ಸಾಹುಕಾರ್ ಗೆ `ಸಿಡಿ’ಮದ್ದು ಶಾಕ್ : ಗೋಕಾಕ್ ನಲ್ಲಿ ಕರೆಂಟ್ ಕಟ್..!
ಬೆಂಗಳೂರು : ಬೆಳಗಾವಿ ಸಾಹುಕಾರ್, ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಂತೆ ಗೋಕಾಕ್ ನಲ್ಲಿ ಪವರ್ ಕಟ್ ಆಗಿದೆ. ಗೋಕಾಕ್, ರಮೇಶ್ ಜಾರಕಿಹೊಳಿ ಅವರ ಮತ ಕ್ಷೇತ್ರವಾಗಿದೆ. ಈ ಹಿನ್ನೆಲೆ ತಮ್ಮ ಮತ ಕ್ಷೇತ್ರದ ಜನರು ಈ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಬಾರದು ಅನ್ನೋ ಉದ್ದೇಶದಿಂದ ರಮೇಶ್ ಜಾರಕಿಹೊಳಿಯೇ ಕರೆಂಟ್ ಕಟ್ ಮಾಡಿಸಿದ್ದಾರಾ ಅನ್ನೋ ಪ್ರಶ್ನೆ ಈಗ ಉದ್ಭವವಾಗಿದೆ.
ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಪ್ರಭಾವವನ್ನ ಬಳಸಿಕೊಂಡು ಯುವತಿಗೆ ಕಿರುಕುಳ ಕೊಟ್ಟಿದ್ದಾರೆ. ಅಲ್ಲದೆ ಆಕೆಯನ್ನ ದೈಹಿಕವಾಗಿ ಬಳಸಿಕೊಂಡಿದ್ದು ಅಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಆರೋಪ ಮಾಡಿದ್ದಾರೆ.
ಅಲ್ಲದೆ ರಮೇಶ್ ಜಾರಕಿಹೊಳಿ ಅವರ `ಆ’ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಸಂತ್ರಸ್ತೆ ಯುವತಿಗೆ ನ್ಯಾಯ ಕೊಡಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.