ಚಿತ್ರದುರ್ಗದಲ್ಲಿ ಸತತ 6 ಗಂಟೆಗಳಿಂದ ಭಾರಿ ವರ್ಷಧಾರೆ
ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗದಲ್ಲಿ ಕಳೆದ ಆರು ಗಂಟೆಗಳಿಂದ ಭಾರಿ ವರ್ಷಧಾರೆ ಆಗುತ್ತಿದೆ.
ತಡರಾತ್ರಿ ಏಕಾಏಕಿ ಧಾರಾಕಾರ ಮಳೆ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಚಿತ್ರದುರ್ಗ ನಗರದಲ್ಲಿ ತಡರಾತ್ರಿ ಎರಡು ಗಂಟೆಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.
8 ಗಂಟೆಯಾದರೂ ಜನರು ಮನೆಯಿಂದ ಹೊರ ಬರದಂತಾಗಿದೆ. ಇನ್ನು, ನಗರದ ಬಹುತೇಕ ರಸ್ತೆಗಳು ಜಲಾವೃತ್ತವಾಗಿವೆ.
ಇನ್ನು ಜಿಲ್ಲೆಯ ಹೊಳಲ್ಕೆರೆ, ಹಿರಿಯೂರು ಸೇರಿ ಹಲವು ಭಾಗಗಳಲ್ಲಿ ಭಾರಿ ವರ್ಷಧಾರೆ ಆಗುತ್ತಿದ್ದು, ಇಷ್ಟುದಿನ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣಾಗಮನದಿಂದ ಸಂತಸಗೊಂಡಿದ್ದಾರೆ.
ಇನ್ನು ಹೀಗೆ ಮಳೆ ಮುಂದುವರಿದರೇ ನಗರದ ಹೊರ ವಲಯದಲ್ಲಿರುವ ಮಲ್ಲಾಪುರ ಕೆರೆ ಕೋಡಿ ಬೀಳುವ ಸಾಧ್ಯತೆಗಳಿವೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸಕ್ಕರೆಗೆ ಪ್ರತಿ ಕೆ.ಜಿ.ಗೆ 100 ರೂ ?
ಇತ್ತ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಭಾರಿ ಮಳೆಯ ನಡುವೆಯೂ ಪೊಗರು ಸಿನಿಮಾಗೆ ಕೋಟೆನಾಡಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಮಳೆಯ ನಡುವೆಯೂ ಜನರು ಪೊಗರು ಸಿನಿಮಾ ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡಿ ಆನಂದಿಸಿದ್ದಾರೆ.