ಬೆಂಗಳೂರು : ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಚಾರವಲ್ಲ. ಆದರೆ, ಗೆದ್ದ ನಂತರ ಶಿಕ್ಷಕರನ್ನು ಸಂಭಾಳಿಸುವುದು ಬಹುಕಷ್ಟ. ಈ ಜಗತ್ತಿನಲ್ಲಿ ಇಂತಹ ಸವಾಲು ಯಾರಿಗೂ ಬೇಡ. ಪ್ರೀತಿ ಕಡಿಮೆಯಾದರೂ ತೊಂದರೆ, ಪ್ರೀತಿ ಹೆಚ್ಚಾದರೂ ಕಷ್ಟ! ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ ಎಸ್. ಹೊರಟ್ಟಿ ( Basavaraj Horatti ) ಹೇಳಿದ್ದಾರೆ.
ಭಾರತ ಯಾತ್ರಾ ಕೇಂದ್ರ ಹಾಗೂ ಲೋಕನಾಯಕ ಜೆ.ಪಿ. ವಿಚಾರ ವೇದಿಕೆ-ಕರ್ನಾಟಕ ಸಂಯುಕ್ತವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ‘ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 118ನೇ ಜನ್ಮದಿನ’ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಭಾರತದಲ್ಲೇ ದಾಖಲೆ ಸೃಷ್ಟಿಸಿ 40 ವರ್ಷಗಳನ್ನು ಪೂರೈಸಿರುವ ಬಸವರಾಜ ಎಸ್. ಹೊರಟ್ಟಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಅಂದಿನ ಕಾಲದಲ್ಲಿ ಚುನಾವಣೆಯ ಗೆಲ್ಲುವು ದೊಡ್ಡದಾಗಿರಲಿಲ್ಲ. ಆದರೆ, ಗೆದ್ದ ನಂತರ ಶಿಕ್ಷಕರನ್ನು ಸಂಭಾಳಿಸುವುದು ಸವಾಲಾಗಿತ್ತು.
ನಿಷ್ಠೆಯಿಂದ ಕಾರ್ಯಪ್ರವೃತ್ತರಾಗಿದ್ದರೂ ಕೆಲವೊಮ್ಮೆ ನಮಗೂ ಮಿತಿಗಳಿರುತ್ತವೆ. ಆಗ ತಮ್ಮ ಕೆಲಸ ಆಗದವರಿಂದ ದೂಷಣೆಯನ್ನೂ ಎದುರಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : ಕೊರೊನಾ ವೈಫಲ್ಯ ಕಳಂಕ: ಅಸಮಾಧಾನ ಹೊರಹಾಕಿದ್ರಾ ಸಚಿವ ಶ್ರೀರಾಮುಲು..!
ಕವಿ ಪ್ರೊ. ಸಿದ್ದಲಿಂಗಯ್ಯ ಮಾತನಾಡಿ, ಜೀವನದುದ್ದಕ್ಕೂ ಹೊರಟ್ಟಿಯವರು ಶಿಕ್ಷಕರ ಏಳಿಗೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ.
ಗ್ರ್ಯಾಚುಟಿ, ಮುಂಬಡ್ತಿ, ಅರೆಕಾಲಿಕ ಉಪನ್ಯಾಸಕರನ್ನು ಕಾಯಂಗೊಳಿಸುವುದು, ಕ್ರೀಡಾ ತರಬೇತುದಾರರಿಗೆ ಯುಜಿಸಿ ಶ್ರೇಣಿ ವೇತನ, ಸಾಮೂಹಿಕ ವಿಮೆ,
ಶಿಕ್ಷಕರ ನೇಮಕಾತಿಗೆ ಹಿಂದಿದ್ದ ವಯೋಮಿತಿ ಸಡಿಲಿಕೆ (40ರಿಂದ 45ಕ್ಕೆ ಏರಿಕೆ) ಹೀಗೆ ಶಿಕ್ಷಕ ವೃಂದಕ್ಕೆ ದೊರೆತ ಹಲವಾರು ಸೌಲಭ್ಯಗಳ ಹಿಂದೆ ಬಸವರಾಜ ಹೊರಟ್ಟಿ ಅವರ ಶ್ರಮವಿದೆ.
ಅವರೊಬ್ಬ ಮಾತೃ ಹೃದಯಿ. ಹೊರಟ್ಟಿಯವರ ವರ್ಷಗಳ ಸುದೀರ್ಘ ಸೇವೆ ಅವಿಸ್ಮರಣೀಯ ಎಂದು ಬಣ್ಣಿಸಿದರು.
ಈ ವೇಳೆ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್. ಶಂಕರ್, ಮಾಜಿ ಶಾಸಕ ಡಾ.ಎಂ.ಪಿ. ನಾಡಗೌಡ, ಜೆಡಿಎಸ್ ಮುಖಂಡ ಮಧುಬಂಗಾರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಆರ್. ಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಅಹಿಂದ ಸಂಘಟನೆ ರೂವಾರಿ ಆಗಿದ್ದ ಮಾಜಿ ಶಾಸಕ ಕೆ. ಮಲ್ಲಪ್ಪ ನಿಧನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel