ಮಾಧ್ಯಮ ಕ್ಷೇತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿ ಇದೀಗ ದೇಶದ 7 ರಾಜ್ಯಗಳಲ್ಲಿ ಉದ್ಯಮ ಆರಂಭಿಸಿರುವ ಸಾಹಸಿಗ ಪಿ. ಆನಂದಕುಮಾರ್.
ದೂರದೃಷ್ಟಿಯ ಯೋಚನೆ, ಯೋಜನೆಯನ್ನು ಮುಂದಿಟ್ಟುಕೊಂಡು ಶುರು ಮಾಡಿರುವ ಉದ್ಯಮವನ್ನು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಬ್ಯಾಂಕಿಂಗ್ ಸೇವೆಯ ಜೊತೆಗೆ ಟಿವಿ ಉದ್ಯಮ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ತಮ್ಮ ಅನುಭವವನ್ನು ಧಾರೆ ಎರೆದು ಪ್ರೋ ವಿನ್ ಮ್ಯಾನೇಜ್?ಮೆಂಟ್ ಸರ್ವೀಸಸ್ ಸಂಸ್ಥೆಯನ್ನು ಕಟ್ಟಿ ಹೆಮ್ಮರವಾಗಿ ಬೆಳೆಸುತ್ತಿದ್ದಾರೆ.
cm cup badminton 2026- Pro win panthers team
ಮೂಲತಃ ಬೆಂಗಳೂರಿನವರೇ ಆದ ಪಿ. ಅನಂದಕುಮಾರ್, ಆರಂಭದಲ್ಲಿ ಮೂನ್ ಟಿವಿಯ ಹಿರಿಯ ವರದಿಗಾರರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಕಾಲೇಜು ಜೀವನದಿಂದಲೇ ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅದರ ಫಲವಾಗಿಯೇ ತಮ್ಮೆಲ್ಲ ಅನುಭವವನ್ನು ಧಾರೆ ಎರೆದು ಪ್ರೋ ವಿನ್ ಮ್ಯಾನೇಜ್‍ಮೆಂಟ್ ಸರ್ವೀಸಸ್ ಸಂಸ್ಥೆಯನ್ನು ಕಟ್ಟಿದರು. ಪಿ. ಆನಂದ್ ಅವರ ಪರಿಶ್ರಮ, ಪ್ರಾಮಾಣಿಕತೆಯಿಂದಲೇ ಪ್ರೋ ವಿನ್ ಮ್ಯಾನೇಜ್‍ಮೆಂಟ್ ಸರ್ವೀಸಸ್ ಸಂಸ್ಥೆಯನ್ನು ದೇಶದ ಪ್ರಮುಖ ಬ್ಯಾಂಕಿಂಗ್ ಸರ್ವೀಸ್ ಸಂಸ್ಥೆಯನ್ನಾಗಿ ರೂಪಿಸಿದ್ದಾರೆ.
ಪಿ. ಆನಂದಕುಮಾರ್ ನೇತೃತ್ವದ ಪ್ರೋ ವಿನ್ ಮ್ಯಾನೇಜ್‍ಮೆಂಟ್ ಸರ್ವೀಸಸ್ ಸದ್ಯ ದೇಶದ 7 ರಾಜ್ಯಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. 140 ಉದ್ಯೋಗಿಗಳು, 64 ಎಕ್ಸಿಕ್ಯುಟಿವ್, 50 ಟೆಲಿಕಾಲರ್ ಮತ್ತು ಲೀಡರ್‍ಶಿಪ್ ತಂಡದ ಜತೆಗೆ ಅನುಭವಿ ಫಿಲ್ಡ್ ಎಕ್ಸಿಕ್ಯುಟಿವ್‍ಗಳನ್ನು ಪೆÇ್ರೀ ವಿನ್ ಮ್ಯಾನೇಜ್‍ಮೆಂಟ್ ಸರ್ವೀಸಸ್ ಹೊಂದಿದೆ. ಈ ಅನುಭವಿಗಳ ತಂಡ ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ವಿಜಯಪುರ, ಬೆಳಗಾವಿ, ಕೇರಳದ ಕೊಚ್ಚಿನ್, ಪಲಕ್ಕಾಡ್, ಪಾಂಡಿಚೆರಿ, ಚೆನ್ನೈ, ಕೋವಲ್, ಸೇಲಂ, ಧರ್ಮಾಪುರ, ಪಾಂಡಿಚೆರಿ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ನೆಲ್ಲೂರು, ವೈಜಾಕ್, ಮಹಾರಾಷ್ಟ್ರ, ಮುಂಬೈ ಮತ್ತು ಒಡಿಸ್ಸಾದ ರಾಜ್ಯಗಳ ಪ್ರಮುಖ ನಗರಗಳಲ್ಲಿ ತಮ್ಮ ಸೇವೆಯನ್ನು ನೀಡುತ್ತಿದೆ. ಒಟ್ಟಾರೆ 50 ಜಿಲ್ಲೆಗಳಲ್ಲಿ 12 ಕಚೇರಿಗಳನ್ನು ಹೊಂದಿದೆ.
ಬ್ಯಾಂಕಿಂಗ್ ಸೇವೆಗೆ ಬರುವಂತಹ ಗ್ರಾಹಕರ ವೆರಿಫಿಕೇಷನ್, ಸಾಲ ವಸೂಲಾತಿ ಸೇರಿದಂತೆ ಮತ್ತಿತರ ಸೇವೆಗಳನ್ನು ಪೆÇ್ರೀ ವಿನ್ ಮ್ಯಾನೇಜ್‍ಮೆಂಟ್ ಸರ್ವೀಸಸ್ ನೀಡುತ್ತಿದೆ. ಪ್ರಮುಖವಾಗಿ ಎಚ್‍ಡಿಎಫ್‍ಸಿ, ಸ್ಟಾರ್ ಕಾರ್ಡ್ ಸೇರಿದಂತೆ ಮತ್ತಿತರ ಬ್ಯಾಂಕ್‍ಗಳಿಗೆ ತನ್ನ ಸೇವೆಯನ್ನು ನೀಡಲಾಗುತ್ತಿದೆ. ಬ್ಯಾಂಕಿಂಗ್ ಸೇವೆಯ ಜತೆಗೆ ಟಿವಿ ಉದ್ಯಮದಲ್ಲೂ ತಮ್ಮ ಛಾಪನ್ನು ಪಿ. ಆನಂದಕುಮಾರ್ ಮೂಡಿಸಿದ್ದಾರೆ. ಧಾರವಾಹಿ ಸೇರಿದಂತೆ ಟಿವಿಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳ ನಿರ್ಮಾಣವನ್ನೂ ಪಿ. ಆನಂದ್‍ಕುಮಾರ್ ಮಾಡುತ್ತಿದ್ದಾರೆ. ಸ್ವಂತ ಶ್ರಮ, ಪ್ರಾಮಾಣಿಕತೆಯಿಂದ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪಿ.ಆನಂದಕುಮಾರ್ ಅವರು ಸಿಎಂ ಕಪ್‍ನ ಭಾಗವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಪ್ರೋ ವಿನ್ ಪ್ಯಾಂಥರ್ಸ್ ತಂಡದ ಮಾಲೀಕರಾಗಿ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಕೈ ಜೋಡಿಸಿದ್ದಾರೆ.
ರಾಮನಗರ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಈಗ ತನ್ನದೇ ಪಕ್ಷದ ಪ್ರಭಾವಿ ಸಚಿವರಿಂದ ದೊಡ್ಡ ಮುಜುಗರ ಎದುರಾಗಿದೆ. ಸರ್ಕಾರದ ಅತಿ ದೊಡ್ಡ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಬಗ್ಗೆ...
ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ...
ವಿನಾಯಕನ ಭಕ್ತರಿಗೆ ಇದು ಅತ್ಯಂತ ಪುಣ್ಯದಾಯಕ ಸಮಯ. ಭಾದ್ರಪದ ಮಾಸದ ಪವಿತ್ರ ದಿನಗಳಲ್ಲಿ ವಿಘ್ನರಾಜ ಸಂಕಷ್ಟಿ ಚತುರ್ಥಿಯು ಸನ್ನಿಹಿತವಾಗಿದ್ದು, ಈ ಬಾರಿ ಇದು ಮಂಗಳವಾರದಂದು ನಾಳೆ ಬಂದಿರುವುದು...
ಬೆಂಗಳೂರು ರಂಗಭೂಮಿಯ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಕ್ಷರಗಳ ಪುಟ ತೆರೆದುಕೊಂಡಿತು. ದಶಕಗಳಿಂದ ಕನ್ನಡಿಗರ ಮನಗೆದ್ದಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿನಯದ ಐತಿಹಾಸಿಕ ನಾಟಕ ಮುಖ್ಯಮಂತ್ರಿ ತನ್ನ...