ADVERTISEMENT
Saturday, December 6, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ ನ ಬೆಸ್ಟ್ ಕ್ಯಾಪ್ಟನ್ ಯಾರು..?

admin by admin
September 11, 2020
in IPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

2020ರ ಯುಎಇ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳ ಸಿದ್ದತೆ ಭರದಿಂದ ನಡೆಯುತ್ತಿದೆ. ಕೋವಿಡ್ 19 ಸೋಂಕಿನ ನಡುವೆಯೂ ಜೈವಿಕ ಸುರಕ್ಷತೆಯಲ್ಲಿ ನಡೆಯುತ್ತಿರುವ ಟೂರ್ನಿಯ ಎಂಟೂ ತಂಡಗಳು ಅಭ್ಯಾಸದಲ್ಲಿ ನಿರತವಾಗಿವೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಇನ್ನು ಚುಟುಕು ಕ್ರಿಕೆಟ್ ನಲ್ಲಿ ತಂಡಗಳ ನಾಯಕ ಪ್ರಮುಖ ಪಾತ್ರ ವಹಿಸುತ್ತಾನೆ. ಅಂತಿಮ 11ರ ಬಳಗವನ್ನು ಆಯ್ಕೆ ಮಾಡಿಕೊಳ್ಳುವುದು, ಮೈದಾನದಲ್ಲಿ ಚಾಣಕ್ಷ ನಿರ್ಧಾರವನ್ನು ತೆಗೆದುಕೊಳ್ಳುವುದು, ಫೀಲ್ಡಿಂಗ್ ಸೆಟ್ ಮಾಡೋದು, ಬೌಲಿಂಗ್ ಬದಲಾವಣೆ ಮಾಡೋದು ಹೀಗೆ ಪ್ರತಿಯೊಂದು ಹಂತದಲ್ಲೂ ನಾಯಕನ ತೀರ್ಮಾನವೇ ಅಂತಿಮವಾಗಿರುತ್ತದೆ.

ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಬ್ಯಾಟ್ಸ್ ಮೆನ್‌ಗಳ ಅಬ್ಬರ, ಬೌಲರ್‌ಗಳ ಲಯಬದ್ಧವಾದ ಆಟದ ನಡುವೆಯೂ ನಾಯಕ ನಿರ್ಧಾರಗಳು ಕೂಡ ಪಂದ್ಯದ ಗತಿಯನ್ನು ಬದಲಾಯಿಸಿದಂತಹ ನಿದರ್ಶನಗಳಿವೆ. ಹಾಗಾಗಿ ಈ ಬಾರಿಯ ಐಪಿಎಲ್ ನ ಬೆಸ್ಟ್ ಕ್ಯಾಪ್ಟನ್ ಯಾರು ? ಎಂಟೂ ತಂಡಗಳನಾಯಕರ ರೇಟಿಂಗ್ ಹೀಗಿದೆ.

Related posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

December 5, 2025
ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

December 5, 2025

ಮಹೇಂದ್ರ ಸಿಂಗ್ ಧೋನಿ– ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ. ಐಪಿಎಲ್ ನಲ್ಲಿ ಧೋನಿ ನಾಯಕನಾಗಿ 160 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 99 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಒಂದು ಪಂದ್ಯ ಗೆದ್ರೆ ಧೋನಿ ಹೊಸ ದಾಖಲೆ ಬರೆಯಲಿದ್ದಾರೆ. ನಾಯಕನಾಗಿ ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಹಿರಿಮೆ ಇದೆ. ಧೋನಿಗೆ 10ರಲ್ಲಿ 9.5 ಅಂಕ

ರೋಹಿತ್ ಶರ್ಮಾ – ಮುಂಬೈ ಇಂಡಿಯನ್ಸ್ ತಂಡದ ಕಪ್ತಾನ. ನಾಯಕನಾಗಿ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಇದೆ. ನಾಯಕನಾಗಿ 60 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ತಾಳ್ಮೆಯಿಂದಲೇ ತಂಡವನ್ನು ಮುನ್ನಡೆಸುವ ರೋಹಿತ್ ಶರ್ಮಾಗೆ 10ರಲ್ಲಿ 9 ಅಂಕ

ದಿನೇಶ್ ಕಾರ್ತಿಕ್ – ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಾರಥಿ. 2018ರಲ್ಲಿ ದಿನೇಶ್ ಕಾರ್ತಿಕ್ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ರು. ಆದ್ರೆ 2019ರಲ್ಲಿ ಆ ರೀತಿಯ ಪ್ರದರ್ಶನ ನೀಡಿರಲಿಲ್ಲ. ಆದ್ರೂ ದಿನೇಶ್ ಕಾರ್ತಿಕ್ ಅವರ ಅವರು ನಿರ್ಧಾರಗಳು ಉತ್ತಮವಾದ ಮಟ್ಟದಲ್ಲೇ ಇದೆ. ಹೀಗಾಗಿ ದಿನೇಶ್ ಕಾರ್ತಿಕ್ ಅವರು ನಾಯಕನಾಗಿ 10ರಲ್ಲಿ 7.5 ಅಂಕ

ಡೇವಿಡ್ ವಾರ್ನರ್ – ಸನ್ ರೈಸರ್ಸ್ ಹೈದ್ರಾಬಾದ್. 2016ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಡೇವಿಡ್ ವಾರ್ನರ್. ಕಳೆದ ಋತುವಿನಲ್ಲಿ ವಾರ್ನರ್ ಕೇನ್ ವಿಲಿಯಮ್ಸನ್ ಅವರ ನಾಯಕತ್ವದಲ್ಲಿ ಆಡಿದ್ದರು. ಈ ಬಾರಿ ಡೇವಿಡ್ ವಾರ್ನರ್‌ಗೆ ಸನ್ ರೈಸರ್ಸ್ ತಂಡದ ಸಾರಥಿಯಾಗುವ ಅವಕಾಶ ಸಿಕ್ಕಿದೆ. ಡೇವಿಡ್ ವಾರ್ನರ್‌ಗೆ 10ರಲ್ಲಿ 7.5 ಅಂಕ

ಶ್ರೇಯಸ್ ಅಯ್ಯರ್ – ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ.  ಕೂಲ್ ಆಗಿಯೇ ತಂಡವನ್ನು ಮುನ್ನಡೆಸುವ ಶ್ರೇಯಸ್ ಅಯ್ಯರ್‌ಗೆ ರಿಕಿ ಪಾಂಟಿAಗ್, ಗಂಗೂಲಿ ಮತ್ತು ಕೈಫ್ ಅವರ ಬೆಂಬಲವಿದೆ. 2018ರ ಐಪಿಎಲ್ ಟೂರ್ನಿಯ ಮಧ್ಯದಲ್ಲಿ ಶ್ರೇಯಸ್ ಅಯ್ಯರ್ ಗೆ ತಂಡದ ನಾಯಕನಾಗುವ ಅವಕಾಶ ಸಿಕ್ಕಿತ್ತು. ಶ್ರೇಯಸ್ ಅಯ್ಯರ್‌ಗೆ 10ರಲ್ಲಿ ಏಳು ಅಂಕ

ವಿರಾಟ್ ಕೊಹ್ಲಿ– ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ. ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗುತ್ತಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕನಾಗಿ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆರ್‌ಸಿಬಿ ತಂಡದ ಬೆಸ್ಟ್ ಬ್ಯಾಟ್ಸ್ ಮೆನ್ ಆಗಿದ್ರೂ ಬೆಸ್ಟ್ ಕ್ಯಾಪ್ಟನ್ ಆಗಿಲ್ಲ. ವಿರಾಟ್ ಕೊಹ್ಲಿಗೆ 10ರಲ್ಲಿ 6.5 ಅಂಕ

https://www.youtube.com/watch?v=_st-YDZlTCE

ಸ್ಟೀವನ್ ಸ್ಮಿತ್ – ರಾಜಸ್ತಾನ ರಾಯಲ್ಸ್ ತಂಡದ ನಾಯಕ  ಐಪಿಎಲ್ ನಲ್ಲಿ ಸ್ಟೀವನ್ ಸ್ಮಿತ್ ನಾಯಕನಾಗಿ ಗಮನ ಸೆಳೆದಿದ್ದಾರೆ. ಶೇ.65.5ರಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 29 ಪಂದ್ಯಗಳಲ್ಲಿ ನಾಯಕನಾಗಿರುವ ಸ್ಟೀವನ್ ಸ್ಮಿತ್ ಸೋತಿದ್ದು ಬರೀ 9 ಪಂದ್ಯಗಳಲ್ಲಿ ಮಾತ್ರ. ಸ್ಟೀವನ್ ಸ್ಮಿತ್ ಮೂರು ಫ್ರಾಂಚೈಸಿಗಳಿಗೆ ನಾಯಕನಾಗಿದ್ದರು. ಸ್ಮಿತ್‌ಗೆ 10ರಲ್ಲಿ 6.5 ಅಂಕ

ಕೆ.ಎಲ್. ರಾಹುಲ್ – ಪಂಜಾಬ್ ಕಿಂಗ್ಸ್ ತಂಡದ ನೂತನ ಸಾರಥಿ. ಈ ಬಾರಿಯ ಐಪಿಎಲ್ ನಲ್ಲಿ ಎಲ್ಲರ ಕಣ್ಣು ಕೆ.ಎಲ್. ರಾಹುಲ್ ಮೇಲಿದೆ. ಪಂಜಾಬ್ ಕಿಂಗ್ಸ್ ತಂಡದ ನೂತನ ಸಾರಥಿಯಾಗಿ ಯಾವ ರೀತಿ ತಂಡವನ್ನು ಮುನ್ನಡೆಸುತ್ತಾರೆ ಅನ್ನೋದನ್ನು ನೋಡಬೇಕು,. ಹಾಗೇ ಕೆ.ಎಲ್. ರಾಹುಲ್ ಅವರಿಗೆ ಕೋಚ್ ಅನಿಲ್ ಕುಂಬ್ಲೆ ಅವರ ಶ್ರೀ ರಕ್ಷೆ ಇದೆ.

Tags: Cricketcskipl2020miRCBvirat kohli
ShareTweetSendShare
Join us on:

Related Posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

by admin
December 5, 2025
0

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ ಜೀವನದ (Life) ಕಂಪನಗಳನ್ನು ಗ್ರಹಗಳ ಚಲನೆಯಿಂದ ಪ್ರಭಾವಿತವಾಗಿರುವ ಮಂತ್ರಗಳನ್ನು (Mantra) ಪಠಿಸುವುದರಿಂದ ಸಮನ್ವಯಗೊಳಿಸಬಹುದು, ಜೀವನದ ಅನೇಕ...

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

by admin
December 5, 2025
0

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ...! ಅಡಕೆ ಕೃಷಿ ನಮ್ಮ ಜೀವಾಳ..ಇಡೀ ಕರಾವಳಿ, ಮಲೆನಾಡು ಕೃಷಿಕರ ಬದುಕನ್ನು ಹಸನಾಗಿಸಿರೋದು ಇದೇ ಅಡಕೆ ಬೆಳೆ. ಹೌದು.. ಹಚ್ಚ ಹಸಿರಿನಿಂದ ಕಂಗೊಳಿಸುವ...

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

by Shwetha
December 5, 2025
0

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಎಂದು ಸುಳ್ಳು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ತೊಟ್ಟಿಯಲ್ಲಿ ಮುಳುಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ...

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

by Shwetha
December 5, 2025
0

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರೂಪಾಯಿ...

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

by Shwetha
December 5, 2025
0

ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಸೈಬರ್​ ಭದ್ರತಾ ಆಪ್ ಅನ್ನು ಕಡ್ಡಾಯವಾಗಿ ಪೂರ್ವ ಅಳವಡಿಕೆ ಮಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram