ನವದೆಹಲಿ: ಕಾನೂನಿನ ಮುಂದೆ ಪ್ರಧಾನಿಯಾಗಲಿ, ಸಾಮಾನ್ಯ ಜನರಾಗಲೀ ಯಾರೂ ಹೊರತಲ್ಲ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಾವೀಗ ಲಾಕ್‍ಡೌನ್ ನಂತರ ಅನ್‍ಲಾಕ್-2 ಪ್ರವೇಶ ಮಾಡಿದ್ದೇವೆ. ಇದೀಗ ದೇಶಾದ್ಯಂತ ಮುಂಗಾರು ಪ್ರವೇಶವಾಗಿ ಉತ್ತಮ ಮಳೆ ಸುರಿಯುತ್ತಿದೆ. ಕೆಲ ತಿಂಗಳ ನಂತರ ಚಳಿಗಾಲ ಬರಲಿದ. ಈ ಅವಧಿಯಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಸಾಮಾನ್ಯವಾಗಿದೆ. ಕೊರೊನಾ ವಿರುದ್ಧದದ ನಮ್ಮ ಹೋರಾಟ ಸರಿ ದಾರಿಯಲ್ಲಿದೆ. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂದು ಕರೆ ನೀಡಿದರು.
ಅನ್‍ಲಾಕ್-1ರ ನಂತರ ಕಂಟೈನ್‍ಮೆಂಟ್ ಝೋನ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕೆಲವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂಬ ಕಾನೂನೂ ಜಾರಿಯಲ್ಲಿದೆ. ಈ ಕಾಯ್ದೆಯಿಂದ ಪ್ರಧಾನಿಯಾದ ನಾನು ಕೂಡ ಹೊರತಲ್ಲ. ಮನೆಯಿಂದ ಹೊರಗೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಲೇ ಬೇಕು. ಇಲ್ಲವಾದರೆ ಕಠಿಣಕ್ರಮ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ಅನ್‍ಲಾಕ್-1 ನಂತರ ಜನರ ಓಡಾಟ ಹೆಚ್ಚಿದ್ದು, ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಡಲಾಗುತ್ತಿದೆ. ಕೊರೊನಾ ಸೋಂಕು ಸಮುದಾಯದ ಹಂತಕ್ಕೆ ಹರಡುತ್ತಿದ್ದರೂ ಮಾಸ್ಕ್ ಧರಿಸದೇ ಇರುವುದು ಪ್ರಧಾನಿ ಮೋದಿ ಅವರ ಬೇಸರಕ್ಕೆ ಕಾರಣವಾಗಿದೆ.
ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ
ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...








