ಸೂಪರ್ ಓವರ್ ನಲ್ಲಿ ಕೆಕೆಆರ್ ತಂಡಕ್ಕೆ ಸೂಪರ್ ಜಯ
ಇದು ಐಪಿಎಲ್ ಟೂರ್ನಿಯ ಸೂಪರ್ ಸಂಡೆಯ ಸೂಪರ್ ಮ್ಯಾಚ್ ನ ಸೂಪರ್ ಓವರ್.
ಫಗ್ರ್ಯುಸನ್ ಅವರ ಮಾರಕ ದಾಳಿಯ ನೆರವನ್ನು ಪಡೆದ ಕೆಕೆಆರ್ ತಂಡ ಎಸ್ ಆರ್ ಎಚ್ ವಿರುದ್ದ ಸುಲಭ ಜಯ ದಾಖಲಿಸಿತ್ತು.
ಸೂಪರ್ ಓವರ್ ನಲ್ಲಿ ಎಸ್ ಆರ್ ಎಚ್ ತಂಡ ಎಡವಿತ್ತು. ಫಗ್ರ್ಯುಸನ್ ಅವರ ಎಸೆತಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಸ್ ಆರ್ ಎಚ್ ಬ್ಯಾಟ್ಸ್ ಮೆನ್ ಗಳು ವಿಫಲರಾದ್ರು.
ಎಸ್ ಆರ್ ಎಚ್ ತಂಡ ಎರಡು ವಿಕೆಟ್ ಕಳೆದುಕೊಂಡು ಗಳಿಸಿದ್ದು ಬರೀ ಎರಡು ರನ್ ಮಾತ್ರ. ಗೆಲ್ಲಲು 3 ರನ್ ಬೇಕಿದ್ದ ಕೆಕೆಆರ್ ತಂಡ ನಾಲ್ಕನೇ ಎಸೆತದಲ್ಲಿ ಗೆಲುವಿನ ನಗೆ ಬೀರಿತ್ತು.
ಈ ಮೂಲಕ ಟೂರ್ನಿಯಲ್ಲಿ ಕೆಕೆಆರ್ ತಂಡ ತನ್ನ ಗೆಲುವಿನ ಸಂಖ್ಯೆಯನ್ನು 5ಕ್ಕೆ ಏರಿಸಿಕೊಂಡಿತ್ತು. ಇಯಾನ್ ಮೊರ್ಗಾನ್ ನಾಯಕತ್ವದಲ್ಲಿ ಇದು ಮೊದಲ ಗೆಲುವು ಆಗಿದೆ.
ಹೀಗಾಗಿ ಕೆಕೆಆರ್ ತಂಡ ಪ್ಲೇ ಆಫ್‍ಗೆ ಎಂಟ್ರಿಯಾಗುವ ಅವಕಾಶವನ್ನು ಮತ್ತಷ್ಟು ಜೀವಂತವಾಗಿರಿಸಿಕೊಂಡಿದೆ.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ತಂಡ ಐದು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು.
ಕೆಕೆಆರ್ ತಂಡ ಪರ ಶುಬ್ಮನ್ ಗಿಲ್ 36 ರನ್, ರಾಹುಲ್ ತ್ರಿಪಾಠಿ 23 ರನ್, ನಿತೀಶ್ ರಾಣಾ 29 ರನ್ ಹಾಗೂ ಆಂಡ್ರೂ ರಸೇಲ್ 9 ರನ್ ಮತ್ತು
ಇಯಾನ್ ಮೊರ್ಗಾನ್ 34 ರನ್ ಹಾಗೂ ದಿನೇಶ್ ಕಾರ್ತಿಕ್ ಅಜೇಯ 29 ರನ್ ಸಿಡಿಸಿದ್ರು.
ಗೆಲ್ಲಲು 164 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಎಸ್ ಆರ್ ಎಚ್ ತಂಡ ಕೂಡ ಆರು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು.
ಡೇವಿಡ್ ವಾರ್ನರ್ ಅಜೇಯ 47 ರನ್ ಸಿಡಿಸಿ ಅದ್ಭುತ ಆಟ ಪ್ರದರ್ಶಿಸಿದ್ರು.
ಆರಂಭಿಕನಾಗಿ ಜೋನಿ ಬೇರ್ ಸ್ಟೋ 36 ರನ್ ಹಾಗೂ ಕೇನ್ ವಿಲಿಯಮ್ಸನ್ 29 ರನ್ ಗಳಿಸಿದ್ರು. ಇನ್ನು ಮನೀಷ್ ಪಾಂಡೆ 6 ರನ್ ಮತ್ತು ಪ್ರಿಯಮ್ ಗರ್ಗ್ 4 ರನ್ ಗೆ ಸೀಮಿತವಾದ್ರು.
ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಡೇವಿಡ್ ವಾರ್ನರ್ ತಂಡಕ್ಕೆ ಆಧಾರವಾಗಿ ನಿಂತ್ರು. ವಿಜಯ್ ಶಂಕರ್ 7 ರನ್ ಗೆ ಸೀಮಿತವಾದ್ರು.
ಆದ್ರೆ ಅಬ್ದುಲ್ ಸಮಾದ್ 23 ರನ್ ಗಳಿಸಿ ವಾರ್ನರ್‍ಗೆ ಉತ್ತಮ ಸಾಥ್ ನೀಡಿದ್ರು.
ಕೆಕೆಆರ್ ತಂಡದ ಪರ ಫಗ್ರ್ಯುಸನ್ 15ಕ್ಕೆ ಮೂರು ವಿಕೆಟ್ ಹಾಗೂ ಸೂಪರ್ ಓವರ್ ನಲ್ಲೂ ಎರಡು ವಿಕೆಟ್ ಉರುಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.








