2020ರ ಯುಎಇ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳ ಸಿದ್ದತೆ ಭರದಿಂದ ನಡೆಯುತ್ತಿದೆ. ಕೋವಿಡ್ 19 ಸೋಂಕಿನ ನಡುವೆಯೂ ಜೈವಿಕ ಸುರಕ್ಷತೆಯಲ್ಲಿ ನಡೆಯುತ್ತಿರುವ ಟೂರ್ನಿಯ ಎಂಟೂ ತಂಡಗಳು ಅಭ್ಯಾಸದಲ್ಲಿ ನಿರತವಾಗಿವೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಇನ್ನು ಚುಟುಕು ಕ್ರಿಕೆಟ್ ನಲ್ಲಿ ತಂಡಗಳ ನಾಯಕ ಪ್ರಮುಖ ಪಾತ್ರ ವಹಿಸುತ್ತಾನೆ. ಅಂತಿಮ 11ರ ಬಳಗವನ್ನು ಆಯ್ಕೆ ಮಾಡಿಕೊಳ್ಳುವುದು, ಮೈದಾನದಲ್ಲಿ ಚಾಣಕ್ಷ ನಿರ್ಧಾರವನ್ನು ತೆಗೆದುಕೊಳ್ಳುವುದು, ಫೀಲ್ಡಿಂಗ್ ಸೆಟ್ ಮಾಡೋದು, ಬೌಲಿಂಗ್ ಬದಲಾವಣೆ ಮಾಡೋದು ಹೀಗೆ ಪ್ರತಿಯೊಂದು ಹಂತದಲ್ಲೂ ನಾಯಕನ ತೀರ್ಮಾನವೇ ಅಂತಿಮವಾಗಿರುತ್ತದೆ.
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಬ್ಯಾಟ್ಸ್ ಮೆನ್ಗಳ ಅಬ್ಬರ, ಬೌಲರ್ಗಳ ಲಯಬದ್ಧವಾದ ಆಟದ ನಡುವೆಯೂ ನಾಯಕ ನಿರ್ಧಾರಗಳು ಕೂಡ ಪಂದ್ಯದ ಗತಿಯನ್ನು ಬದಲಾಯಿಸಿದಂತಹ ನಿದರ್ಶನಗಳಿವೆ. ಹಾಗಾಗಿ ಈ ಬಾರಿಯ ಐಪಿಎಲ್ ನ ಬೆಸ್ಟ್ ಕ್ಯಾಪ್ಟನ್ ಯಾರು ? ಎಂಟೂ ತಂಡಗಳನಾಯಕರ ರೇಟಿಂಗ್ ಹೀಗಿದೆ.
ಮಹೇಂದ್ರ ಸಿಂಗ್ ಧೋನಿ– ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ. ಐಪಿಎಲ್ ನಲ್ಲಿ ಧೋನಿ ನಾಯಕನಾಗಿ 160 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 99 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಒಂದು ಪಂದ್ಯ ಗೆದ್ರೆ ಧೋನಿ ಹೊಸ ದಾಖಲೆ ಬರೆಯಲಿದ್ದಾರೆ. ನಾಯಕನಾಗಿ ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಹಿರಿಮೆ ಇದೆ. ಧೋನಿಗೆ 10ರಲ್ಲಿ 9.5 ಅಂಕ
ರೋಹಿತ್ ಶರ್ಮಾ – ಮುಂಬೈ ಇಂಡಿಯನ್ಸ್ ತಂಡದ ಕಪ್ತಾನ. ನಾಯಕನಾಗಿ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಇದೆ. ನಾಯಕನಾಗಿ 60 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ತಾಳ್ಮೆಯಿಂದಲೇ ತಂಡವನ್ನು ಮುನ್ನಡೆಸುವ ರೋಹಿತ್ ಶರ್ಮಾಗೆ 10ರಲ್ಲಿ 9 ಅಂಕ
ದಿನೇಶ್ ಕಾರ್ತಿಕ್ – ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಾರಥಿ. 2018ರಲ್ಲಿ ದಿನೇಶ್ ಕಾರ್ತಿಕ್ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ರು. ಆದ್ರೆ 2019ರಲ್ಲಿ ಆ ರೀತಿಯ ಪ್ರದರ್ಶನ ನೀಡಿರಲಿಲ್ಲ. ಆದ್ರೂ ದಿನೇಶ್ ಕಾರ್ತಿಕ್ ಅವರ ಅವರು ನಿರ್ಧಾರಗಳು ಉತ್ತಮವಾದ ಮಟ್ಟದಲ್ಲೇ ಇದೆ. ಹೀಗಾಗಿ ದಿನೇಶ್ ಕಾರ್ತಿಕ್ ಅವರು ನಾಯಕನಾಗಿ 10ರಲ್ಲಿ 7.5 ಅಂಕ
ಡೇವಿಡ್ ವಾರ್ನರ್ – ಸನ್ ರೈಸರ್ಸ್ ಹೈದ್ರಾಬಾದ್. 2016ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಡೇವಿಡ್ ವಾರ್ನರ್. ಕಳೆದ ಋತುವಿನಲ್ಲಿ ವಾರ್ನರ್ ಕೇನ್ ವಿಲಿಯಮ್ಸನ್ ಅವರ ನಾಯಕತ್ವದಲ್ಲಿ ಆಡಿದ್ದರು. ಈ ಬಾರಿ ಡೇವಿಡ್ ವಾರ್ನರ್ಗೆ ಸನ್ ರೈಸರ್ಸ್ ತಂಡದ ಸಾರಥಿಯಾಗುವ ಅವಕಾಶ ಸಿಕ್ಕಿದೆ. ಡೇವಿಡ್ ವಾರ್ನರ್ಗೆ 10ರಲ್ಲಿ 7.5 ಅಂಕ
ಶ್ರೇಯಸ್ ಅಯ್ಯರ್ – ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ. ಕೂಲ್ ಆಗಿಯೇ ತಂಡವನ್ನು ಮುನ್ನಡೆಸುವ ಶ್ರೇಯಸ್ ಅಯ್ಯರ್ಗೆ ರಿಕಿ ಪಾಂಟಿAಗ್, ಗಂಗೂಲಿ ಮತ್ತು ಕೈಫ್ ಅವರ ಬೆಂಬಲವಿದೆ. 2018ರ ಐಪಿಎಲ್ ಟೂರ್ನಿಯ ಮಧ್ಯದಲ್ಲಿ ಶ್ರೇಯಸ್ ಅಯ್ಯರ್ ಗೆ ತಂಡದ ನಾಯಕನಾಗುವ ಅವಕಾಶ ಸಿಕ್ಕಿತ್ತು. ಶ್ರೇಯಸ್ ಅಯ್ಯರ್ಗೆ 10ರಲ್ಲಿ ಏಳು ಅಂಕ
ವಿರಾಟ್ ಕೊಹ್ಲಿ– ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ. ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗುತ್ತಿರುವ ವಿರಾಟ್ ಕೊಹ್ಲಿ ಆರ್ಸಿಬಿ ನಾಯಕನಾಗಿ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆರ್ಸಿಬಿ ತಂಡದ ಬೆಸ್ಟ್ ಬ್ಯಾಟ್ಸ್ ಮೆನ್ ಆಗಿದ್ರೂ ಬೆಸ್ಟ್ ಕ್ಯಾಪ್ಟನ್ ಆಗಿಲ್ಲ. ವಿರಾಟ್ ಕೊಹ್ಲಿಗೆ 10ರಲ್ಲಿ 6.5 ಅಂಕ
https://www.youtube.com/watch?v=_st-YDZlTCE
ಸ್ಟೀವನ್ ಸ್ಮಿತ್ – ರಾಜಸ್ತಾನ ರಾಯಲ್ಸ್ ತಂಡದ ನಾಯಕ ಐಪಿಎಲ್ ನಲ್ಲಿ ಸ್ಟೀವನ್ ಸ್ಮಿತ್ ನಾಯಕನಾಗಿ ಗಮನ ಸೆಳೆದಿದ್ದಾರೆ. ಶೇ.65.5ರಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 29 ಪಂದ್ಯಗಳಲ್ಲಿ ನಾಯಕನಾಗಿರುವ ಸ್ಟೀವನ್ ಸ್ಮಿತ್ ಸೋತಿದ್ದು ಬರೀ 9 ಪಂದ್ಯಗಳಲ್ಲಿ ಮಾತ್ರ. ಸ್ಟೀವನ್ ಸ್ಮಿತ್ ಮೂರು ಫ್ರಾಂಚೈಸಿಗಳಿಗೆ ನಾಯಕನಾಗಿದ್ದರು. ಸ್ಮಿತ್ಗೆ 10ರಲ್ಲಿ 6.5 ಅಂಕ
ಕೆ.ಎಲ್. ರಾಹುಲ್ – ಪಂಜಾಬ್ ಕಿಂಗ್ಸ್ ತಂಡದ ನೂತನ ಸಾರಥಿ. ಈ ಬಾರಿಯ ಐಪಿಎಲ್ ನಲ್ಲಿ ಎಲ್ಲರ ಕಣ್ಣು ಕೆ.ಎಲ್. ರಾಹುಲ್ ಮೇಲಿದೆ. ಪಂಜಾಬ್ ಕಿಂಗ್ಸ್ ತಂಡದ ನೂತನ ಸಾರಥಿಯಾಗಿ ಯಾವ ರೀತಿ ತಂಡವನ್ನು ಮುನ್ನಡೆಸುತ್ತಾರೆ ಅನ್ನೋದನ್ನು ನೋಡಬೇಕು,. ಹಾಗೇ ಕೆ.ಎಲ್. ರಾಹುಲ್ ಅವರಿಗೆ ಕೋಚ್ ಅನಿಲ್ ಕುಂಬ್ಲೆ ಅವರ ಶ್ರೀ ರಕ್ಷೆ ಇದೆ.