Pogarau
ಧ್ರುವ ಸರ್ಜಾ ‘ಪೊಗರು’ಗೆ ತಮಿಳಿನಲ್ಲೂ ಭಾರೀ ಡಿಮ್ಯಾಂಡ್..!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ‘ಪೊಗರು’ ಸಿನಿಮಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರೀ ಕ್ರೇಜ್ ಕ್ರಿಯೇಟ್ ಮಾಡಿದೆ. ಅದ್ರಲ್ಲೂ ಇತ್ತೀಚೆಗೆ ಈ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿತ್ತು. ಇದೀಗ ಚಿತ್ರದ ತಮಿಳು ಡಬ್ಬಿಂಗ್ ರೈಟ್ಸ್ ಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆಯಂತೆ. ಹೌದು ತಮಿಳಿನ ಮೂರ್ನಾಲ್ಕು ನಿರ್ಮಾಣ ಸಂಸ್ಥೆಗಳು ಪೊಗರು ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಖರೀದಿಸಲು ಚಿತ್ರತಂಡವನ್ನು ಎಡತಾಕಿವೆಯಂತೆ. ಚಿತ್ರತಂಡವು ಮಾತುಕತೆ ನಡೆಸುತ್ತಿದ್ದು, ಒಳ್ಳೆಯ ಮೊತ್ತಕ್ಕೆ ಸಿನಿಮಾದ ಹಕ್ಕು ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅಂದ್ಹಾಗೆ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕುಗಳು ಬರೊಬ್ಬರಿ 7.2 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿತ್ತು. ಇನ್ನೂ ಬಾಲಿವುಡ್ ನ ನಿರ್ಮಾಪಕ ಆರ್ಕೆ ದಗ್ಗಲ್ ಅವರು ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. 
ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಬರ್ಟ್ ಸಿನಿಮಾದ ಬಿಗ್ ಅಪ್ ಡೇಟ್
ಇನ್ನೂ ಶೂಟಿಂಗ್ ಶುರುವಾದಾಗಿನಿಂದಲೂ ಪೊಗರು ನಾನಾ ವಿಶೇಷತೆಳಿಂದಲೇ ಸುದ್ದಿಯಲ್ಲಿದೆ. ಅದ್ರಲ್ಲೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ರಗಡ್ ಲುಕ್ ಅಭಿಮಾನಿಗಳ ಕ್ಯೂರಿಯಾಸಿಟಿಯನ್ನ ಹೆಚ್ಚಿಸುತ್ತಿದೆ. ಇನ್ನೂ ಸಿನಿಮಾದ ಖರಾಬು ಹಾಡಂತೂ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲೂ ಧೂಳೆಬ್ಬಿಸಿದೆ. ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಒಟ್ಟಾರೆ ಸಿನಿಮಾ ಬಗ್ಗೆ ಕಾತರತೆ ಹೆಚ್ಚುತ್ತಲೇ ಇದ್ದು, ಸಿನಿಮಾ ರಿಲೀಸ್ ಗೆ ಅಭಿಮಾನಿಗಳು ಕಾಯ್ತಿದ್ದಾರೆ. ಮತ್ತೊಂದು ವಿಶೇಷತೆ ಅಂದ್ರೆ ಚಿತ್ರದಲ್ಲಿ ವಿದೇಶದ ಭಾರಿ ದೈತ್ಯದೇಹಿಗಳು ನಟಿಸಿದ್ದಾರೆ. ಅದರಲ್ಲಿ ಕಾಯ್ ಗ್ರೀನ್ ಸಹ ಒಬ್ಬರು.ನಂದಕಿಶೋರ್ ಸಾರಥ್ಯದಲ್ಲಿ ಮೂಡಿಬಂದಿರುವ ಪೊಗರು ಸಿನಿಮಾ ಸಂಕ್ರಾಂತಿ ಅಥವಾ ಕ್ರಿಸ್ ಮಸ್ ವೇಳೆಗೆ ತೆಗೆಗಪ್ಪಳಿಸಲಿದೆ ಎಂದು ಹೇಳಲಾಗ್ತಿದೆ. ಇನ್ನೂ ಚಿತ್ರದಲ್ಲಿ ಧ್ರುವಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ. ಚಿತ್ರ ತೆರೆಗಪ್ಪಳಿಸೋದಷ್ಟೇ ಬಾಕಿಯಿದೇ. ಇತ್ತ ಪೊಗರು ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗ್ತಿದ್ದಂತೆ ಧ್ರುವ ‘ದುಬಾರಿ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ ವಿಶೇಷ ಅಂದ್ರೆ ಪೊಗರು ಕಾಂಬಿನೇಶನ್ ಧ್ರವ ಮತ್ತು ನಂದಕಿಶೋರ್ ಅವರ ಜೋಡಿ ದುಬಾರಿಯಲ್ಲಿ ಮತ್ತೆ ಒಂದಾಗಿದ್ದು, ಈ ಸಿನಿಮಾದ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದೆ.
Pogarau
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








