ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸಕ್ಕರೆಗೆ ಪ್ರತಿ ಕೆ.ಜಿ.ಗೆ 100 ರೂ ?

1 min read
Sugar Pakistan pm

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸಕ್ಕರೆಗೆ ಪ್ರತಿ ಕೆ.ಜಿ.ಗೆ 100 ರೂ ?

ಇಸ್ಲಾಮಾಬಾದ್‌, ಫೆಬ್ರವರಿ19: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸಕ್ಕರೆಗೆ ಪ್ರತಿ ಕೆ.ಜಿ.ಗೆ 100 ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನದಲ್ಲಿ ಪ್ರಸಕ್ತ ಋತುವಿನಲ್ಲಿ ಹೆಚ್ಚಿನ ಸಕ್ಕರೆ ಉತ್ಪಾದನೆಯ ನಿರೀಕ್ಷೆಯಿದ್ದರೂ, ಗ್ರಾಹಕರಿಗೆ ದುಬಾರಿ ಸಕ್ಕರೆಯಿಂದ ಯಾವುದೇ ಪರಿಹಾರ ದೊರಕಿಲ್ಲ. ಸಕ್ಕರೆಯ ಚಿಲ್ಲರೆ ಬೆಲೆ ಮುಂದಿನ ಕೆಲವು ದಿನಗಳಲ್ಲಿ ಪ್ರತಿ ಕೆ.ಜಿ.ಗೆ 100 ರೂ ಆಗಲಿದೆ ಎಂದು ಹೇಳಲಾಗಿದೆ.
ಸಕ್ಕರೆ ಚೀಲಗಳ ಸಗಟು ಬೆಲೆ ನವೆಂಬರ್‌ನಲ್ಲಿ ಪ್ರತಿ ಕೆಜಿಗೆ 69 ರೂ., ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 71-72 ರೂ ಆಗಿದೆ. ಡಿಸೆಂಬರ್-ಜನವರಿಯಲ್ಲಿ ಸಕ್ಕರೆಯ ಸಗಟು ಬೆಲೆ ಕೆ.ಜಿ.ಗೆ 78 ರೂ., ಚಿಲ್ಲರೆ ಬೆಲೆ ಪ್ರತಿ ಕೆ.ಜಿ.ಗೆ 80-82 ರೂ ಆಗಿದೆ.
Sugar

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಸಕ್ಕರೆಯ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 42 ರಿಂದ 44 ರೂಪಾಯಿ. ಇದರರ್ಥ ಸಕ್ಕರೆಗೆ ಪಾಕಿಸ್ತಾನಿಗಳು ದುಪ್ಪಟ್ಟು ಬೆಲೆ ತೆರಬೇಕಾಗುತ್ತದೆ. ರೈತರಿಗೆ ಕಬ್ಬಿನ ಬೆಲೆ ಹೆಚ್ಚಾಗಿರುವುದರಿಂದ ಸಕ್ಕರೆ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದೆ ಎಂದು ಪಾಕಿಸ್ತಾನ ಸಕ್ಕರೆ ಕಾರ್ಖಾನೆ ಸಂಘದ ಅಧ್ಯಕ್ಷ ಅಹ್ಮದ್ ಬವಾನಿ ಹೇಳಿದ್ದಾರೆ. ಸಕ್ಕರೆ ಉತ್ಪಾದನೆಯ ಒಟ್ಟು ವೆಚ್ಚದ ಶೇಕಡಾ 73 ರಷ್ಟು ರೈತರಿಗೆ ಪಾವತಿಸುವ ಬೆಲೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೆಳ ಸಿಂಧ್‌ನಲ್ಲಿ ಕಬ್ಬಿನ ಸರಾಸರಿ ಬೆಲೆ 300 ರೂ., ಮಧ್ಯ ಸಿಂಧ್‌ನಲ್ಲಿ 250 ರೂ. ಮತ್ತು ಮೇಲಿನ ಸಿಂಧ್‌ನಲ್ಲಿ 40 ಕೆ.ಜಿ.ಗೆ 250 ರೂ ಆಗಿದೆ. ಸಿಂಧ್ ಪಂಜಾಬ್ ನಂತರ ಪಾಕಿಸ್ತಾನದಲ್ಲಿ ಎರಡನೇ ಅತಿದೊಡ್ಡ ಕಬ್ಬು ಉತ್ಪಾದಿಸುವ ಪ್ರದೇಶವಾಗಿದೆ.
Sugar
ಪಾಕಿಸ್ತಾನದಲ್ಲಿ ಒಟ್ಟು 84 ಸಕ್ಕರೆ ಕಾರ್ಖಾನೆಗಳಿದ್ದು, ಅದರಲ್ಲಿ 38 ಗಿರಣಿಗಳು ಸಿಂಧ್ ಪ್ರಾಂತ್ಯದಲ್ಲಿವೆ. ಪಾಕಿಸ್ತಾನವು ಈ ವರ್ಷ 5.5 ಮಿಲಿಯನ್ ಟನ್ ಸಕ್ಕರೆಯನ್ನು ಉತ್ಪಾದಿಸುತ್ತದೆ ಎಂದು ಅಂದಾಜಿಸಲಾಗಿದೆ. ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಇಸ್ಮಾ) ಅಂದಾಜಿನ ಪ್ರಕಾರ, 2020-21ರ ಮಾರ್ಕೆಟಿಂಗ್ ಋತುವಿನಲ್ಲಿ ಒಟ್ಟು ಸಕ್ಕರೆ ಉತ್ಪಾದನೆಯು 2019-20ರ 274.2 ಲಕ್ಷ ಟನ್ ಗಳಿಗೆ ಹೋಲಿಸಿದರೆ, 302 ಲಕ್ಷ ಟನ್ ಆಗಬಹುದು ಎಂದು ತಿಳಿಸಿದೆ. ಇಸ್ಮಾ ಪ್ರಕಾರ, ಪ್ರಸಕ್ತ ಮಾರುಕಟ್ಟೆ ಋತುವಿನಲ್ಲಿ ಜನವರಿಯವರೆಗೆ ಸುಮಾರು 491 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 447 ರಷ್ಟಿತ್ತು.

ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗೋವಿನ ಸಗಣಿಯ ಪೇಂಟಿನ ಕಾರ್ಖಾನೆ ತೆರೆಯಲು‌ ಸರ್ಕಾರ ಚಿಂತನೆ

50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾರ್ಚ್ ನಲ್ಲಿ ಕೋವಿಡ್-19 ಲಸಿಕೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd