ADVERTISEMENT
Monday, July 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪರಿಷತ್ ಸಭಾಪತಿ ಫೈಟ್: ಧರ್ಮೇಗೌಡರನ್ನು ಎಳೆದಾಡಿದ ಕಾಂಗ್ರೆಸ್, ಗದ್ದಲ, ಕೋಲಾಹಲ, ಮತ್ತೆ ಮುಂದೂಡಿಕೆ..!?

Kariyappa N by Kariyappa N
December 15, 2020
in Newsbeat, Politics, Samagra karnataka, ರಾಜ್ಯ
couclil
Share on FacebookShare on TwitterShare on WhatsappShare on Telegram

ಬೆಂಗಳೂರು: ಹಿರಿಯ ಸದನ ಎಂದೇ ಖ್ಯಾತವಾಗಿರುವ ರಾಜ್ಯ ವಿಧಾನಪರಿಷತ್ ಇಂದು ರಾಜ್ಯ ರಾಜಕೀಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಸಭಾಪತಿ ಹುದ್ದೆಗಾಗಿ ಭಾರಿ ಫೈಟ್‍ಗೆ ಸಾಕ್ಷಿಯಾಯಿತು.
ವಿಧಾನಪರಿಷತ್ ಕಲಾಪ ಆರಂಭಿಸಲು ಬೆಲ್ ಹಾಕಲಾಗಿತ್ತು. ನಿಯಮದ ಪ್ರಕಾರ ಬೆಲ್ ನಿಲ್ಲುವ ಮೊದಲೇ ಉಪಸಭಾಪತಿ ಧರ್ಮೇಗೌಡರನ್ನು ಬಿಜೆಪಿ ಸದಸ್ಯರು ಸಭಾಪತಿ ಪೀಠಕ್ಕೆ ತಂದು ಕೂರಿಸಿದ್ದೇ ಇಷ್ಟೇಲ್ಲಾ ರಾದ್ಧಾಂತಕ್ಕೆ ಕಾರಣವಾಯಿತು.

council
ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಕಳೆದ ವಾರ ಪರಿಷತ್ ಕಲಾಪ ದಿಢೀರ್ ಅನಿರ್ಧಿಷ್ಟಾವಧಿಗೆ ಮುಂದೂಡಿದ ಹಿನ್ನೆಲೆಯಲ್ಲಿ ಸಭಾಪತಿ ವಿರುದ್ಧ ಮತ್ತೆ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಇಂದು ಒಂದು ದಿನದ ವಿಶೇಷ ಅಧಿವೇಶನ ಕರೆದಿದೆ.
ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್‍ನಿಂದ ಸಭಾಪತಿ ಸ್ಥಾನಕ್ಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ರಣತಂತ್ರ ರೂಪಿಸಿತ್ತು. ಹೀಗಾಗಿ ಇಂದು ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅನುಮೋದನೆ ಪಡೆದು ಕಾಂಗ್ರೆಸ್‍ಗೆ ಟಕ್ಕರ್ ಕೊಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿತ್ತು.

Related posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

July 6, 2026
ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

July 6, 2026

council
ನಿಯಮದ ಪ್ರಕಾರ ಯಾವುದೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಅರ್ಜಿ ಸಲ್ಲಿಸಿದರೆ ಕಲಾಪ ಆರಂಭಿಸುವುದು ಸಭಾಪತಿಗಳೇ ಎನ್ನಲಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಹೀಗಾಗಿ ಕಲಾಪ ಮುಂದುವರೆಸುವಂತೆ ಉಪಸಭಾಪತಿಗಳನ್ನು ಕರೆದು ಸಭಾಪತಿ ಸ್ಥಾನ ಅಲಂಕರಿಸಲು ಸೂಚಿಸಲಾಗುತ್ತದೆ. ಆನಂತರ ಉಪಸಭಾಪತಿಗಳು ಕಲಾಪವನ್ನು ಮುನ್ನಡೆವುದು ನಿಯಮ.
ಆದರೆ, ಇಂದು ಆಗಿದ್ದೇ ಬೇರೆ. ವಿಧಾನಪರಿಷತ್ ಕಲಾಪ ಆರಂಭಕ್ಕೂ ಮುನ್ನ ಬೆಲ್ ಹಾಕಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಸದನ ಆರಂಭವಾಗುತ್ತದೆ ಎಂಬುದನ್ನು ಸೂಚಿಸಲು ಬೆಲ್ ಹಾಕಲಾಗುತ್ತದೆ.


ಸದನ ಆರಂಭವಾಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಪಕ್ಷಗಳ ಸದಸ್ಯರು ಬಂದು ತಮ್ಮ ಆಸನಗಳಲ್ಲಿ ಕುಳಿತಿದ್ದರು. ಉಪಸಭಾಪತಿ ಧರ್ಮೇಗೌಡ ಕೂಡ ತಮ್ಮ ಸ್ಥಾನದಲ್ಲಿ ಕುಳಿತಿದ್ದರು. ಆದರೆ, ಬೆಲ್ ನಿಲ್ಲುವ ಮೊದಲೇ, ಮಾರ್ಷಲ್‍ಗಳು ಬಂದು ಸಭಾಪತಿಗಳು ಬರುತ್ತಾರೆಂದು ಹೇಳುವ ಮೊದಲೇ ಬಿಜೆಪಿ ಸದಸ್ಯರು ಸಭಾಪತಿ ಬರುವ ಬಾಗಿಲು ಬಂದ್ ಮಾಡಿ, ಸಭಾಪತಿ ಸ್ಥಾನಕ್ಕೆ ಉಪಸಭಾಪತಿ ಧರ್ಮೇಗೌಡರನ್ನು ತಂದು ಕೂರಿಸಿದರು. ಜತೆಗೆ ಸಭಾಪತಿ ಕೊಠಡಿಯಿಂದ ಪ್ರತಾಪ್ ಚಂದ್ರ ಶೆಟ್ಟಿ ಸದನ ಪ್ರವೇಶಿಸದಂತೆಯೂ ಬಿಜೆಪಿ ಸದಸ್ಯರು ಬಾಗಿಲು ಬಂದ್ ಮಾಡಿ ತಡೆದಿದ್ದರು.


ದಿಢೀರ್ ಆದ ಈ ಬೆಳವಣಿಗೆಯಿಂದ ಮೊದಲೇ ಸಜ್ಜಾಗಿ ಬಂದಿದ್ದ ಕಾಂಗ್ರೆಸ್ ಸದಸ್ಯರು, ಸಭಾಪತಿ ಪೀಠದಲ್ಲಿ ಕುಳಿತಿದ್ದ ಧರ್ಮೇಗೌಡರನ್ನು ಎಳೆದಾಡಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತಳ್ಳಾಟ, ನೂಕಾಟ ನಡೆದು, ಗದ್ದಲ, ಕೋಲಾಹಲವೇ ನಡೆಯಿತು. ಕಾಂಗ್ರೆಸ್-ಬಿಜೆಪಿ ಸದಸ್ಯರು ಪರಸ್ಪರ ಧಿಕ್ಕಾರದ ಘೋಷಣೆ ಕೂಗಿದರು. ತಳ್ಳಾಟ-ನೂಕಾಟ ತಡೆಯಲು ಬಂದ್ ಮಾರ್ಷಲ್‍ಗಳನ್ನೂ ಸದಸ್ಯರು ಎಳೆದಾಡಿದರು. ಈ ವೇಳೆ ಸಭಾಪತಿ ಪೀಠದ ಮುಂದೆ ಹಾಕಿದ ಕೋವಿಡ್ ಶೀಲ್ಡ್ ಒಡೆದು ಹೋಯಿತು.
ಕೊನೆಗೂ ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಎಳೆದು ತಂದು ಮೂಲ ಸ್ಥಾನದಲ್ಲಿ ಕೂರಿಸಿದರು. ಜತೆಗೆ ಆ ಸ್ಥಾನದಲ್ಲಿ ಹಿರಿಯ ಸದಸ್ಯ ಚಂದ್ರಶೇಖರ ಅವರನ್ನು ಕೂರಿಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಧಿಕ್ಕಾರದ ಘೋಷಣೆಗಳೂ ಮೊಳಗಿದವು.


ಈ ಹೈಡ್ರಾಮ ನಡೆಯುತ್ತಿರುವಾಗಲೇ ಬಿಜೆಪಿ ಸದಸ್ಯರು ಸಭಾಪತಿ ಪ್ರವೇಶ ದ್ವಾರಕ್ಕೆ ಮಾಡಿದ್ದ ಬಾಗಿಲನ್ನು ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಓಪನ್ ಮಾಡಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸದನಕ್ಕೆ ಬರಲು ಅವಕಾಶ ಮಾಡಿಕೊಟ್ಟರು.
ಸಭಾಪತಿ ಪೀಠದಲ್ಲಿ ಕುಳಿತ ಪ್ರತಾಪಚಂದ್ರ ಶೆಟ್ಟಿ, ಮತ್ತೆ ವಿಧಾನಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ನಿರ್ಗಮಿಸಿದರು.
ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ, ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರೂ ಬಿಜೆಪಿ-ಕಾಂಗ್ರೆಸ್ ಸದಸ್ಯರ ಧಿಕ್ಕಾರದ ಘೋಷಣೆಗಳು ಮುಂದುವರೆದವು.

ಕಾಂಗ್ರೆಸ್-ಬಿಜೆಪಿ ಆರೋಪ ಪ್ರತ್ಯಾರೋಪ
ವಿಧಾನಪರಿಷತ್‍ನ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಮಾರಾಮಾರಿ ಬಗ್ಗೆ ಕಾಂಗ್ರೆಸ್, ಬಿಜೆಪಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಈ ಗಲಾಟೆಗೆ ಬಿಜೆಪಿಯೇ ನೇರ ಕಾರಣ. ಹೀಗಾಗಿ ಬಿಜೆಪಿ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇಂತಹ
ಬಿಜೆಪಿ ಸರ್ಕಾರ ಕಾನೂನುನ್ನು ಗಾಳಿಗೆ ತೂರಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ, ಕಾಂಗ್ರೆಸ್ ಸಂವಿಧಾನದ ರೀತಿ ನಡೆದುಕೊಳ್ಳದೆ ಕಾಂಗ್ರೆಸ್ ವರ್ತನೆ ಸಂಸದೀಯ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ಚರ್ಚೆ
ವಿಧಾನಪರಿಷತ್‍ನಲ್ಲಿ ನಡೆದ ಮಾರಾಮಾರಿ ವಿಚಾರವಾಗಿ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿರ್ಧರಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಸಚಿವರು, ಶಾಸಕರು ಹಾಗೂ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ರಾಜ್ಯಪಾರಿಗೆ ದೂರು ನೀಡುವುದರ ಜತೆ ಮುಂದಿನ ಕಾನೂನು ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: adjournedChairperson FightCongress-bjp galatekarnataka Vidhana Parishad
ShareTweetSendShare
Join us on:

Related Posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

by admin
July 6, 2026
0

ಹಾಗಂತ... ಇದು ಖಂಡಿತವಾಗಿಯೂ ಫುಟ್‍ಬಾಲ್ ಜಗತ್ತಿನ ಕಾಲ್ಪನಿಕ ಕಥೆಯಂತೂ ಅಲ್ಲವೇ ಅಲ್ಲ. ಬದಲಾಗಿ ಮತ್ತೊಂದು ಸಣ್ಣ ದೇಶದ ಫುಟ್‍ಬಾಲ್ ಆಟದ ಮಹೋನ್ನತ ಪರ್ವದ ನೈಜ ಚಿತ್ರಣ. ಒಬ್ಬ...

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

by Shwetha
July 6, 2026
0

ಮನೆಯಲ್ಲಿರುವ ಹಳೆಯ ಚಿನ್ನವನ್ನು ಲಾಕರ್ ನಲ್ಲಿಟ್ಟು ಸುಮ್ಮನೆ ಕೂರುವ ಬದಲು ಅದರಿಂದಲೇ ಲಾಭ ಗಳಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ದೇಶದ ಚಿನ್ನದ ಆಮದು ಪ್ರಮಾಣವನ್ನು ತಗ್ಗಿಸುವ...

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

by Shwetha
July 6, 2026
0

ಗರ್ಭಿಣಿಯಾಗಿದ್ದಾಗ ಪತಿ ತನಗೆ ಫಿಂಗರ್ ಚಿಪ್ಸ್ ಮತ್ತು ಮಾಂಸದೂಟ ತಿನ್ನಲು ಬಿಡಲಿಲ್ಲ ಎಂಬ ವಿಚಿತ್ರ ಕಾರಣ ನೀಡಿ ಪತ್ನಿಯೊಬ್ಬಳು ತನ್ನ ಎನ್ಆರ್ಐ ಪತಿಯ ಮೇಲೆ ದಾಖಲಿಸಿದ್ದ ಕ್ರಿಮಿನಲ್...

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

by Shwetha
July 6, 2026
0

ವಾಷಿಂಗ್ಟನ್: ಇರಾನ್ ದೇಶದ ಉನ್ನತ ನಾಯಕತ್ವವನ್ನು ಕೇವಲ ಒಂದೇ ಒಂದು ದಾಳಿಯ ಮೂಲಕ ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತಕಾರಿ...

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಅಧಿಕೃತವಾಗಿ ನೋಂದಣಿಯಾದರೆ ಮಾತ್ರ ಇಂತಹ ಅಕ್ರಮಗಳಿಗೆ ಮುಕ್ತಿ ಸಿಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ. ಅಯೋಧ್ಯಾ ರಾಮಮಂದಿರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram