PF ಹೊಸ ಗೈಡ್ ಲೈನ್ಸ್: UAN ಜೊತೆಗೆ ಆಧಾರ್ ಲಿಂಕ್ ಕಡ್ಡಾಯವಲ್ಲ ಎಂದು ಹೇಳಿದೆ ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
1: EPFO ಸುತ್ತೋಲೆ
EPFO (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಇತ್ತೀಚಿನ ಸುತ್ತೋಲೆಯ ಪ್ರಕಾರ, UAN (ಯೂನಿವರ್ಸಲ್ ಅಕೌಂಟ್ ನಂಬರ್) ಜೊತೆಗೆ ಆಧಾರ್ ಲಿಂಕ್ ಮಾಡುವ ಅಗತ್ಯವಿಲ್ಲವೆಂದು ತಿಳಿಸಿದೆ.
2: ವಿನಾಯಿತಿಯ ಹಕ್ಕುದಾರರು
ಅಂತರಾಷ್ಟ್ರೀಯ ಕೆಲಸಗಾರರು: ಭಾರತದಲ್ಲಿ ಕೆಲಸ ಮುಗಿಸಿ ತಾಯ್ನಾಡಿಗೆ ಹಿಂದಿರುಗಿದವರು.
ವಿದೇಶಿ ಪೌರತ್ವ ಪಡೆದ ಭಾರತೀಯರು: ವಿದೇಶಕ್ಕೆ ವಲಸೆ ಹೋದವರು.
ನೇಪಾಳ ಮತ್ತು ಭೂತಾನ್ ನಾಗರಿಕರು: EPFO ಕಾಯಿದೆಯಡಿಯಲ್ಲಿ “ಉದ್ಯೋಗಿಗಳು” ಎಂದು ಅರ್ಹತೆ ಪಡೆದವರು.
3: ಪರ್ಯಾಯ ದಾಖಲೆಗಳು
ಆಧಾರ್ ಬದಲಿಗೆ ಪಾಸ್‌ಪೋರ್ಟ್ ಅಥವಾ ಪೌರತ್ವ ಗುರುತಿನ ಪ್ರಮಾಣಪತ್ರಗಳನ್ನು ಬಳಸಬಹುದು.
ಪರಿಶೀಲನೆ: EPFO ಅಧಿಕಾರಿಗಳು ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ.
ಅನುಮೋದನೆ: OIC (ಆಫೀಸ್ ಇನ್-ಚಾರ್ಜ್) ಅನುಮೋದನೆ ಅಗತ್ಯವಿರುತ್ತದೆ.
ಬ್ಯಾಂಕ್ ಖಾತೆ ಪರಿಶೀಲನೆ: 5 ಲಕ್ಷಕ್ಕಿಂತ ಹೆಚ್ಚು ಬ್ಯಾಲೆನ್ಸ್ ಇದ್ದರೆ, ಉದ್ಯೋಗದಾತರೊಂದಿಗೆ ವಿವರಗಳನ್ನು ದೃಢೀಕರಿಸಬೇಕು.
ಪಾವತಿ ವಿಧಾನ
NEFT (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್) ಮೂಲಕ ಪಾವತಿಗಳನ್ನು ಮಾಡಲಾಗುತ್ತದೆ.