ADVERTISEMENT
Sunday, August 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

fifaworldcup-2026 ರಕ್ತಸಿಕ್ತ ಅಧ್ಯಾಯದಿಂದ ಶುರುವಾದ ಪಯಣ.. ಕ್ರೊವೇಶಿಯಾಗೆ ಬೆಳ್ಳಿಯ ಮುಕುಟ ತೊಡಿಸಿದವನ ಬದುಕಿನ ಚಿತ್ರಣ..!

admin by admin
June 25, 2026
in Sports, Newsbeat, ಕ್ರೀಡೆ
Luka Modric inspirational story

Luka Modric inspirational story

Share on FacebookShare on TwitterShare on WhatsappShare on Telegram

ಇದು ಯಾವುದೋ ಒಂದು ಕಾಲ್ಪನಿಕ ಕಥೆಯಲ್ಲ. ಸುಮಾರು 35-36 ವರ್ಷಗಳ ಹಿಂದೆ ನಡೆದ ನೈಜ ಘಟನೆ. ಈ ಕಥಾನಾಯಕನ ಬದುಕಿನ ಚಿತ್ರಣವಂತೂ ಹಾಲಿವುಡ್‍ನ ಥ್ರಿಲ್ಲಿಂಗ್ ಸಿನಿಮಾ ಸ್ಟೋರಿಯನ್ನು ಮೀರಿಸುವಂತಿದೆ.

Luka Modric inspirational story
Luka Modric inspirational story

ಈ ಕಥೆಯ ನಾಯಕನ ಬದುಕಿನ ಚಿತ್ರಣ
ಶುರುವಾಗುವುದೇ ಕ್ರೋವೇಶಿಯಾದ ಮಾಡ್ರಿಸಿ ಎಂಬ ಕುಗ್ರಾಮದಿಂದ. ಬೆಟ್ಟಗುಡ್ಡಗಳ ನಡುವೆ ಹಾದು ಹೋಗುವ ಅಂಕುಡೊಂಕಾದ ರಸ್ತೆಗಳು. ಕುಸಿದು ಬಿದ್ದಿರುವ ಮಣ್ಣು, ಕಲ್ಲುಬಂಡೆಗಳ ನಡುವೆ ಒಂದು ಮಾಸಿದ ಹಳೆಯ ಬೋರ್ಡ್ ನೇತಾಡುತ್ತಿದೆ. “ಅಪಾಯ.. ದೂರವಿರಿ.. ಇಲ್ಲಿ ಭೂಮಿಯ ಮೇಲೆ ಹೂತಿಟ್ಟ ಜೀವಂತ ಬಾಂಬುಗಳಿವೆ” ಎಂಬ ಎಚ್ಚರಿಕೆಯ ಸಂದೇಶವನ್ನು ನೋಡಬಹುದಾಗಿದೆ. ಇದರ ಪಕ್ಕದಲ್ಲೇ ಒಂದು ಪಾಳುಬಿದ್ದ ಮನೆಯಿದೆ. ಇದುವೇ ಈ ಕಥಾನಾಯಕನ ತರವಾಡು ಮನೆ. (ಪೂರ್ವಜರ ಮನೆ) ಆ ಮನೆಯ ಎದುರಿನ ಹಳೆಯ ಗೇಟ್ ಮೇಲೆ ಕ್ರೋವೇಶಿಯಾ ದೇಶದ ಸಣ್ಣ ಬಾವುಟ ಇಂದಿಗೂ ಹಾರಾಡುತ್ತಿದೆ. ಜೊತೆಗೆ ಅಂಕುಡೊಂಕಾದ ಅಕ್ಷರಗಳಲ್ಲಿ ನಮ್ಮ ನಾಯಕ ಲೂಕಾ.. ಧನ್ಯವಾದಗಳು ಎಂಬ ಸಾಲುಗಳು ಕಣ್ಣಿಗೆ ರಾರಾಜಿಸುತ್ತಿವೆ. ಆ ಮಹಾ ನಾಯಕನೇ ಕ್ರೋವೇಶಿಯಾ ಫುಟ್‍ಬಾಲ್ ತಂಡದ ಮಹಾ ನಾಯಕ 41ರ ಹರೆಯದ ಲೂಕಾ ಮ್ಯಾಡ್ರಿಕ್.

Related posts

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

August 30, 2026
‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಾಲ್ಮೀಕಿ ನಿಗಮ ಹಗರಣ: ‘ಬಿ. ನಾಗೇಂದ್ರರನ್ನು ಬಿಜೆಪಿ ಷಡ್ಯಂತ್ರದಿಂದ ಗುರಿಯಾಗಿಸಿದೆ’ ಎಂದ BK ಹರಿಪ್ರಸಾದ್

August 30, 2026

ಹೌದು, ಮ್ಯಾಡ್ರಿಸಿ ಎಂಬುದು ಲೂಕಾ ಮ್ಯಾಡ್ರಿಕ್‍ನ ಹುಟ್ಟಿದ ಊರು. ಬಾಲ್ಯದಲ್ಲಿ ಬೆಟ್ಟಗುಡ್ಡಗಳಲ್ಲಿ ಓಡಾಡುತ್ತಿದ್ದ ಹುಡುಗ. ಕುರಿ ಮೇಯಿಸುತ್ತಿದ್ದ ತಾತನ ಜೊತೆ ಅಟವಾಡಿಕೊಂಡು, ಪ್ರಕೃತ್ತಿಯ ಸೊ¨ಗಿನ ಜೊತೆ ಚೆಲ್ಲಾಟವಾಡಿಕೊಂಡಿದ್ದ ಪುಟ್ಟ ಬಾಲಕ. ಆದ್ರೆ ಅದೊಂದು ಘನಘೋರ ದೃಶ್ಯ ಲೂಕಾ ಮ್ಯಾಡ್ರಿಕ್‍ನ ನೆನಪಿನ ಪುಟದಿಂದ ಇನ್ನೂ ಮಾಸಿಲ್ಲ. ಮಾಸುವುದೂ ಇಲ್ಲ. ಯಾಕಂದ್ರೆ ಅದು ಅಂತಿಂಥ ದೃಶ್ಯವಲ್ಲ. ಸಾವನ್ನು ಕಣ್ಣೇದುರೇ ನೋಡಿದ ರಣ ಭೀಕರ ದುರಂತ. ಯಮನ ಕೈಯಿಂದ ಜೀವ ಉಳಿಸಿಕೊಂಡ ಕ್ಷಣವನ್ನು ಎಂದಾದ್ರೂ ಮರೆಯಲು ಸಾಧ್ಯವೇ..?

ಅದು 1991 ಡಿಸೆಂಬರ್ 18. ಆಗ ಲೂಕಾ ಮ್ಯಾಡ್ರಿಕ್‍ಗೆ ಕೇವಲ ಆರು ವರ್ಷ. ಕ್ರೋವೇಶಿಯಾದಲ್ಲಿ ಸ್ವಾತಂತ್ರ್ಯಕ್ಕಾಗಿ ಯುದ್ಧ ನಡೆಯುತ್ತಿತ್ತು. ಸರ್ಬಿಯಾದ ಉಗ್ರಗಾಮಿಗಳು ಕುರಿ ಮೇಯಿಸುತ್ತಿದ್ದ ತಾತನ ಜೊತೆಗಿದ್ದ ಆರು ಮಂದಿಯನ್ನು ಅತ್ಯಂತ ಕ್ರೂರವಾಗಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಲ್ಲದೆ ವಾಸವಾಗಿದ್ದ ಮನೆಯನ್ನು ಸುಟ್ಟು ಹಾಕಿದ್ದರು. ಈ ದೃಶ್ಯಗಳನ್ನು ಪೊದೆಯ ಮಧ್ಯೆ ಅವಿತುಕೊಂಡು ನೋಡುತ್ತಿದ್ದ ಬಾಲಕ ಲೂಕಾ ಮ್ಯಾಡ್ರಿಕ್ ನಲುಗಿ ಹೋಗಿದ್ದ. ಹೇಗೋ ಉಗ್ರಗಾಮಿಗಳ ಕಣ್ಣಿಂದ ಪಾರಾದ ಈ ಹುಡುಗ ತನ್ನ ಅಪ್ಪ- ಅಮ್ಮ ಹಾಗೂ ತಂಗಿಯೊಂದಿಗೆ ಮುಂದೆ ಸೇರಿಕೊಂಡಿದ್ದು ನಿರಾಶ್ರಿತರ ಶಿಬಿರವನ್ನು. Luka Modric childhood war

ಬದುಕಿ ಬಾಳಬೇಕಿದ್ದ ಮನೆಯನ್ನು ಕಳೆದುಕೊಂಡ ಲೂಕಾ ಹೆತ್ತವರು, ಜಾದರ್ ನಗರದ ಕೊಲೋವರೆ ಎಂಬ ನಿರಾಶ್ರಿತರ ಹೋಟೆಲ್‍ನಲ್ಲಿ ಆಶ್ರಯ ಪಡೆದ್ರು. ಆದ್ರೆ ಅಲ್ಲೂ ಜೀವಕ್ಕೆ ಗ್ಯಾರಂಟಿ ಇರಲಿಲ್ಲ. ಪ್ರಾಣ ಭಯ ಪ್ರತಿಕ್ಷಣವೂ ಕಾಡುತ್ತಿತ್ತು. ಸ್ಥಳೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲೂಕಾ ತಂದೆ ದೇಶದ ಸ್ವಾತಂತ್ರ್ಯಕ್ಕಾಗಿ ಮಿಲಿಟರಿಗೆ ಸೇರಿಕೊಂಡಿದ್ದರು. ಹೀಗಾಗಿ ಲೂಕಾ ಮತ್ತು ಆತನ ತಂಗಿ ತಾಯಿಯ ಆಶ್ರಯದಲ್ಲಿ ಬೆಳೆದಿದ್ರು. ಬರೋಬ್ಬರಿ ಏಳು ವರ್ಷಗಳ ಕಾಲ ಬಾಂಬ್, ಬುಲೆಟ್ ಸದ್ದುಗಳ ನಡುವೆಯೇ ಜೀವನ ಸಾಗಿಸುವ ಅನಿರ್ವಾತೆಗೆ ಲೂಕಾ ಕುಟುಂಬ ಸಿಲುಕಿಕೊಂಡಿತ್ತು.

ನಿರಾಶ್ರಿತರ ಹೋಟೆಲ್ ರೂಮ್‍ನಲ್ಲಿ ವಾಸವಾಗಿದ್ದ ಲೂಕಾ ಮ್ಯಾಡ್ರಿಕ್‍ಗೆ ಬುಲೆಟ್ ಸೌಂಡ್, ಬಾಂಬ್ ಸ್ಪೋಟದ ಸದ್ದು ಹಗಲು – ರಾತ್ರಿ ಕೇಳುವ ಮಾಮೂಲಿ ಶಬ್ದವಾಗಿತ್ತು. ಹೀಗಾಗಿ ಅಪಾಯದ ಸೂಚನೆಯ ಸೈರನ್ ಮೊಳಗಿದಾಗ ಸ್ನೇಹಿತರ ಜೊತೆ ಅಡಗಿಕುಳಿತುಕೊಳ್ಳುತ್ತಿದ್ದ ಲೂಕಾಗೆ, ಫುಟ್‍ಬಾಲ್ ಆಟವೇ ಪ್ರಪಂಚವಾಗಿತ್ತು. ಹೊಟೇಲ್‍ನ ಆವರಣದಲ್ಲಿ ಕಾಗದದ ಚೆಂಡಿನಲ್ಲಿ ಆಡುತ್ತಿದ್ದ ಲೂಕಾ ಬಳಿಕ ಹಳೆಯ ಫುಟ್‍ಬಾಲ್ ಚೆಂಡನ್ನು ಕಾಲಿನಿಂದ ಒದೆಯುತ್ತಾ ಕುಣಿದಾಡುತ್ತಿದ್ದ. ಲೂಕಾಗೆ ಫುಟ್‍ಬಾಲ್ ಆಟ ಬರೀ ಆಟವಾಗಿರಲಿಲ್ಲ. ತನ್ನ ತಾತನ ಭೀಕರ ಸಾವಿನ ನೋವನ್ನು ಮರೆಯುವ ಆತ್ಮೀಯ ಸಂಗಾತಿಯಾಗಿತ್ತು. From refugee to football star

ಯುದ್ಧದ ಭೀತಿಯ ನಡುವೆಯೂ ಫುಟ್‍ಬಾಲ್ ಆಟದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲು ಲೂಕಾ ಇಷ್ಟಪಡಲಿಲ್ಲ. ಫುಟ್‍ಬಾಲ್ ಆಟದ ಮೇಲಿನ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿದ್ದ ಹೋಟೆಲ್ ನೌಕರನೊಬ್ಬ, ಟೊಮಿಸ್ಲಾವ್ ಬಾಸಿಕ್ ಎಂಬ ಫುಟ್‍ಬಾಲ್ ತರಬೇತುದಾರನಿಗೆ ಲೂಕಾನನ್ನು ಪರಿಚಯಿಸಿದ್ದ. ನಂತರ ಗಾಡ್‍ಫಾದರ್ ಟೊಮಿಸ್ಲಾವ್ ಬಾಸಿಕ್ ಮಾರ್ಗದರ್ಶನದಲ್ಲಿ ಬೆಳೆದ್ರೂ ಲುಕಾಗೆ ಅತ್ಯುತ್ತಮ ಫುಟ್‍ಬಾಲ್ ಕ್ಲಬ್‍ನಲ್ಲಿ ತರಬೇತಿ ಪಡೆಯಲು ಅವಕಾಶ ಸಿಗಲಿಲ್ಲ. ಲೂಕಾನ ಸಣಕಲು ದೇಹವನ್ನು ನೋಡಿದವರು, ಈತ ಫುಟ್‍ಬಾಲ್ ಆಟಗಾರನಾಗಲೂ ಅನರ್ಹ ಎಂದು ಹಿಯಾಳಿಸಿದ್ರು. ಬಡತನ, ಜೀವಭಯ, ಚುಚ್ಚು ಮಾತುಗಳನ್ನು ಎಳೆಯ ಪ್ರಾಯದಲ್ಲೇ ಸಹಿಸಿಕೊಂಡಿದ್ದ ಲೂಕಾ ಮ್ಯಾಡ್ರಿಕ್ ತನ್ನ ಗುರಿಯತ್ತ ದಿಟ್ಟ ಹೆಜ್ಜೆಯನ್ನಿಡಲು ತೀರ್ಮಾನಿಸಿದ್ದ. ಛಲಬಿಡದೇ ಕಾಲ್ಚೆಂಡಿನ ಬ್ರಹ್ಮವಿದ್ಯೆಯನ್ನು ಸಿದ್ಧಿಸಿಕೊಂಡ ಲುಕಾ ಮ್ಯಾಡ್ರಿಕ್, ತನ್ನ 16ರ ಹರೆಯದಲ್ಲೇ ಪ್ರತಿಷ್ಠಿತ ಬೋಸ್ನಯನ್ ಪ್ರೀಮಿಯರ್ ಲೀಗ್‍ನಲ್ಲಿ ಡೈನಾಮೊ ಜಾಗ್ರೆಬ್ ಕ್ಲಬ್ ಪರ ಆಡಿದ್ದ.

ಅಲ್ಲದೆ ಕ್ಲಬ್‍ನ ನಂಬಿಕೆಯ ಆಟಗಾರನಾಗಿ ಹೊರಹೊಮ್ಮಿದ್ದ ಲೂಕಾ ವೃತ್ತಿಪರ ಫುಟ್‍ಬಾಲ್ ಆಟಗಾರನಾದ. ಕ್ಲಬ್‍ನಿಂದ ಸಿಕ್ಕ ಸಂಭಾವನೆಯ ದುಡ್ಡಲ್ಲೇ ತನ್ನ ಹೆತ್ತವರಿಗೆ ಸ್ವಂತ ಮನೆಯನ್ನು ಖರೀದಿಸಿದ್ದ. ಹತ್ತು ವರ್ಷಗಳ ಕಾಲ ಡೈನಾಮೊ ಕ್ಲಬ್ ಪರ ಆಡಿದ್ದ ಲೂಕಾ ಮ್ಯಾಡ್ರಿಕ್‍ನ ಅದ್ಭುತ ಆಟ ಪ್ರತಿಷ್ಠಿತ ಕ್ಲಬ್‍ಗಳ ಕಣ್ಣಿಗೂ ಬಿತ್ತು. ಪರಿಣಾಮ 2012ರಲ್ಲಿ ಪ್ರತಿಷ್ಠಿತ ರಿಯನ್ ಮ್ಯಾಡ್ರಿಡ್ ತಂಡವನ್ನು ಸೇರಿಕೊಂಡಿದ್ದ. ದಶಕಗಳ ಕಾಲ ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸಿದ್ದ ಲೂಕಾ, ಆರು ಬಾರಿ ಯುಇಎಫ್‍ಐ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡು ಫುಟ್‍ಬಾಲ್ ಜಗತ್ತನ ಅಪ್ರತಿಮ ಆಟಗಾರನಾಗಿ ಹೊರಹೊಮ್ಮಿದ್ದ. ಅಷ್ಟೇ ಅಲ್ಲ, 2018ರ ಫಿಫಾ ವಿಶ್ವಕಪ್‍ನಲ್ಲಿ ಕ್ರೊವೇಶಿಯಾ ತಂಡವನ್ನು ರನ್ನರ್ ಅಪ್ ಸ್ಥಾನಕ್ಕೇರುವಂತೆ ಮಾಡಿರುವ ಧೀರನೂ ಹೌದು. ಲೂಕಾನ ಅದ್ಭುತ ಪ್ರದರ್ಶನಕ್ಕೆ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮೆಸ್ಸಿ ಮತ್ತು ರೋನಾಲ್ಡೊನಂತಹ ದಿಗ್ಗಜ ಆಟಗಾರರಿಗೆ ಶಾಕ್ ನೀಡಿದ್ದ. ಸದ್ಯ ಎಸಿ ಮಿಲನ್ ತಂಡದ ಪರ ಆಡುತ್ತಿರುವ ಲೂಕಾ ಮ್ಯಾಡ್ರಿಕ್, 2026ರ ಫಿಫಾ ವಿಶ್ವಕಪ್‍ನಲ್ಲಿ ಕ್ರೋವೇಶಿಯಾ ತಂಡವನ್ನು ಮುನ್ನಡೆಸುತ್ತಿದ್ದಾನೆ. Croatia football legend Modric

ಅಂದ ಹಾಗೇ ಲೂಕಾ ಮ್ಯಾಡ್ರಿಕ್ ದೇಶಕ್ಕಾಗಿ ತನ್ನ ಬದುಕನ್ನೇ ತ್ಯಾಗ ಮಾಡಿದ್ದ. ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ಪ ಸೇನೆ ಸೇರಿದ್ದ. ಮಗ ಫುಟ್‍ಬಾಲ್ ಆಟವಾಡಿ ದೇಶಕ್ಕೆ ಕೀರ್ತಿ ತಂದಿದ್ದ. ಆದ್ರೂ ಲೂಕಾ ಮ್ಯಾಡ್ರಿಕ್ ಹೆಸರಿಗೆ ದೇಶದ್ರೋಹಿ ಎಂಬ ಕಳಂಕ ಅಂಟಿಕೊಂಡಿತ್ತು. ತಾನು ತಪ್ಪು ಮಾಡದಿದ್ರೂ ನಿಷ್ಠೆಗೆ ತಲೆಬಾಗಿ ಜೈಕಾರ ಹಾಕಿದ್ದ ಅಭಿಮಾನಿಗಳ ಬಾಯಿಂದಲೇ ಧಿಕ್ಕಾರ ಎಂಬ ಘೋಷಣೆಗಳನ್ನು ಕೇಳಿಸಿಕೊಳ್ಳಬೇಕಾಗಿತ್ತು. ಅದು ಆಗಿದ್ದು ಇಷ್ಟೇ..
ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಅವರನ್ನು ಪ್ರತಿಷ್ಠಿತ ಕ್ಲಬ್‍ಗಳಿಗೆ ಸೇರಿಸಿ ದುಡ್ಡು ಮಾಡುವ ದಂದೆ ಫುಟ್‍ಬಾಲ್ ಜಗತ್ತಿನಲ್ಲಿ ನಡೆಯುತ್ತಿದೆಯಂತೆ. ಹಾಗೇ ಕ್ರೊವೇಶಿಯಾದ ಲೂಕಾ ಮ್ಯಾಡ್ರಿಕ್ ಕೂಡ ಈ ದಂದೆಯ ಬಲೆಯೊಳಗೆ ಸಿಲುಕಿಕೊಂಡಿದ್ದ. ಡೈನಾಮೊ ಜಾಗ್ರೆಬ್ ಕ್ಲಬ್‍ನ ಮುಖ್ಯಸ್ಥ ಜಾವ್ಕೋ ಮ್ಯಾಮಿಚ್ ಈ ಮಾಫಿಯಾದ ಡಾನ್. ಬಡ ಪ್ರತಿಭಾವಂತ ಆಟಗಾರರಿಗೆ ಆರ್ಥಿಕ ಸಹಾಯ ಮಾಡಿ ನಂತರ ದೊಡ್ಡ ಮಟ್ಟದ ಹಣವನ್ನು ವಸೂಲಿ ಮಾಡುವುದು ಮ್ಯಾಮಿಚ್‍ನ ಕಾಯಕವಾಗಿತ್ತು. ಲೂಕಾ ಮ್ಯಾಡ್ರಿಡ್ ವಿಚಾರದಲ್ಲೂ ಮ್ಯಾಮಿಚ್ ಒಪ್ಪಂದ ಮಾಡಿಕೊಂಡಿದ್ದ. ಆದ್ರೆ ಈ ವಿಷ್ಯ ಕ್ರೊವೇಶಿಯಾ ಸರ್ಕಾರಕ್ಕೆ ಗೊತ್ತಾಗಿ ಮ್ಯಾಮಿಚ್ ವಿರುದ್ದ ಭ್ರಷ್ಟಾಚಾರದ ಆರೋಪದ ಕೇಸ್ ದಾಖಲಿಸಿತ್ತು. ಈ ಕೇಸ್‍ಗೆ ಪ್ರಮುಖ ಸಾಕ್ಷಿದಾರ ಲೂಕಾ ಮ್ಯಾಡ್ರಿಕ್. Zdravko Mamic Luka Modric court case

2017ರಲ್ಲಿ ಕೋರ್ಟ್ ವಿಚಾರಣೆ ವೇಳೆ ತನಿಖಾಧಿಕಾರಿಗಳ ಎದುರು, ಮ್ಯಾಮಿಚ್ ನನಗೆ ಮೋಸ ಮಾಡಿದ್ದಾನೆ ಎಂದು ಲೂಕಾ ಹೇಳಿದ್ದ. ನಂತರ ಕೋರ್ಟ್ ಕಟಕಟೆಯಲ್ಲಿ ನಿಂತಾಗ ನಿಷ್ಠೆಯ ಕಾರಣದಿಂದ ನನಗೆ ಏನು ಗೊತ್ತಿಲ್ಲ ಅಂತ ಉಲ್ಟಾ ಹೊಡೆದಿದ್ದ. ಇದರಿಂದ ಕುಪಿತಗೊಂಡ ದೇಶದ ಜನರು ಲೂಕಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಭ್ರಷ್ಟನಿಗೆ ಸಾಥ್ ನೀಡಿದ ದೇಶದ್ರೋಹಿ.. ಮ್ಯಾಮಿಚ್‍ನ ಸಾಕು ನಾಯಿ.. ಲೂಕಾ ನಿನಗೆ ಈ ದಿನ ನೆನಪಿದೆಯಾ ಅಂತ ಲೂಕಾ ಬಾಲ್ಯದಲ್ಲಿ ವಾಸವಾಗಿದ್ದ ನಿರಾಶ್ರಿತರ ಹೋಟೆಲ್‍ನ ಗೊಡೆಗಳ ಮೇಲೆ ಆಕ್ರೋಶದ ಬರಹಗಳನ್ನು ಬರೆದಿದ್ದರು. ಅಲ್ಲದೆ ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಲೂಕಾಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿದ್ದವು.

ಆದ್ರೆ ಬದುಕಿನ ಕಗ್ಗತ್ತಲ ನಡುವೆಯೇ 2018ರ ವಿಶ್ವಕಪ್‍ನಲ್ಲಿ ಆಡುವಾಗ ಪ್ರಖರ ಸೂರ್ಯನಂತೆ ಲೂಕಾ ಕಂಗೋಳಿಸಿದ್ದ. ಇಡೀ ದೇಶ ತನ್ನನ್ನು ದಿಕ್ಕರಿಸಿದ್ರೂ ಮೈದಾನದಲ್ಲಿ ವೀರ ಸೇನಾನಿಯಂತೆ ದೇಶಕ್ಕಾಗಿ ಹೋರಾಡಿದ್ದ. ದೇಶದ ಜನರ ಆಕ್ರೋಶವನ್ನು ತನ್ನ ಪವಾಡದ ಆಟದ ಮೂಲಕ ಪ್ರೀತಿಯನ್ನಾಗಿ ಬದಲಾಯಿಸಿದ್ದ. ಫೈನಲ್‍ನಲ್ಲಿ ಸೋತ್ರೂ ಕ್ರೊವೇಶಿಯಾಗೆ ಬೆಳ್ಳಿ ಕಿರೀಟ ತೊಡಿಸಿದ್ದ ಲೂಕಾ ಮ್ಯಾಡ್ರಿಕ್ ಕಳಂಕಮುಕ್ತನಾಗಿ ದೇಶದ ಹೆಮ್ಮೆಯ ಮಗನಾದ.

ನಿಜ, ಇವತ್ತು ಫುಟ್‍ಬಾಲ್ ಜಗತ್ತು ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೋನಾಲ್ಡ್‍ನ ಜಪದಲ್ಲಿದೆ. ಆದ್ರೆ ಇವರಿಬ್ಬರ ಸಮಕಾಲೀನ ಆಟಗಾರನಾಗಿ ಐದು ವಿಶ್ವಕಪ್‍ನಲ್ಲಿ ಆಡಿರುವ ಲೂಕಾ ಮ್ಯಾಡ್ರಿಕ್ ಸಾಧನೆ ಏನೂ ಕಮ್ಮಿ ಇಲ್ಲ. ಕ್ಲಬ್ ಲೀಗ್‍ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ರೂ ಸ್ಟಾರ್‍ವಾರ್‍ನಲ್ಲಿ ಲೂಕಾನ ಹೆಸರು ಹೆಚ್ಚು ಸದ್ದು ಮಾಡಿಲ್ಲ ಅಷ್ಟೇ. ಆದ್ರೆ ತನ್ನದೇ ಶೈಲಿಯ ಆಟದ ಮೂಲಕ ಫುಟ್‍ಬಾಲ್ ಜಗತ್ತಿನಲ್ಲಿ ಛಾಪು ಮೂಡಿಸಿರುವ ಲೂಕಾ ಮ್ಯಾಡ್ರಿಕ್‍ನ ಬದುಕಿನ ಹಾದಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. Luka Modric inspirational story

ಸ್ವಲ್ಪ ಊಹಿಸಿಕೊಳ್ಳಿ.. ಅಂದು ಹಿಂಸಾಚಾರದ ಸ್ವಾತಂತ್ರ್ಯ ಸಂಗ್ರಾಮ ನಡೆಯದೇ ಇರುತ್ತಿದ್ರೆ, ತಾತನ ಭೀಕರ ಕೊಲೆ ಆಗದೇ ಇರುತ್ತಿದ್ರೆ ಲೂಕಾ ಮ್ಯಾಡ್ರಿಕ್ ಕೂಡ ತನ್ನ ಅಪ್ಪನಂತೆ ಸ್ಥಳೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಕಾಲಾಯ ತಸ್ಮೈ ನಮಃ. ಕಾಲ ಗರ್ಭದಲ್ಲಿ ಎಲ್ಲವೂ ಮೊದಲೇ ನಿರ್ಧಾರವಾಗುತ್ತದೆ. ನಾವು ಕೇವಲ ನೆಪ ಮಾತ್ರ ಅನ್ನೋ ಭಗವದ್ಗೀತೆಯ ಸಾರದಂತೆ ಲೂಕಾ ಮ್ಯಾಡ್ರಿಕ್‍ನ ಬದುಕು ಕೂಡ. ಯಾವುದು ಸಂಭವಿಸಬೇಕಾಗಿದೆಯೋ ಅದು ಸಂಭವಿಸಿಯೇ ತಿರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಿಲ್ಲ. ಕಾಲದ ನಿರ್ಧಾರದ ಮುಂದೆ ಮನುಷ್ಯನ ಲೆಕ್ಕಚಾರಗಳು ಶೂನ್ಯ. ಲೂಕಾ ಬಾಲ್ಯದಲ್ಲೇ ಎಷ್ಟೇ ನೋವು, ಕಷ್ಟ , ಅಪಮಾನ ಅನುಭವಿಸಿದ್ರೂ ಆತನ ಹಣೆಯಲ್ಲಿ ವಿಶ್ವದ ಶ್ರೇಷ್ಠ ಫುಟ್‍ಬಾಲ್ ಆಟಗಾರನಾಗುತ್ತಾನೆ ಅನ್ನೋದು ಬರೆದಿತ್ತು. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗಿಲ್ಲ.

ಆದ್ರೆ ನೆನಪಿಡಿ.. ಇಲ್ಲಿ ಲೂಕಾ ಬದುಕಿನಲ್ಲಿ ಬರೀ ವಿಧಿಯಾಟ ಮಾತ್ರವಲ್ಲ. ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು.. ಯಶಸ್ಸು, ಸಾಧನೆಯನ್ನು ಹೇಗೆ ಮಾಡಬೇಕು ಎಂಬುದು ಆತನ ಬುದ್ಧಿವಂತಿಕೆ ಮತ್ತು ಅಪ್ರತಿಮ ಪರಿಶ್ರಮದಿಂದ ಎಂಬುದನ್ನು ಮರೆಯಬಾರದು.

ಸನತ್ ರೈ

saakshatv.com

Tags: #LukaModric #Modric #CroatiaFootball #RealMadrid #ACMilan #BallonDor #FIFAWorldCup2026 #InspirationalStory #WarSurvivor #RealLifeHero #HollywoodStyle #saakshatv #sanathrai
ShareTweetSendShare
Join us on:

Related Posts

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

by Shwetha
August 30, 2026
0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಾಲ್ಮೀಕಿ ನಿಗಮ ಹಗರಣ: ‘ಬಿ. ನಾಗೇಂದ್ರರನ್ನು ಬಿಜೆಪಿ ಷಡ್ಯಂತ್ರದಿಂದ ಗುರಿಯಾಗಿಸಿದೆ’ ಎಂದ BK ಹರಿಪ್ರಸಾದ್

by Shwetha
August 30, 2026
0

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರ ಇದೀಗ ರಾಜ್ಯ...

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

by Shwetha
August 30, 2026
0

ಭಾರತೀಯ ಕಾರ್ಪೊರೇಟ್ ವಲಯದಲ್ಲಿ ದಶಕಗಳಿಂದ ಕುತೂಹಲ ಮೂಡಿಸಿರುವ ಟಾಟಾ ಸನ್ಸ್ ಮತ್ತು ಶಾಪೂರ್ಜಿ ಪಲ್ಲೊಂಜಿ (SP) ಗ್ರೂಪ್ ನಡುವಿನ ಸಂಬಂಧದ ಬಿಕ್ಕಟ್ಟು ಇದೀಗ ಮತ್ತೊಂದು ಪ್ರಮುಖ ಹಂತ...

ಮೋದಿ ಸರ್ಕಾರದ ಒತ್ತಡದಿಂದ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಪ್ರಕಟಣೆಗೆ ತಡೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದ ಕಾಂಗ್ರೆಸ್

ಮೋದಿ ಸರ್ಕಾರದ ಒತ್ತಡದಿಂದ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಪ್ರಕಟಣೆಗೆ ತಡೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದ ಕಾಂಗ್ರೆಸ್

by Shwetha
August 30, 2026
0

ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಪಯಣವನ್ನು ಅನಾವರಣಗೊಳಿಸುವ Belonging: A Journey of Love ಎಂಬ ಆತ್ಮಚರಿತ್ರೆ ಈಗ...

ಬ್ರಿಟಿಷರಿಗೇ ಹೆದರದ ನಮಗೆ ಈ ಬಿಜೆಪಿಗರು ಯಾವ ಪುಟ್ಗೋಸಿ? ಬಿಜೆಪಿ ಒಂದು ನಾಟಕ ಕಂಪನಿ, ಇವರ ಪಾದಯಾತ್ರೆ ಗಣಿ ಲೂಟಿಕೋರರ ಪಶ್ಚಾತ್ತಾಪ ಯಾತ್ರೆ: ಶಿವರಾಜ್ ತಂಗಡಗಿ ವ್ಯಂಗ್ಯ

ಬ್ರಿಟಿಷರಿಗೇ ಹೆದರದ ನಮಗೆ ಈ ಬಿಜೆಪಿಗರು ಯಾವ ಪುಟ್ಗೋಸಿ? ಬಿಜೆಪಿ ಒಂದು ನಾಟಕ ಕಂಪನಿ, ಇವರ ಪಾದಯಾತ್ರೆ ಗಣಿ ಲೂಟಿಕೋರರ ಪಶ್ಚಾತ್ತಾಪ ಯಾತ್ರೆ: ಶಿವರಾಜ್ ತಂಗಡಗಿ ವ್ಯಂಗ್ಯ

by Shwetha
August 30, 2026
0

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಬೆನ್ನಿಗೆ ನಿಂತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram