‘ಶಿವ’ನ ‘ಪೊಗರ್ದಸ್ತ್ ಎಂಟ್ರಿಗೆ ‘ಖರಾಬು’ ಎಂದ ಅಭಿಮಾನಿಗಳು ..!
ಪ್ರೇಮಿಗಳ ದಿನದಂದು ಪೊಗರು ಚಿತ್ರತಂಡ ಸಖತ್ ಮಾಸ್ ಆಗಿರುವ ಟೈಟಲ್ ಸಾಂಗ್ ರಿಲೀಸ್ ಮಾಡಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಪೊಗರು ಚಿತ್ರದ ಟೈಟಲ್ ಟ್ರ್ಯಾಕ್ ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಪೊಗರು ಅಣ್ಣನಿಗೆ ಪೊಗರು ಪೊಗರು… ವಿಡಿಯೋ ಸಾಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಖರಾಬ್ ಲುಕ್ ಅಭಿಮಾನಿಗಳಲ್ಲಿ ಕಿಕ್ಕೇರಿಸಿದೆ.
ಹಾಡಿನ ಬೀಟ್ಸ್ಗಳು ಸೂಪರ್ ಡೂಪರ್ ಆಗಿದ್ದು, ಸಿನಿಪ್ರಿಯರು ಹುಚ್ಚೆದು ಕುಣಿಯುವಂತೆ ಮಾಡಿದೆ. ಚಂದನ್ ಶೆಟ್ಟಿ ಸಂಗೀತ ಟೈಟಲ್ ಟ್ರ್ಯಾಕ್ ಗೆ ಚಂದನ್ ಶೆಟ್ಟಿ, ಶಶಾಂಕ್ ಶೇಷಗಿರಿ ಹಾಗೂ ಅನಿರುದ್ಧ ಶಾಸ್ತ್ರಿ ದನಿಯಾಗಿದ್ದಾರೆ. ಈ ಹಾಡು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದ್ದು, 40 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.
ಪೊಗರು ಸಿನಿಮಾ, ಡೈಲಾಗ್ ಟ್ರೇಲರ್ ಹಾಗೂ ಹಾಡುಗಳಿಂದಲೇ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದ ಆಡಿಯೋ ಲಾಂಚ್ ನಿನ್ನೆಯಷ್ಟೆ ದಾವಣಗೆರೆಯಲ್ಲಿ ಆಗಿದೆ. ಈಗಾಗಲೇ ಚಿತ್ರದ ಖರಾಬು ಹಾಡು ಸಿನಿಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಖರಾಬು ಸಾಂಗ್ ಸಿಕ್ಕಾಪಟ್ಟೆ ಲೈಕ್ಸ್ ವೀವ್ಸ್ ಗಳನ್ನ ಪಡೆದು ಯೂಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಿತ್ತು. ತೆಲುಗು ಹಾಗೂ ಕನ್ನಡದಲ್ಲಿ ಹೊಸ ದಾಖಲೆ ಬರೆದಿದೆ. ಇದೀಗ ತನ್ನದೇ ಹಾಡಿನ ರೆಕಾರ್ಡ್ ಮುರಿಯೋಕೆ ಹೊರಟಿದೆ ಈ ಟೈಟಲ್ ಸಾಂಗ್.
ಹಾಡಿನ ಮೇಕಿಂಗ್ ಅದ್ಭುತವಾಗಿದೆ. ಧ್ರುವ ಡ್ಯಾನ್ಸ್ ಮಸ್ತ್ ಆಗಿದ್ದು, ಹಾಡಿನಲ್ಲಿ ‘ಪೊಗರು’ ನಿರ್ದೇಶಕ ನಂದ ಕಿಶೋರ್ ಸಹ ಡಾನ್ಸ್ ಮಾಡಿದ್ದಾರೆ. ಜೊತೆಗೆ ಡಾನ್ಸ್ ಕೊರಿಯೋಗ್ರಾಫರ್ ಮುರಳಿ ಸಹ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಗರು ಸಿನಿಮಾ ಇದೇ ಫೆಬ್ರವರಿ 19 ರಂದು ರಾಜ್ಯದಾದ್ಯಂತ ರಿಲೀಸ್ ಆಗಲಿದೆ.
ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಧ್ರುವ ಜೊತೆ ಅಂತರರಾಷ್ಟ್ರೀಯ ಫೈಟರ್ ಗಳೂ ಕೈ ಮಿಲಾಯಿಸಿದ್ದಾರೆ. ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಜೊತೆ ಡಾಲಿ ಧನಂಜಯ್, ತೆಲುಗಿನ ಸ್ಟಾರ್ ನಟ ಜಗಪತಿಬಾಬು, ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.
ಕೃಷಿ ಇಲಾಖೆಯ ‘ಯಜಮಾನ’ ರೈತರಿಗೆ ದಾಸನಾದ ಡಿ ಬಾಸ್..!
‘ಆಚಾರ್ಯ’ದಲ್ಲಿ ಸಣ್ಣ ಪಾತ್ರಕ್ಕಾಗಿಯೇ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟ ‘ಬುಟ್ಟಬೊಮ್ಮ’..!
ಬಿಗ್ ಬಾಸ್ ಕನ್ನಡ ಸೀಸನ್ 8 – ಸ್ಪರ್ಧಿಗಳ ಕ್ವಾರಂಟೈನ್ ಗೆ ಡೇಟ್ ಫಿಕ್ಸ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel