ಐಪಿಎಲ್ 2020 – 22 ಯಾರ್ಡ್ ನ ಚೌಕಿದಾರ ಮಹೇಂದ್ರ ಸಿಂಗ್ ಧೋನಿ..
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಿವೃತ್ತಿಯ ನಂತರ ಮೊದಲ ಐಪಿಎಲ್ ಟೂರ್ನಿ ಆಡುತ್ತಿದ್ದಾರೆ.
ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಧೋನಿಯ ಜಾದು ನಡೆಯುತ್ತಿಲ್ಲ. ನಾಯಕನಾಗಿ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾಗುತ್ತಿದ್ದಾರೆ.
ಧೋನಿಯ ಬ್ಯಾಟಿಂಗ್ ಚಾರ್ಮ್ ಕೂಡ ಕಳೆದು ಹೋಗಿದೆ. ತಂಡದ ಗೇಮ್ ಪ್ಲಾನ್ ಗಳು ಧೋನಿ ಅಂದುಕೊಂಡಂತೆ ನಡೆಯುತ್ತಿಲ್ಲ. ತಂಡದ ಪ್ರದರ್ಶನದ ಬಗ್ಗೆ ಧೋನಿಗೆ ಅಸಮಾಧಾನವಿದೆ.
ಆದ್ರೆ ಧೋನಿಯ ವಿಕೆಟ್ ಕೀಪಿಂಗ್ ಮಹಿಮೆ ಮಾತ್ರ ಒಂಚೂರು ಕಡಿಮೆಯಾಗಿಲ್ಲ. 22 ಯಾರ್ಡ್ ನ ನಿಜವಾದ ಚೌಕಿದಾರ ಎಂಬುದನ್ನು ಧೋನಿ ತನ್ನ 39ರ ಹರೆಯದಲ್ಲೂ ಸಾಬೀತುಪಡಿಸುತ್ತಿದ್ದಾರೆ. ಧೋನಿಯ ವಿಕೆಟ್ ಕೀಪಿಂಗ್ ಸಾಮಥ್ರ್ಯವನ್ನು ನೋಡಿದಾಗ ಅವರ ಸ್ಥಾನ ತುಂಬುವುದು ಅಷ್ಟೊಂದು ಸುಲಭವಿಲ್ಲ.
ಐಪಿಎಲ್ 2020- ಡ್ವೇನ್ ಬ್ರೇವೋ 150 ವಿಕೆಟ್.. ಅಗ್ರ ವಿಕೆಟ್ ಪಡೆದವರ ಸಾಲಿನಲ್ಲಿ ಬ್ರೇವೋ
ಐಪಿಎಲ್ ಟೂರ್ನಿಯ 21ನೇ ಪಂದ್ಯವನ್ನೇ ನೋಡಿ. ಕೆಕೆಆರ್ ತಂಡದ ಐದು ಬ್ಯಾಟ್ಸ್ ಮೆನ್ ಗಳು ಔಟಾಗಲು ಪ್ರಮುಖ ಕಾರಣರಾದವರು ಮಹೇಂದ್ರ ಸಿಂಗ್ ಧೋನಿ.
ಹೌದು, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಧೋನಿ ನಾಲ್ಕು ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಒಂದು ರನೌಟ್ ಕೂಡ ಮಾಡಿದ್ದಾರೆ. ಧೋನಿ ಹಿಡಿದಿರುವ ನಾಲ್ಕು ಕ್ಯಾಚ್ ಗಳಲ್ಲಿ ಒಂದು ಕ್ಯಾಚ್ ಅಂತೂ ಅದ್ಭುತವಾಗಿತ್ತು.
ಬ್ರೇವೋ ಎಸೆತದಲ್ಲಿ ಕೆಕೆಆರ್ ನ ಶಿವಮ್ ಮಾವಿ ನೀಡಿದ ಕ್ಯಾಚ್ ಅನ್ನು ಧೋನಿ ಅದ್ಭುತವಾಗಿ ಹಿಡಿದು ತನ್ನ ಫಿಟ್ ನೆಸ್ ಅನ್ನು ಪ್ರಶ್ನೆ ಮಾಡಿದವರಿಗೆ ಸೈಲೆಂಟಾಗಿಯೇ ಉತ್ತರ ನೀಡಿದ್ದಾರೆ.
ಅಂದ ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ಧೋನಿ ಮಂಕಾದಂತೆ ಕಾಣುತ್ತಿದ್ದಾರೆ. ಈ ಹಿಂದಿನ ಐಪಿಎಲ್ ಟೂರ್ನಿಯಲ್ಲಿ ಲವಲವಿಕೆಯಿಂದ ಇರುತ್ತಿದ್ದ ಧೋನಿ ತಂಡದ ಪ್ರದರ್ಶನದ ಬಗ್ಗೆ ಸಿಟ್ಟಿದೆ. ಮುಖ್ಯವಾಗಿ ಬ್ಯಾಟ್ಸ್ ಮೆನ್ ಗಳು ವಿಫಲರಾಗುತ್ತಿದ್ದಾರೆ.
ಅಗ್ರ ಕ್ರಮಾಂಕದಿಂದ ಹಿಡಿದು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ವಿಫಲರಾಗುತ್ತಿರುವುದು ಧೋನಿಯವರನ್ನು ಒತ್ತಡಕ್ಕೆ ಸಿಲುಕುವಂತೆ ಮಾಡುತ್ತಿದೆ.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಡಕಿನ ಮನೆಯಂತಾಗಿದೆ. ಸುರೇಶ್ ರೈನಾ ತಂಡದಿಂದ ಹೊರನಡೆದಿರುವುದು ಮತ್ತು ಹರ್ಭಜನ್ ಸಿಂಗ್ ತಂಡವನ್ನು ಸೇರಿಕೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
https://youtu.be/iGJI7ZH5OMg?t=2








