ದೇಶದಲ್ಲಿ ಅಭಿವೃದ್ಧಿ ಹೊಂದಿದ ತಂತ್ರಜ್ಞಾನಗಳೊಂದಿಗೆ ಯುದ್ಧದಲ್ಲಿ ಗೆಲುವು ಸಾಧಿಸಿದಾಗ ಸಿಗುವ ತೃಪ್ತಿ ಬೇರೆ ಯಾವುದು ನೀಡುವುದಿಲ್ಲ – ರಾವತ್
ಹೊಸದಿಲ್ಲಿ, ಅಗಸ್ಟ್28: ಭಾರತವು ತನ್ನ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ಸವಾಲುಗಳನ್ನು ಮತ್ತು ಬೆದರಿಕೆಗಳನ್ನು ಎದುರಿಸಲು ಸಮರ್ಥವಾಗಿದೆ ಎಂದು ಹೇಳಿದ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭಾರತೀಯ ಸೈನಿಕನಿಗೆ ದೇಶದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳೊಂದಿಗೆ ಯುದ್ಧವನ್ನು ಗೆಲ್ಲುವುದರಿಂದ ಸಿಗುವ ತೃಪ್ತಿ ಬೇರೆ ಯಾವುದು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಗುರುವಾರ ರಕ್ಷಣಾ ಉದ್ಯಮದ ಭಾಗವಾಗಿ ಆತ್ಮನಿರ್ಭಾರ ಭಾರತ್’ ಕುರಿತು ವೆಬ್‌ನಾರ್‌ನಲ್ಲಿ ಮಾತನಾಡಿದ ಜನರಲ್ ರಾವತ್, ದೇಶವು ಉನ್ನತ ಮಟ್ಟದ ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ತಯಾರಿಸಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಭಾರತ ಇಂದು ಹಲವಾರು ಸವಾಲುಗಳನ್ನು ಮತ್ತು ಬೆದರಿಕೆಗಳನ್ನು ಎದುರಿಸುತ್ತಿದೆ. ಕೋವಿಡ್-19 ಗೆ ನಮ್ಮ ಸಾಮೂಹಿಕ ಪ್ರತಿಕ್ರಿಯೆಯು ಅಂತಹ ಯಾವುದೇ ಅನಿರೀಕ್ಷಿತ ಸಂಭವನೀಯತೆಯನ್ನು ನಿವಾರಿಸುವ ನಮ್ಮ ಸಾಮರ್ಥ್ಯವನ್ನು ದೃಢಪಡಿಸಿದೆ ಎಂದ ಅವರು ಉನ್ನತ ಮಟ್ಟದ ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಉತ್ಪಾದಿಸುವ ಸಾಮರ್ಥ್ಯ, ಮತ್ತು ಇಚ್ಛಾಶಕ್ತಿಯನ್ನು ನಾವು ಹೊಂದಿದ್ದೇವೆ.

ಆತ್ಮನಿರ್ಭಾರ ಭಾರತ್ ಸರಿಯಾದ ದಿಕ್ಕಿನಲ್ಲಿ ಮತ್ತು ದೃಷ್ಟಿಕೋನದಲ್ಲಿ ಸಾಗುತ್ತಿದ್ದು, ಸ್ವಯಂ-ದಕ್ಷತೆಯನ್ನು ಸಾಧಿಸಲು ಮತ್ತು ರಕ್ಷಣಾ ಸಾಧನಗಳ ನಿವ್ವಳ ರಫ್ತುದಾರರಾಗಲು ಅವಕಾಶವನ್ನು ಎದುರು ನೋಡುವ ಸಮಯ ಇದು ಎಂದು ತಿಳಿಸಿದರು.
ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ದೇಶೀಕರಣಕ್ಕೆ ಸಶಸ್ತ್ರ ಪಡೆಗಳ ಬದ್ಧತೆಯನ್ನು ಒತ್ತಿಹೇಳುತ್ತಾ, ದೇಶದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳೊಂದಿಗೆ ಯುದ್ಧವನ್ನು ಗೆಲ್ಲಲು ಭಾರತೀಯ ಸೈನಿಕನು ಸಂತೋಷಪಡುತ್ತಾನೆ ಎಂದು ರಾವತ್ ಹೇಳಿದರು.

ಸಶಸ್ತ್ರ ಪಡೆಗಳು ಆತ್ಮನಿರ್ಭಾರ ಭಾರತ್ ಅನ್ನು ಬೆಂಬಲಿಸಲು ಬದ್ಧವಾಗಿವೆ. ಸ್ಥಳೀಯ ಅಭಿವೃದ್ಧಿ ಹೊಂದಿದ ತಂತ್ರಜ್ಞಾನಗಳು ಮತ್ತು ಸಲಕರಣೆಗಳೊಂದಿಗೆ ಯುದ್ಧಗಳಲ್ಲಿ ಜಯಗಳಿಸುವುದಕ್ಕಿಂತ ಹೆಚ್ಚಿಗೆ ಬೇರೆ ಯಾವುದು ನಮಗೆ ತೃಪ್ತಿಯನ್ನು ನೀಡುವುದಿಲ್ಲ ಎಂದು ಜನರಲ್ ರಾವತ್ ಹೇಳಿದ್ದಾರೆ.








