿ ಸರ್ಕಲ್, ದಾಸಪ್ಪ ಸರ್ಕಲ್, ಫೈಲಟ್ ಸರ್ಕಲ್, ಗನ್ ಹೌಸ್ ಬಳಿಯಿಂದಲೇ ಬಸ್ ಗಳ ಬೇರೆ ಮಾರ್ಗಗಳಲ್ಲಿ ಸಂಚಾರ ಮಾಡಿದವು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: ahbimanyu elephantbs yadiyurappaCoronajumboo savariMysore Dasaramysore palacesimple dasara
ShareTweetSendShare
Join us on:

Related Posts

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

by Shwetha
April 25, 2026
0

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಶಕಗಳಿಂದಲೂ ಚರ್ಚೆಯಲ್ಲಿದ್ದ ಹಾಗೂ ತೀವ್ರ ಕುತೂಹಲ ಮೂಡಿಸಿದ್ದ ಒಳ ಮೀಸಲಾತಿ ಕಗ್ಗಂಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಗೂ ಪರಿಹಾರ ಕಂಡುಹಿಡಿದಿದೆ....

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

by Shwetha
April 25, 2026
0

ದೆಹಲಿಯ ರಾಜಕೀಯ ಅಂಗಳದಲ್ಲಿ ಅಚ್ಚರಿ ಮೂಡಿಸುವ ಬೆಳವಣಿಗೆ ನಡೆದಿದೆ. ಯುವ ಸಂಸದ ರಾಘವ್ ಚಡ್ಡಾ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸಭೆಯಲ್ಲಿ ಇರುವ ಆಮ್ ಆದ್ಮಿ ಪಕ್ಷದ (AAP)...

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

ಸಚಿವ ಸಂಪುಟ ವಿಸ್ತರಣೆ ಸುಳಿವು: ಮೇ 20ರೊಳಗೆ ಸಾಧ್ಯತೆ!

by Shwetha
April 25, 2026
0

ರಾಜ್ಯದ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ಮತ್ತೆ ಜೋರಾಗಿದೆ. ಇತ್ತೀಚೆಗೆ ಹಿರಿಯ ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ಗೆ ಸಂಪುಟ ವಿಸ್ತರಣೆ ಮಾಡುವಂತೆ ಮನವಿ...

ದೆಹಲಿ ರಾಜಕೀಯದಲ್ಲಿ ಗರಿಗೆದರಿದ ಡಿಕೆ ಶಿವಕುಮಾರ್ ಚಟುವಟಿಕೆ

ದೆಹಲಿ ರಾಜಕೀಯದಲ್ಲಿ ಗರಿಗೆದರಿದ ಡಿಕೆ ಶಿವಕುಮಾರ್ ಚಟುವಟಿಕೆ

by Shwetha
April 25, 2026
0

ದಾವಣಗೆರೆ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ. ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಆಪ್ತ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ....

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

by Shwetha
April 25, 2026
0

ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೊ ಎಂದೇ ಖ್ಯಾತರಾಗಿರುವ ದಿಗಂತ್ ಮಂಚಾಲೆ ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳನ್ನು ಪೂರೈಸಿದ್ದಾರೆ. ಸತತ 20 ವರ್ಷಗಳ ಕಾಲ ತೆರೆಯ ಮೇಲೆ ಸಕ್ರಿಯರಾಗಿದ್ದ ದಿಗಂತ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram