ಒಂದು ಕಡೆ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ ಸಾರರ್ಥ್ಯ.
ಮತ್ತೊಂಡು ಕಡೆ ಕ್ರಿಕೆಟ್ ಲೋಕದ ಅತೀ ಭಯಂಕರ ವಿಧ್ವಂಸಕ ಬ್ಯಾಟ್ ಮೆನ್ ಎಬಿ ಡಿ ವಿಲಿಯರ್ಸ್ ಬಲ.
ಚುಟುಕು ಕ್ರಿಕೆಟ್ ನ ಸೂಪರ್ ಹೀರೋ ಆರೋನ್ ಫಿಂಚ್. ಸ್ಟೇನ್, ಮೊರೀಸ್, ಸೈನಿ, ಯಾದವ್ ಒಳಗೊಂಡ ವೇಗಿಗಳ ಸೇನೆ.
ಎದುರಾಳಿಗಳನ್ನು ಗಿರಿಗಿಟ್ಟಲೇ ಹೊಡಿಸಬಲ್ಲ ಚಾಹಲ್, ಸುಂದರ್, ಜಂಪಾ ಸ್ಪೀನ್ ಮಾಂತ್ರಿಕರು.
ಜೊತೆಗೆ ಯುವ ಆಟಗಾರರ ತಾಕತ್ತು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಲ.
ಪ್ರತಿ ಬಾರಿ ಕಪ್ ಹೊಡೆಯಲೇ ಬೇಕೆಂಬ ಉತ್ಸಾಹದಿಂದ ಟೂರ್ನಿಯನ್ನು ಶುರು ಮಾಡುವ ಆರ್ ಸಿಬಿ ಈವರೆಗೂ ಚಾಂಪಿಯನ್ ಆಗಿ ಕೇಕೆ ಹಾಕಿಲ್ಲ.
ಆದರೂ ಕಪ್ ಗೆಲ್ಲಬೇಕೆಂಬ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಇದಕ್ಕೆ ಕಾರಣ ಆರ್ ಸಿಬಿಗಿರುವ ಅದ್ವಿತೀಯ ಫ್ಯಾನ್ಸ್ ಫಾಲೋಯಿಂಗ್.
ಹೌದು..! ಪ್ರಪಂಚದ ಯಾವುದೇ ಕ್ರಿಕೆಟ್ ತಂಡಕ್ಕಿರದ ಫ್ಯಾನ್ಸ್ ಫಾಲೊಯಿಂಗ್ ಆರ್ ಸಿಬಿಗಿದೆ.
ತಂಡ ಗೆದ್ದರೂ ಸೋತರೂ ಅಭಿಮಾನಿಗಳು ಮಾತ್ರ ಕೊಹ್ಲಿ ಪಡೆಯನ್ನ ಬಿಡಲ್ಲ. ಆರ್ ಸಿಬಿ ಕೇವಲ ಒಂದು ಕ್ರಿಕೆಟ್ ತಂಡ ಮಾತ್ರವಲ್ಲ ಅದು ಕೋಟ್ಯಾಂತರ ಅಭಿಮಾನಿಗಳ ಎಮೋಷನ್. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಈ ಬಾರಿ ಪ್ರಶಸ್ತಿಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಆರ್ ಸಿಬಿ ಇಂದು ಸನ್ ರೈಸರ್ಸ್ ಹೈದರಾಬಾದರ್ ತಂಡವನ್ನು ಎದುರಿಸಲಿದೆ.
ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ಹೈದರಾಬಾದ್ ಗೆ ಸಾಲೀಡ್ ಬ್ಯಾಟಿಂಗ್ ವಿಭಾಗ ಹೊಂದಿರುವ ರೆಡ್ ಬುಲ್ಸ್ ಸವಾಲ್ ಹಾಕಲಿದ್ದಾರೆ.
ಭಾರಿ ಜಿದ್ದಾಜಿದ್ದಿನಿಂದ ಹೋರಾಟಕ್ಕೆ ದುಬೈ ಅಂಗಳ ಸಾಕ್ಷಿ ಆಗಲಿದೆ.
ಸನ್ ರೈಸರ್ಸ್ ಹೈದರಾಬಾದ್ ಬಲಾಬಲ
ಹೈದರಾಬಾದ್ ಗೆ ಬೌಲರ್ ಗಳೇ ಆನೆ ಬಲ.
140 ರನ್ ಗಳನ್ನೂ ಸಹ ಸುಲಭವಾಗಿ ಡಿಫೆಂಡ್ ಮಾಡಿಕೊಳ್ಳಬಲ್ಲ ಬೌಲರ್ ಗಳು ಹೈದರಾಬಾದ್ ತಂಡದಲ್ಲಿದ್ದಾರೆ.
ಭುವನೇಶ್ವರ್ ಕುಮಾರ್, ಲೀಲ್, ರಶೀದ್ ಖಾನ್ ರೊಂದಿಗೆ ಸಿದ್ಧಾರ್ಥ್ ಕೌಲ್ ಎದುರಾಳಿಗಳ ಮೇಲೆ ಸವಾರಿ ಮಾಡಬಲ್ಲರು.
ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ನಾಯಕ ಡೇವಿಡ್ ವಾರ್ನರ್ ಹೈದರಾಬಾದ್ ತಂಡದ ಕೀ ಪ್ಲೇಯರ್.
ಒಂಟಿ ಸಲಗದಂತೆ ಹೋರಾಡಿ ಪಂದ್ಯವನ್ನ ಗೆಲ್ಲಿಸಿಕೊಡುವ ತಾಕತ್ತು ವಾರ್ನರ್ ಗಿದೆ.
ಇವರ ಜೊತೆ ವಿಲಿಯಮ್ಸನ್, ಜಾನಿ ಬೇಸ್ರ್ಟೋವ್, ಮನೀಶ್ ಪಾಂಡೆ, ವಿಜಯ್ ಶಂಕರ್ ಯಾವುದೇ ಸಂದರ್ಭದಲ್ಲಾದರೂ ತಂಡಕ್ಕೆ ನೆರವಾಗಬಲ್ಲರು.
ಹೈದರಾಬಾದ್ ನದ್ದೇ ಮೇಲುಗೈ
ಐಪಿಎಲ್ ನಲ್ಲಿ ಹೈದರಾಬಾದ್ ಮತ್ತು ಆರ್ ಸಿಬಿ ತಂಡಗಳು 13 ಬಾರಿ ಮುಖಾಮುಖಿಯಾಗಿದ್ದು,
7 ರಲ್ಲಿ ಸನ್ ರೈಸರ್ ತಂಡ ಗೆಲುವು ಸಾಧಿಸಿದ್ರೆ, 6 ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದೆ.
ಕಳೆದ ಆವೃತ್ತಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿವೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಇಂದಿನ ಈ ತಂಡಗಳ ಪಂದ್ಯ ಬ್ಯಾಟ್ ಮೆನ್ಸ್ ವರ್ಸಸ್ ಬೌಲರ್ಸ್ ಎನ್ನುವುದರಲ್ಲಿ ಡೌಟೇ ಇಲ್ಲ.
ಸಂಭಾವ್ಯ ತಂಡಗಳು ಇಂತಿವೆ:
ಆರ್.ಸಿ.ಬಿ: ಆರೋನ್ ಫಿಂಚ್, ದೇವದತ್, ಕೊಹ್ಲಿ, ಎಬಿ ಡಿವಿಲಿಯರ್ಸ್, ಮೋಯಿನ್ ಅಲಿ, ಶಿವಂ ದುಬೆ, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ನವದೀಪ್ ಸೈನಿ, ಯಜುವೇಂದ್ರ ಚಹಲ್.
ಹೈದರಾಬಾದ್: ಡೇವಿಡ್ ವಾರ್ನರ್, ಜಾನಿ ಬೇಸ್ರ್ಟೋವ್, ಮನೀಶ್ ಪಾಂಡೆ, ವಿಜಯ್ ಶಂಕರ್, ವಿರಾಟ್ ಸಿಂಗ್, ಮೊಹಮ್ಮದ್ ನಬೀ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಅಬ್ದುಲ್ ಸಮದ್.