ಎಂಎಸ್ ಡಿ ದಾಖಲೆ ಮುರಿದ ಜ್ಯೂ.ಧೋನಿ
ಹೈದರಾಬಾದ್ : ಬ್ರಿಸ್ಬೇನ್‍ನಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿಯ 4ನೇ ಪಂದ್ಯದ ಐದನೇ ದಿನದಂದು ಭಾರತದ ಯುವ ಆಟಗಾರ ರಿಷಭ್ ಪಂತ್ ಹೊಸ ದಾಖಲೆ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.
ಈ ಮೂಲಕ ವೇಗವಾಗಿ 1,000 ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದಾರೆ.
ರಿಷಬ್ ಪಂತ್ 27 ಇನ್ನಿಂಗ್ಸ್ ಗಳಲ್ಲಿ 1,000 ರನ್ ಗಳನ್ನು ಗಳಿಸಿದ್ದಾರೆ.
ಪಂತ್ ಗೂ ಮುನ್ನ ಭಾರತದ ಪರ ವಿಕೆಟ್ ಕೀಪರ್ ಆಗಿ ಟೆಸ್ಟ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ದಾಖಲೆ ಧೋನಿ ಹೆಸರಿನಲ್ಲಿತ್ತು. ಎಂ ಎಸ್ ಡಿ 32 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ.
ಮೂರನೇ ಸ್ಥಾನದಲ್ಲಿ ಫಾರೂಕ್ ಇಂಜಿನಿಯರ್ 36 ಇನ್ನಿಂಗ್ಸ್ ಮತ್ತು ವೃದ್ಧಿಮಾನ್ ಸಹಾ 37 ಇನ್ನಿಂಗ್ಸ್ ಗಳಲಿ 1,000 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









